ಎಂಥೆಂಥಾ ನೀಚರು ಈ ಪ್ರಪಂಚದಲ್ಲಿದ್ದಾರೆ ನೋಡಿ ವರದಕ್ಷಿಣೆಗಾಗಿ ಹೆಂಡ್ತಿಗೆ ಚಿತ್ರಹಿಂಸೆ ನೀಡಿದ್ದೂ ಅಲ್ಲದೆ ಆಕೆಯನ್ನು ವೈಶ್ಯಾವಾಟಿಕೆಗೆ ತಳ್ಳಿದ್ದಾನೆ ಇಲ್ಲೊಬ್ಬ ಭೂಪ. ಪತಿ ಎನಿಸಿಕೊಂಡ ಆಸಾಮಿಯ ಈ ದೃಶ್ಕೃತ್ಯ ಬರೋಬ್ಬರಿ 4 ವರ್ಷದ ನಂತರ ಬೆಳಕಿಗೆ ಬಂದಿದೆ.
ವರದಕ್ಷಿಣೆ ನೀಡಿಲ್ಲವೆಂದು ಪತಿ ಪತ್ನಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ ಈ ಹೇಯ್ಯ ಘಟನೆ ಬಿಹಾರದ ಕತಿಹಾರಿನಲ್ಲಿ ನಡೆದಿರುವುದು. ಸಂತ್ರಸ್ತೆ ನಾಲ್ಕು ವರ್ಷಗಳ ಬಳಿಕ ಈ ಘಟನೆ ಕುರಿತು ವಿವರಿಸಿದ್ದಾಳೆ.
ಸಂತ್ರಸ್ತೆ 7 ವರ್ಷಗಳ ಹಿಂದೆ ಅರೇರಿಯಾ ಜಿಲ್ಲೆಯ ಮೊಹಮ್ಮದ್ ಶಮೀಮ್ ಎಂಬಾತನನ್ನು ಮದುವೆಯಾಗಿದ್ದಳು…. ಆಕೆಯ ತಂದೆ ಕಷ್ಟಪಟ್ಟು ತಮ್ಮ ಕೈಲಾದಷ್ಟು ವರದಕ್ಷಿಣೆ ನೀಡಿ ಮದುವೆ ಮಾಡಿಕೊಟ್ಟಿದ್ದರು. ಆದರೆ, ಹಣಬಾಕ ಶಮೀಮ್ ಮತ್ತಷ್ಟು ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಪೀಡಿಸಿ, ನಂತರ ವೇಶ್ಯಾವಾಟಿಕೆಗೆ ತಳ್ಳಿದ್ದಾನೆಂದು ತಿಳಿದು ಬಂದಿದ್ದು, ಸ್ವತಃ ಸಂತ್ರಸ್ತೆ ಈ ಬಗ್ಗೆ ಅಳಲು ತೋಡಿಕೊಂಡಿದ್ದಾಳೆ. ಸಂತ್ರಸ್ತೆ ನಾಲ್ಕು ವರ್ಷದ ಬಳಿಕ ಉತ್ತರ ಪ್ರದೇಶದ ಕಾನ್ಪುರದಿಂದ ದಲ್ಲಾಳಿಗಳಿಂದ ತಪ್ಪಿಸಿಕೊಂಡು ಬಂದು ಸದ್ಯ ತವರು ಮನೆ ಸೇರಿದ್ದಾಳೆ. ಆಕೆ ನೀಡಿದ ದೂರಿನ ಮೇರೆಗೆ
ಕೋಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.