ಲಸಿಕೆ ನೆಪ, ರಾತ್ರೋರಾತ್ರಿ 85 ಮಹಿಳೆಯರಿಗೆ ಆಗಿದ್ದೇನು?

Date:

ಕೊರೊನಾ ಲಸಿಕೆ ನೆಪಹೇಳಿ ರಾತ್ರೋರಾತ್ರಿ 85 ಮಹಿಳೆಯರನ್ನು ಸಾಗಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ತಾಲೂಕಿನ ಮುಲ್ಕಿಯ ಲಿಂಗಪ್ಪಯ್ಯ ಕಾಡು ಎಂಬಲ್ಲಿ ನಡೆದಿದೆ.
ಒಂದೇ ಗ್ರಾಮದಿಂದ ಬಸ್‌ನಲ್ಲಿ 85 ಮಹಿಳೆಯರ ಸಾಗಾಟವಾಗಿದ್ದು, ಸ್ಥಳೀಯರು ಅನುಮಾನ ಬಂದು ಪ್ರಶ್ನಿಸಿದ ಸಂಧರ್ಭದಲ್ಲಿ, ಮಂಗಳೂರು ಹೊರವಲಯದ ಖಾಸಗಿ ಆಸ್ಪತ್ರೆಗೆ ಸಾಗಾಟ ಮಾಡುತ್ತಿರುವ ಬಗ್ಗೆ ಬೆಳಕಿಗೆ ಬಂದಿದೆ.
ದೇರಳಕಟ್ಟೆಯ ಕಣಚೂರು ಕಾಲೇಜಿನ ಬಸ್‌ನಲ್ಲಿ ಆಸ್ಪತ್ರೆ ಸಿಬ್ಬಂದಿಗಳು ಮಹಿಳೆಯರನ್ನು ಸಾಗಾಟ ಮಾಡಿದ್ದು, ಬೇರೆ ಗ್ರಾಮಸ್ಥರು ಬಸ್ ತಡೆದು ಪ್ರಶ್ನೆ ಮಾಡಿದಾಗ ಸಿಬ್ಬಂದಿಗಳು ತಬ್ಬಿಬ್ಬಾಗಿದ್ದಾರೆ.


ಮೊದಲು ವಾಕ್ಸಿನೇಷನ್ ಅಂತಾ ಕಾರಣ ಕೊಟ್ಟ ಸಿಬ್ಬಂದಿಗಳು, ಆನಂತರ ತಡರಾತ್ರಿ ಯಾವ ವ್ಯಾಕ್ಸಿನ್ ಕೊಡುತ್ತೀರಿ ಅಂತಾ ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಇದಕ್ಕೆ ಆಸ್ಪತ್ರೆಯ ಮ್ಯಾನೇಜರ್ ಸೂಚನೆಯಂತೆ ಮಹಿಳೆಯರನ್ನು ಕರೆದುಕೊಂಡು ಹೋಗಿ, ನಾಳೆ ಬೆಳಗ್ಗೆ ಲಸಿಕೆ ಹಾಕುವುದಾಗಿ ಸಮಾಜಾಯಿಷಿ ನೀಡಿದ್ದಾರೆ. ಬಸ್‌ನಲ್ಲಿದ್ದ ಚಾಲಕ ಪ್ರವೀಣ್, ಆಸ್ಪತ್ರೆ ಮ್ಯಾನೇಜರ್ ನವಾಜ್‌ಗೆ ಸ್ಥಳೀಯರು ತೀವ್ರ ‌ತರಾಟೆ ತೆಗೆದುಕೊಂಡು ಮುಲ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.


ಆಸ್ಪತ್ರೆಯವರು ಮಹಿಳೆಯರನ್ನು ಸಾಗಾಟ ಮಾಡಿರುವ ಕಾರಣ ಇನ್ನೂ ನಿಗೂಢವಾಗಿದ್ದು, ಅಧಿಕಾರಿಗಳು ಆಸ್ಪತ್ರೆಗೆ ಬರುವ ಸಂದರ್ಭದಲ್ಲಿ ಬೆಡ್ ಭರ್ತಿ ಇದೆ ಎಂಬುದನ್ನು ತೋರಿಸಲು ಮಹಿಳೆಯರನ್ನು ಕರೆದುಕೊಂಡು ಹೋಗಲಾಗಿದೆ ಎಂಬ ಅನುಮಾನವೂ ಸ್ಥಳೀಯರಲ್ಲಿದೆ. ಕಣಚೂರು ಆಸ್ಪತ್ರೆ ವಿರುದ್ಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share post:

Subscribe

spot_imgspot_img

Popular

More like this
Related

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿಬೆಂಗಳೂರು: ನಗರದ...

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ ಸಿಸಿಬಿಗೆ ದೂರು

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ...

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ ಕಷ್ಟ ತಪ್ಪಿದ್ದಲ್ಲ!

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ...

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..?

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..? ಬೆಂಗಳೂರು:...