ದೆಹಲಿ : ಲೋಕಸಭೆ ಸೀಟ್ ಸಂಖ್ಯೆ 543ರಿಂದ 1000ಕ್ಕೆ ಹೆಚ್ಚಿಸಬೇಕು ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮಾರಣಾರ್ಥವಾಗಿ, ದೆಹಲಿಯಲ್ಲಿ ನಡೆದ ಎರಡನೇ ವರ್ಷದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಣಬ್ ಮುಖರ್ಜಿ ಭಾರತ ಬೆಳೆಯುತ್ತಿದೆ, ಜನ ಸಂಖ್ಯೆಯಲ್ಲು ಮುನ್ನುಗ್ಗುತ್ತಿದೆ . ಇದಕ್ಕೆ ಪೂರಕವಾಗಿ ಲೋಕಸಭಾ ಕ್ಷೇತ್ರಗಳನ್ನು ಹೆಚ್ಚಿಸಬೇಕು ಅದಕ್ಕುನುಗುಣವಾಗಿ ರಾಜ್ಯಸಭಾ ಸಂಖ್ಯೆಗಳನ್ನು ಸಹ ಹೆಚ್ಚಿಸಬೇಕೆಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. 1977ರಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆಗಳು ಪರಿಷ್ಕೃತಗೊಂಡು ,ಈವರೆಗೂ ಅದನ್ನೆ ಮುಂದುವರಿಸಿಕೊಂಡು ಬರಲಾಗುತ್ತಿದೆ. ಸದ್ಯ ಸಂಸತ್ 1971 ಜನಗಣತಿ ಆಧಾರದ ಮೇರೆಗೆ ನಡೆಯುತ್ತಿದ್ದು ಅಂದಿನ ಜನಸಂಖ್ಯೆ 55 ಕೋಟಿ ಇತ್ತು ಎಂದು ಪ್ರಣಬ್ ಮುಖರ್ಜಿ ಹೇಳಿದ್ದಾರೆ .
ಲೋಕಸಭಾ ಸಂಖ್ಯಾ ಬಲ 543ರಿಂದ 1000ಕ್ಕೆ ಹೆಚ್ಚಿಸ್ಬೇಕು : ಪ್ರಣಬ್ ಮುಖರ್ಜಿ
Date: