ಹೊಸ ಸಂಚಾರಿ ನಿಯಮದ ಪ್ರಕಾರ ದಂಡ ಹೆಚ್ಚಳವಾದ ನಂತರ ಯಾಕೋ ಏನೋ ಕೆಲ ಪೊಲೀಸ್ ಪೇದೆಗಳು ತಲೆಯಲ್ಲೇ ನಡೆಯಲು ಆರಂಭಿಸಿ ಬಿಟ್ಟಿದ್ದಾರೆ ಎಂದರೆ ತಪ್ಪಾಗಲಾರದು. ತಾವೇ ಸರ್ವಾಧಿಕಾರಿಗಳು ಎನ್ನುವ ರೀತಿ ಕೆಲ ಟ್ರಾಫಿಕ್ ಪೊಲೀಸ್ ಗಳು ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರ ಮೇಲೆ ದರ್ಪವನ್ನು ತೋರುತ್ತಿರುವುದು ನಿಮಗೆಲ್ಲ ಕಣ್ಣಿಗೆ ಬೀಳುತ್ತಲೇ ಇದೆ. ಇನ್ನು ಇಂತಹದ್ದೇ ಮತ್ತೊಂದು ಪ್ರಕರಣ ಇದೀಗ ಬೆಳಕಿಗೆ ಬಂದಿದ್ದು ಗೂಡ್ಸ್ ಲಾರಿಯನ್ನು ಹತ್ತಿದ್ದ ಟ್ರಾಫಿಕ್ ಪೊಲೀಸ್ ಪೇದೆ ವಾಹನ ಚಾಲಕನಿಗೆ ಅವಾಚ್ಯ ಶಬ್ಧಗಳಿಂದ ಬೈದಿದ್ದಾನೆ.
ಅಷ್ಟೇ ಅಲ್ಲದೆ ಆತ ವಾಹನ ಚಲಾಯಿಸುವ ವೇಳೆಯೇ ಸ್ಟೈರಿಂಗ್ ಕೈ ಹಾಕಿ ಸೈಡ್ ಗೆ ಹಾಕು ಎಂದು ಸಂಚಾರಿ ನಿಯಮ ಉಲ್ಲಂಘಿಸಿದ್ದಾನೆ , ತಾನೇ ವಾಹನವನ್ನು ಸ್ವಂತ ದುಡ್ಡಿನಿಂದ ಆ ಚಾಲಕನಿಗೆ ಕೊಡಿಸಿದವನ ರೀತಿ ಟ್ರಾಫಿಕ್ ಪೇದೆಯ ದವಲತ್ತು ಇತ್ತು. ಲಾರಿಯನ್ನು ಸೈಡ್ಗೆ ಹಾಕ್ತೀನಿ ಪಾರ್ಕಿಂಗ್ಗೆ ಜಾಗ ಸಿಗಲಿ ಎಂದು ಅಂದಿದ್ದಕ್ಕೆ ಲಾರಿಯ ಒಳಗಡೆನೇ ಕಾಲಿನಿಂದ ಚಾಲಕನಿಗೆ ಆ ಕೆಲಸಕ್ಕೆ ಬಾರದ ಟ್ರಾಫಿಕ್ ಪೇದೆ ಒದ್ದಿದ್ದಾನೆ. ಇನ್ನು ಒದ್ದಿದ್ದು ಮಾತ್ರವಲ್ಲದೆ ತೀರಾ ಅವಾಚ್ಯ ಶಬ್ದಗಳಿಂದ ಚಾಲಕನನ್ನು ನಿಂದಿಸಿದ್ದಾನೆ.
ಇನ್ನು ಆ ಟ್ರಾಫಿಕ್ ಪೇದೆಯ ದರ್ಪವನ್ನು ಸಂಪೂರ್ಣವಾಗಿ ವಿಡಿಯೋ ಮಾಡಿರುವ ಚಾಲಕ ಇದೀಗ ಸಾಮಾಜಿಕ ಜಾಲತಾಣಕ್ಕೆ ಆ ವಿಡಿಯೋವನ್ನು ಅಪ್ ಲೋಡ್ ಮಾಡಿದ್ದು ಸಾರ್ವಜನಿಕರು ಇಂಥವರನ್ನೆಲ್ಲ ಹೇಗೆ ಕೆಲಸಕ್ಕೆ ಸೇರಿಸಿಕೊಂಡಿದ್ದಾರೆ ಎಂದು ಪೊಲೀಸ್ ಇಲಾಖೆಯ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿದ್ದು ಕೂಡಲೇ ಆತನನ್ನು ಮನೆಗೆ ಕಳುಹಿಸಬೇಕೆಂದು ಆಗ್ರಹಿಸುತ್ತಿದ್ದಾರೆ.