ಲಾಕ್ ಡೌನ್ ನಲ್ಲಿ ರೋರಿಂಗ್ ಸ್ಟಾರ್ ಶ್ರೀಮುರುಳಿಯಿಂದ ಜೀವನ ಪಾಠ …!

Date:

ಲಾಕ್ ಡೌನ್ ನಲ್ಲಿ ರೋರಿಂಗ್ ಸ್ಟಾರ್ ಶ್ರೀಮುರುಳಿಯಿಂದ ಜೀವನ ಪಾಠ …!

ಹೆಮ್ಮಾರಿ ಕೊರೋನಾ ಅಟ್ಟಹಾಸದ ಪರಿಣಾಮ ಇಡೀ ದೇಶ ಲಾಕ್ ಡೌನ್ ಮೊರೆ ಹೋಗಿದೆ . ಎಲ್ಲಾ ಚಟುವಟಿಕೆಗಳು ಸ್ಥಗಿತಗೊಂಡಿವೆ . ಸಿನಿಮಾಗಳ ಚಿತ್ರೀಕರಣ ಕೂಡ ನಿಂತಿದೆ .

ಲಾಕ್ ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಇರುವ ಜನಪ್ರಿಯ ನಟ, ರೋರಿಂಗ್ ಸ್ಟಾರ್ ಶ್ರೀಮುರಳಿ ಜೀವನ ಪಾಠ ಮಾಡಿದ್ದಾರೆ . ಪತ್ರಿಕೆಯೊಂದಕ್ಕೆ ಮುರಳಿ ನೀಡಿದ ಸಾರಾಂಶ , ಅದರಲ್ಲಿ ಪ್ರಕಟವಾದ ಲೇಖನದ ಸಾರಾಂಶ ಇಲ್ಲಿದೆ .‌

ಕೊರೋನಾ ದೆಸೆಯಿಂದ ಎಲ್ಲರೂ ಮನೆಯಲ್ಲೇ ಉಳಿದುಕೊಳ್ಳಬೇಕಾದ ಈ ಸನ್ನಿವೇಶದಲ್ಲಿ ಯಾವ ರೀತಿ ಆತ್ಮವಿಮರ್ಶೆಗೆ ಕಾರಣವಾಗಿದೆ ಎಂಬ ಕುರಿತು ಶ್ರೀಮುರಳಿ ಹೇಳಿದ್ದಾರೆ .

” ಮನುಷ್ಯನ ಸ್ವಾರ್ಥ, ದುರಾಸೆಗೆ ಕೊರೋನಾ ತಿರುಗೇಟು ನೀಡಿದೆ . ಇದರಿಂದ ಮನುಷ್ಯ ಕೆಲವೊಂದು ಮುಖ್ಯವಾದ ಪಾಠ ಕಲಿಯಬೇಕಿದೆ . ಜೀವನ ಮೌಲ್ಯವನ್ನು ಅರಿಯಬೇಕು . ಕೊರೋನಾ ಜಗತ್ತಿಗೆ ಬಹಳ ದೊಡ್ಡ ಪಾಠ ಕಲಿಸಿದೆ . ಜೀವನದಲ್ಲಿ ಮನುಷ್ಯಗೆ ನಿಜಕ್ಕೂ ಅಗತ್ಯವಿರುವುದು ಏನು ಮತ್ತು ಎಷ್ಟು ಎನ್ನುವುದು ಇವತ್ತು ಜನರಿಗೆ ಅನುಭವಕ್ಕೆ ಬಂದಿದೆ ” ಎಂದು ಶ್ರೀ ಮುರಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ .

” ಶೇ 99 ರಷ್ಟು ಮಂದಿಗೆ ಇದು ಅರ್ಥವಾಗಿದೆ . ಅರ್ಥ ಆಗದವರಿಗೆ ನಾವು ಏನೂ ಹೇಳಲು ಸಾಧ್ಯವಿಲ್ಲ . ಇವತ್ತು ಯಾರಿಗೂ ಹಣ ಆಗಲಿ ಆಸ್ತಿಯಾಗಲಿ ಪ್ರಯೋಜನಕ್ಕೆ ಬರುತ್ತಿಲ್ಲ . ಮನುಷ್ಯಗೆ ಬೇಕಿರುವುದು ಮೂರು ಹೊತ್ತಿನ ಊಟ . ಅದು ಸಿಗದಿದ್ದಾಗ ಆಸ್ತಿ ತೆಗೆದುಕೊಂಡು ಏನ್ ಮಾಡ್ತಾನೆ ‌ಎಂದು ಪ್ರಶ್ನಿಸಿದ್ದಾರೆ .

ರೈತರು ನಮ್ಮ ಅನ್ನದಾತರು ಎಂಬುದು ಅರ್ಥವಾಗಬೇಕಿದೆ ಎಂದು ರೈತರ ಬಗ್ಗೆ ಹೆಮ್ಮಯಿಂದ ಮೆಚ್ಚುಗೆಯ ನುಡಿಗಳನ್ನಾಡಿದ್ದಾರೆ .

ಕರೋನಾದಿಂದ ಪ್ರಕೃತಿಗೆ ರಿಲ್ಯಾಕ್ಸ್ ಸಿಕ್ಕಂತಾಗಿದೆ . ಕೊರೋನಾ ಬಂದು ಅದರ ಕೆಲಸ ಮುಗಿಸಿಕೊಂಡು ಹೋಗ್ತಿದೆ . ಪ್ರಕೃತಿಯನ್ನು ರಕ್ಷಿಸುತ್ತಿದೆ . ಮನುಷ್ಯನನ್ನು ಬಗ್ಗು ಬಡೀತಾ ಇದೆ . ಅಹಂಕಾರದಲ್ಲಿದ್ದ ಮನುಷ್ಯನಿಗೆ ಪಾಠ ಕಲಿಸಿದೆ . ನಿನಗಿಂತ ನಾನು ದೊಡ್ಡವನೆಂದು ತಿಳಿಸಿದೆ .‌20 ನೇ ಶತಮಾನದವರೆಗೂ ನಾವು ಅಗೆದು ಅಗೆದು ಭೂಮಿತಾಯಿಯನ್ನು ದುರುಪಯೋಗ ಪಡಿಸಿಕೊಂಡಿದ್ದೇವೆ ‌
. ಗಿಡಗಳನ್ನು ನೆಡಬೇಕು, ಕಾಡನ್ನು ಸಂರಕ್ಷಿಸಬೇಕು ಎಂಬ ಅರಿವು ಬಂದಿದ್ದು‌ 21 ನೇ ಶತಮಾನದಲ್ಲಿ .‌ನಾವು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು ಎಂದು ರೋರಿಂಗ್ ಸ್ಟಾರ್ ಅರ್ಥಗರ್ಭಿತ ನುಡಿಗಳನ್ನಾಡಿದ್ದಾರೆ .

ಇನ್ನು ತಾನು ಮನೆಕೆಲಸ ಮಾಡುತ್ತಿದ್ದೇನೆ‌ . ಪತ್ನಿ , ಮಕ್ಕಳ ಜೊತೆ ಅಮೂಲ್ಯ ಕ್ಷಣಗಳನ್ನು ಕಲಿಯುತ್ತಿದ್ದೇನೆ . ಅಪ್ಪ ಅಮ್ಮನ ಆರೈಕೆ ಮಾಡುತ್ತಿದ್ದೇನೆ . ಜೀವನದಲ್ಲಿ ಹೀಗೂ ಇರಬಹುದು ಎಂದು ಗೊತ್ತಾಗಿದೆ ಎಂದಿದ್ದಾರೆ .

 

ಕೊರೋನಾ ಎಮರ್ಜೆನ್ಸಿ ನಡುವೆಯೇ ಸದ್ದಿಲ್ಲದೆ IPL ಆಯೋಜನೆಗಾಗಿ BCCI ಚಿಂತನೆ ..!

2011ರ ವರ್ಲ್ಡ್ ಕಪ್ ಗೆಲುವಿನ ಹಿಂದಿನ ಆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಧೋನಿ ಅಲ್ಲ …!

ಕೆಟ್ಟದಾಗಿ ಸ್ಪರ್ಶಿಸಿದ್ದ ಆ ಕ್ರಿಕೆಟರ್ ಗೆ ಪ್ರಿಯಾಮಣಿ ಕಪಾಳಮೋಕ್ಷ ಮಾಡಿದ್ದು ಸತ್ಯನಾ?

2011 ರ ವಿಶ್ವಕಪ್ ನಲ್ಲಿ ಸಚಿನ್ ಪುತ್ರ ಅರ್ಜುನ್ ಜೊತೆ ಮ್ಯಾಚ್ ನೋಡಿದ್ದ ಪೋರ ಇವತ್ತು ಟೀಮ್ ಇಂಡಿಯಾ ಆಟಗಾರ…!

ಇದು ಕಾಳಿಂಗ ಸರ್ಪಗಳ ರಾಜಧಾನಿ…! ಇದು ನಿಮಗೂ ಚಿರಪರಿಚಿತ ..!

ಮನಸ್ಸು ಗಾಯಗೊಳಿಸಿ ಕ್ಷಮೆ ಎಂಬ ಮುಲಾಮು ಹಚ್ಚುವುದಲ್ಲ…

ಧೋನಿ ನಾಯಕತ್ವದ ವಿಶ್ವ ಏಕದಿನ ತಂಡ ಪ್ರಕಟಿಸಿದ ವಾಸಿಮ್ ಜಾಫರ್ ..!

ದಿ ನ್ಯೂ ಇಂಡಿಯನ್ ಟೈಮ್ಸ್ ನಿಂದ ಹಿಮಾಲಯ ಡ್ರಗ್ಸ್ ಸಹಯೋಗದಲ್ಲಿ ಮಿತ್ರರಿಗೆ ಸ್ಯಾನಿಟೈಸರ್ ವಿತರಣೆ

ನೀವಿಬ್ಬರು ಹೀಗಿದ್ದರೆ ನಿಮ್ಮ ನಡುವೆ ಇರೋದು ಬರೀ ಫ್ರೆಂಡ್ಶಿಪ್ ಅಲ್ಲ…!

ಫ್ರೀ ಟಾಕ್ ಟೈಮ್ ಆಫರ್ , ವ್ಯಾಲಿಡಿಟಿ ವಿಸ್ತರಣೆ ನೀಡುತ್ತಿವೆ‌ ಟೆಲಿಕಾಂ ಕಂಪನಿಗಳು‌..!

ಬಾಸ್ ನೀನೇನು ಮಾಡ್ತಿದ್ಯಾ … ? ಸಿಕ್ಸರ್ ಸಿಡಿಸಿದ ಅಯ್ಯರ್ ಗೆ ದ್ರಾವಿಡ್ ಕೂಲ್ ವಾರ್ನಿಂಗ್ ..!

Share post:

Subscribe

spot_imgspot_img

Popular

More like this
Related

ಡಿ ಕೆ ಶಿವಕುಮಾರ್ ಬೆಂಗಳೂರು ಅಭಿವೃದ್ಧಿಯ ಹೊಣೆ ಹೊತ್ತಿರುವುದು ನಮ್ಮ ಪುಣ್ಯ: ನಾಗರಿಕರ ಪ್ರಶಂಸೆ

ಡಿ ಕೆ ಶಿವಕುಮಾರ್ ಬೆಂಗಳೂರು ಅಭಿವೃದ್ಧಿಯ ಹೊಣೆ ಹೊತ್ತಿರುವುದು ನಮ್ಮ ಪುಣ್ಯ:...

ಜಾರ್ಖಂಡ್‌ನಲ್ಲಿ ವೈದ್ಯಕೀಯ ನಿರ್ಲಕ್ಷ್ಯ — ರಕ್ತ ಪಡೆದ ಐದು ಮಕ್ಕಳಿಗೆ ಎಚ್‌ಐವಿ ಸೋಂಕು

ಜಾರ್ಖಂಡ್‌ನಲ್ಲಿ ವೈದ್ಯಕೀಯ ನಿರ್ಲಕ್ಷ್ಯ — ರಕ್ತ ಪಡೆದ ಐದು ಮಕ್ಕಳಿಗೆ ಎಚ್‌ಐವಿ...

ಬೆಳಿಗ್ಗೆ ಎದ್ದಾಕ್ಷಣ ಇವುಗಳನ್ನು ನೋಡಿದರೆ ಅದೃಷ್ಟ – ಆದರೆ ಈ ಕೆಲಸ ತಪ್ಪದೇ ಬಿಡಿ!

ಬೆಳಿಗ್ಗೆ ಎದ್ದಾಕ್ಷಣ ಇವುಗಳನ್ನು ನೋಡಿದರೆ ಅದೃಷ್ಟ – ಆದರೆ ಈ ಕೆಲಸ...

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ: HDK

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ:...