ಲೋಕಾ ಚುನಾವಣೆಗೆ INDIA ಗೆ ಕಾದಿದೆ ಬಿಗ್ ಶಾಕ್ !

0
129

ಜೆಡಿಯು ನಾಯಕ ನಿತೀಶ್ ಕುಮಾರ್ ಹಾಗು ಆರ್‌ಜೆಡಿ ಪಕ್ಷದ ಮೈತ್ರಿ ಕೂಟ ಪತನವಾಗಿ ಇದೀಗ ನಿತೀಶ್ ಕುಮಾರ್ ಬಿಜೆಪಿ‌ ಬೆಂಬಲದೊಂದಿಗೆ ಸಿಎಂ ಗದ್ದುಗೆ ಏರಲಿದ್ದಾರೆ.

ಬಿಹಾರದಲ್ಲಿ ಇದೀಗ ರಾಜಕೀಯ ಹೈಡ್ರಾಮಾ ನಡೆಯುತ್ತಲೇ ಇದೆ. ಕಳೆದ ಒಂದು‌ ವಾರದಿಂದ ಮೈತ್ರಿ ಸರ್ಕಾರ ಪತನವಾಗುತ್ತೆ ಅಂತ ಸುದ್ದಿಯಾಗುತ್ತಲ್ಲೇ ಬಿಹಾರದಲ್ಲಿ ಅಷ್ಟೇ ಅಲ್ಲ, ದೇಶದ ರಾಜಕಾರಣದಲ್ಲೂ ಸಂಚಲನ ಮೂಡಿಸಿದೆ. ಇಂದು ಬೆಳಗ್ಗೆ ರಾಜ್ಯಪಾಲರ ಭೇಟಿ ಮಾಡಿದ ನಿತೀಶ್ ಕುಮಾರ್, ಇಂದು ಸಂಜೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಲಿದ್ದಾರೆ.

 

ಇನ್ನೂ ಬಿಜೆಪಿ ಹಾಗು ಜೆಡಿಯು ಮೈತ್ರಿ ಮುಂಬರುವ ಲೋಕಸಭಾ ಚುನಾವಣೆ ಮುನ್ನುಡಿ ಬರೆದಂತಿದೆ.. ಈ ಹಿಂದೆ ‌‌I.N.D.I.A ಕೂಟದಲ್ಲಿ ನಿತೀಶ್ ಕುಮಾರ್ ಕಾಣಿಸಿಕೊಂಡಿದ್ದರು. ಆದರೆ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ, ಆಮ್ ಆದ್ಮಿ ಪಕ್ಷ ಮೈತ್ರಿ ಕೂಟದಿಂದ ಹೊರಬರುತ್ತಿದ್ದಂತೆ.. ಇದೀಗ ಜೆಡಿಯು ಪಕ್ಷ ಕೂಡ ಮೈತ್ರಿ ಕೂಟದಿಂದ ಹೊರಬಂದು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ.

ಲೋಕಸಭೆ ಚುನಾವಣೆಗೂ‌ ಮುನ್ನ ನಿತೀಶ್ ಕುಮಾರ್ ಎನ್‌ಡಿಎ ಮೈತ್ರಿ ಕೂಟಕ್ಕೆ ಸೇರ್ಪಡೆಯಾಗಿದ್ದು, ಇಂಡಿಯಾ ವಿರೋಧ ಪಕ್ಷಗಳ ಮೈತ್ರಿಗೆ ದೊಡ್ಡ ಹೊಡೆತ ಎಂದು ರಾಜಕೀಯವಾಗಿ ವಿಶ್ಲೇಷಣೆ ಮಾಡಲಾಗಿದೆ.

ಇಂದು ಸಂಜೆಯೇ ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆ ಮಾಡಲಾಗುವುದು.. ಇಬ್ಬರು ಬಿಜೆಪಿ ನಾಯಕರು ಉಪ ಮುಖ್ಯಮಂತ್ರಿಯಾಗಲಿದ್ದಾರೆ. ಸದ್ಯ ಉಪ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಸಸ್ಪೆನ್ಸ್ ಉಳಿದಿದೆ.

ಇಂದು ಸಂಜೆ 4 ಗಂಟೆಗೆ ನೂತನ ಸರ್ಕಾರದಲ್ಲಿ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 6 ರಿಂದ 8 ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಬಹುದು ಎಂದು ಮೂಲಗಳು ತಿಳಿಸಿವೆ.