ಲಾಕ್‌ಡೌನ್ ಮೇ 10ಕ್ಕೆ ಮುಗಿಯಲ್ಲ! ಹುಷಾರ್

0
54

ಲಾಕ್‌ಡೌನ್.. ಈ ಪದ ಸದ್ಯಕ್ಕೆ ನಮ್ಮೆಲ್ಲರಿಂದ ದೂರ ಆಗುವಂಥ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಕಳೆದ ವರ್ಷ ತಿಂಗಳುಗಟ್ಟಲೆ ಲಾಕ್ ಡೌನ್ ನಲ್ಲಿಯೇ ಜೀವನ ಸಾಗಿಸುವಂತಾಗಿತ್ತು. ಅಬ್ಬ ಎಲ್ಲಾ ಸರಿ ಹೋಯ್ತು ಮತ್ತೆ ಎಂದಿನಂತೆ ಜೀವನ ಮಾಡೋಣ ಎಂದುಕೊಂಡಿದ್ದ ಜನರಿಗೆ ಇದೀಗ ಮತ್ತೆ ಲಾಕ್ ಡೌನ್ ಬಿಸಿ ಮುಟ್ಟಿದೆ. ದೇಶದಾದ್ಯಂತ ಕೊರೋನಾವೈರಸ್ ಎರಡನೇ ಅಲೆ ಜೋರಾಗಿದ್ದು ಕರ್ನಾಟಕದಲ್ಲಿ 14 ದಿನಗಳ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.

 

ಮೇ 10ನೇ ತಾರೀಕಿನವರೆಗೂ ಲಾಕ್ ಡೌನ್ ಇರಲಿದೆ ಎಂದು ಸರ್ಕಾರ ಘೋಷಣೆ ಮಾಡಿದೆ. ಹೆಚ್ಚುತ್ತಿರುವ ಕೊರೋನಾವೈರಸ್ ಕಡಿಮೆಯಾಗಲಿ ಎಂಬ ಉದ್ದೇಶದಿಂದ ಈ ಲಾಕ್ ಡೌನ್ ಅನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ ಆದರೆ ಕೊರೋನಾವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆಯೇ ಹೊರತು ಯಾವುದೇ ಕಾರಣಕ್ಕೂ ಕಡಿಮೆಯಾಗುತ್ತಿಲ್ಲ.

 

 

ಜನ ಓಡಾಡುವ ಕಾರಣದಿಂದಾಗಿ ಕೊರೋನಾವೈರಸ್ ಹರಡುತ್ತದೆ ಎಂಬ ಉದ್ದೇಶದಿಂದ ಜನರು ಮನೆಯಲ್ಲಿ ಇರಲಿ ಹೀಗಾಗಿ ಕೊರೋನಾವೈರಸ್ ತಪ್ಪುವ ಸಾಧ್ಯತೆ ಕಡಿಮೆಯಾಗುತ್ತದೆ ಎಂದು ಊಹಿಸಲಾಗಿತ್ತು. ಆದರೆ ಲಾಕ್ ಡೌನ್ ಘೋಷಣೆಯಾದ ಮೇಲೆ ಆಗಿದ್ದೇ ಬೇರೆ ಬೆಂಗಳೂರಿನ ಹಲವಾರು ಜನರು ತಮ್ಮ ಹಳ್ಳಿಗಳಿಗೆ ಹೋಗಿದ್ದಾರೆ. ಹೀಗೆ ಬೆಂಗಳೂರಿನಿಂದ ಹಳ್ಳಿಗಳಿಗೆ ಹೋದಾ ಅದೆಷ್ಟು ಜನರಲ್ಲಿ ಕೊರೋನಾವೈರಸ್ ಸೋಂಕು ಇತ್ತೋ ಏನೋ?

 

 

 

ಕೊರೋನಾವೈರಸ್ ಹರಡಬಾರದು ಎಂದು ಲಾಕ್ ಡೌನ್ ಮಾಡಿದರೆ ಬೆಂಗಳೂರಿನಿಂದ ವಿವಿಧ ಹಳ್ಳಿಗಳಿಗೆ ಕೊರೊನಾ ವೈರಸ್ ಹರಡಿದೆ. ಬೆಂಗಳೂರಿನಿಂದ ತಮ್ಮ ಹಳ್ಳಿಗಳಿಗೆ ಹಿಂತಿರುಗಿದ ಕೆಲವೊಂದಷ್ಟು ಜನರಲ್ಲಿ ಕೊರೋನಾವೈರಸ್ ಸೋಂಕು ಇತ್ತು ಎಂಬ ಮಾಹಿತಿ ಲಭ್ಯವಾಗಿದ್ದು ಕೊರೋನಾವೈರಸ್ ಹಳ್ಳಿಗಳಿಗೂ ಹಬ್ಬುವ ಸಾಧ್ಯತೆ ಇದೆ. ಹೀಗಾಗಿ ಲಾಕ್ ಡೌನ್ ಮೇ 10ಕ್ಕೆ ಮುಗಿಯುವ ಯಾವುದೇ ಲಕ್ಷಣಗಳು ಸದ್ಯಕ್ಕೆ ಕಾಣಿಸುತ್ತಿಲ್ಲ ಯಾವುದಕ್ಕೂ ಜನರು ಮತ್ತೊಂದು ಲಾಕ್ ಡೌನ್ ಎದುರಿಸಲು ಸಿದ್ಧರಾಗುವುದು ಒಳ್ಳೆಯದು.

 

LEAVE A REPLY

Please enter your comment!
Please enter your name here