ಬಹುಭಾಷಾ ತಾರೆ, ಸಕಲಕಲಾವಲ್ಲಭ ಕಮಲ್ ಹಾಸನ್ ಸುಪುತ್ರಿ ಸದಾ ಒಂದಲ್ಲಾ ಒಂದು ವಿಷಯದ ಮೂಲಕ ಸುದ್ದಿಯಲ್ಲಿ ಇರುತ್ತಾರೆ. ಈಗ ಯಾವುದೋ ಸಿನಿಮಾ ವಿಷಯಕ್ಕೆ ಅಲ್ಲ.. ವೈಯಕ್ತಿಕ ವಿಚಾರ ಸುದ್ದಿಯಿಂದ ಸದ್ದು ಮಾಡ್ತಿದ್ದಾರೆ.
ಶ್ರುತಿ ಸಿನಿಮಾ ರೀಲಿಸ್ ಕಂಡು ಸುಮಾರು ಮೂರು ವರ್ಷಗಳೇ ಆಗಿವೆ. ಕಾಟಮರಾಯಡು ಚಿತ್ರದ ಮೂಲಕ ಬಿಗ್ ಸ್ಕ್ರೀನ್ನಲ್ಲಿ ಮೋಡಿ ಮಾಡಿದ್ರು. ಕಾಟಮರಾಯಡು ಚಿತ್ರದಲ್ಲಿ ದರ್ಶನ ನೀಡಿದ್ದ ಶ್ರುತಿ ಆ ನಂತರ ಯಾವ ಸಿನಿಮಾಗಳು ತೆರೆಗೆ ಬರಲಿಲ್ಲ. ಇದು ಅವರ ಅಭಿಮಾನಿಗಳಿ ತುಂಬಾ ಬೇಸರ ತಂದಿದೆ. ಆದ್ರೆ ಯಾವಾಗ ಶ್ರುತಿ ಸಿನಿಮಾದಿಂದ ಕೊಂಚ ದೂರ ಉಳಿದುಕೊಂಡಿದ್ದನ್ನು ನೋಡಿ ಸಧ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿದ್ವು. ಅದು ಅಲ್ಲದೆ ಶ್ರುತಿ ಕೆಲವು ವರ್ಷಗಳಿಂದ ಇಟಲಿ ಮೂಲದ ಮೈಖೇಲ್ ಕೊರ್ಸೇಲ್ ಜೊತೆ ಲವ್ ಇನ್ ರಿಲೇಶನ್ ಶಿಪ್ ನಲ್ಲಿದ್ರು. ಇಬ್ಬರು ಸಧ್ಯದಲ್ಲೇ ಮದುವೆ ಆಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು.
ಮೈಖೇಲ್ ಗೋಸ್ಕರ ಶ್ರುತಿ ಆಗಾಗ ಇಟಲಿಗೂ ಹೋಗಿ ಬರುತ್ತಿದ್ರು. ಇವರಿಬ್ಬರ ಸ್ನೇಹ ನೋಡಿ ಅನೇಕರು ಈ ವರ್ಷವೆ ಮದುವೆಯಾಗಲಿದ್ದಾರೆ ಎಂದು ಹೇಳಲಾಗ್ತಿತ್ತು. ಆದ್ರೀಗ ಇಬ್ಬರ ಪ್ರೀತಿ ಮುರಿದು ಬಿದ್ದಿದೆ ಎನ್ನುವ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ಈ ಬಗ್ಗೆ ಸ್ವತಃ ಮೈಖೇಲ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ‘ಜೀವನವು ನಮ್ಮನ್ನ ವಿರುದ್ಧ ಮಾರ್ಗದಲ್ಲಿ ತಂದು ನಿಲ್ಲಿಸಿದೆ. ದುರದೃಷ್ಟವಶಾತ್ ನಾವು ಒಂಟಿ ಮಾರ್ಗದಲ್ಲಿ ನಡೆಯಬೇಕಾಗಿರೋ ಅನಿವಾರ್ಯತೆ ಇದೆ. ಆದ್ರೆ ಶ್ರುತಿ ಎಂದಿಗೂ ನನ್ನ ಉತ್ತಮ ಸ್ನೇಹಿತೆಯಾಗಿ ಇರುತ್ತಾರೆ. ಯಾವಾಗಲು ನಾನು ಕೃತಜ್ಞನಾಗಿರುತ್ತೇನೆ” ಎಂದು ಬರೆದುಕೊಂಡು ಇಬ್ಬರ ಫೋಟೋವನ್ನು ಮೈಖೇಲ್ ಶೇರ್ ಮಾಡಿದ್ದಾರೆ
ಈ ಹಿಂದೆಯೇ ಸಂದರ್ಶನವೊಂದರಲ್ಲಿ ಶ್ರುತಿ ಮದುವೆ ಬಗ್ಗೆ ಹೇಳಿಕೊಂಡಿದ್ರು. ನಾನು ಮದುವೆ ಆಗುವುದಿಲ್ಲ. ಮದುವೆ ಆಗಬೇಕು ಅಂತ ಯಾವಾಗಲು ಅನಿಸಿಲ್ಲ. ಮದುವೆ ಆಗಬೇಕು ಅಂತ ಅನಿಸಿದಾಗ ಆಗುತ್ತೇನೆ ಎಂದು ಹೇಳುವ ಮೂಲಕ ಮೈಖೇಲ್ ಜೊತೆಗಿನ ಸಂಬಂಧ ಮುರಿದು ಬಿದ್ದ ಸೂಚನೆಯನ್ನು ನೀಡಿದ್ರು. ಸದ್ಯ ಶ್ರುತಿ ಈಗ ವಿಜಯ್ ಸೇತುಪತಿ ಜೊತೆ ಅಭಿನಯಿಸುತ್ತಿದ್ದಾರೆ. ಜೊತೆಗೆ ಹಿಂದಿ ಸಿನಿಮಾದಲ್ಲು ಬ್ಯುಸಿಯಾಗಿದ್ದಾರೆ. ಸುಮಾರು ವರ್ಷಗಳ ಬಳಿಕ ಮತ್ತೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿರುವ ಕಮಲ್ ಪುತ್ರಿಯನ್ನು ನೋಡಲು ಚಿತ್ರಪ್ರಿಯರು ಕಾತುರರಾಗಿದ್ದಾರೆ.
ಲವ್ ಸ್ಟೋರಿಗೆ ಬ್ರೇಕ್ ಹಾಕಿದ ಸಕಲಕಲಾವಲ್ಲಭನ ಸುಪುತ್ರಿ
Date: