ಲಸಿಕೆ ಹಾಕಿಸಿಕೊಳ್ಳಲು ಹೋದರೆ ಬಲವಂತದ ಪರೀಕ್ಷೆ

0
48

ಬೆಂಗಳೂರು ನಗರದಲ್ಲಿ ಕೋವಿಡ್ 2ನೇ ಡೋಸ್ ಲಸಿಕೆ ಪಡೆಯಲು ಹೋದ ಜನರಿಗೆ ಬಲವಂತದಿಂದ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ನಗರದಲ್ಲಿ ಪ್ರತಿದಿನ 52 ರಿಂದ 63 ಸಾವಿರದ ತನಕ ಕೋವಿಡ್ ಪರೀಕ್ಷೆಗಳನ್ನು ಮಾಡಲಾಗುತ್ತಿದೆ.

ನಗರದ ಕೆಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ಪಡೆಯಲು ಆಗಮಿಸಿದ ವ್ಯಕ್ತಿಗಳ ಸ್ವ್ಯಾಬ್ ಸಂಗ್ರಹ ಮಾಡಲಾಗುತ್ತಿದೆ. ಇದರಿಂದಾಗಿಯೇ ನಗರದಲ್ಲಿ ಹೆಚ್ಚು ಸಂಖ್ಯೆಯ ಪರೀಕ್ಷೆಗಳನ್ನು ತೋರಿಸಲಾಗುತ್ತಿದೆ ಎಂಬುದು ದೂರು.

 

ಬಿಬಿಎಂಪಿ ಪೂರ್ವ ವಲಯದಲ್ಲಿ ಕೋವಿಡ್ ಪರೀಕ್ಷೆಗೆ ಒಳಪಡುವ 10 ಜನರಲ್ಲಿ ಮೂವರು ಲಸಿಕೆ ಪಡೆಯಲು ಬಂದವರು. ಶಾಂತಿನಗರದ ಪಿಎಚ್‌ಸಿಯಲ್ಲಿ ಲಸಿಕೆ ಪಡೆಯಲು ಹೋಗಿದ್ದ ಐವರು ಸದಸ್ಯರ ಕುಟುಂಬವೂ ಈ ಕುರಿತು ತಮ್ಮ ಅನುಭವ ಹಂಚಿಕೊಂಡಿದೆ. ಕೋವಿಡ್ ಸೋಂಕು ಇದ್ದರೆ ಅಂತಹ ವ್ಯಕ್ತಿಗೆ ಲಸಿಕೆ ನೀಡಬಾರದು. ಆದರೆ ಕೆಲವು ಪಿಎಚ್‌ಸಿಗಳಲ್ಲಿ ಸ್ವ್ಯಾಬ್ ಸಂಗ್ರಹ ಮಾಡಿ ಅದರ ವರದಿ ಬರುವುದಕ್ಕೂ ಕಾಯದೇ ಲಸಿಕೆ ನೀಡಲಾಗುತ್ತಿದೆ. ಇದರಿಂದ ಆಗುವ ಉಪಯೋಗವೇನು? ಎಂದು ಜನರು ಪ್ರಶ್ನಿಸಿದ್ದಾರೆ.

ಐಸಿಎಂಆರ್ ಮಾರ್ಗಸೂಚಿ ಪ್ರಕಾರ ಕೋವಿಡ್ ಸೋಂಕು ತಗುಲಿದ ವ್ಯಕ್ತಿ 3 ತಿಂಗಳ ತನಕ ಕೋವಿಡ್ ಲಸಿಕೆ ಪಡೆಯುವಂತಿಲ್ಲ. ಆದರೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಣೆ ಮಾಡುವ ತಂಡಗಳು ಈ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಆರೋಪ ಮಾಡಲಾಗುತ್ತಿದೆ.

 

 

LEAVE A REPLY

Please enter your comment!
Please enter your name here