ಇಂಗ್ಲೆಂಡ್ನಲ್ಲಿ ವಿಶ್ವಕಪ್ ಟೂರ್ನಿ ನಡಎಯುತ್ತಿದೆ. ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾದ ವಿರುದ್ಧ ಗೆದ್ದಿದೆ. ಇಂದು ನ್ಯೂಜಿಲೆಂಡ್ ವಿರುದ್ಧ ಭಾರತ ಆಡಬೇಕಿದ್ದು, ಮಳೆ ಆಟ ನಡೆಯುತ್ತಿದೆ.
ಅದರಿಲಿ ಹೆಡ್ ಲೈನ್ ವಿಷ್ಯಕ್ಕೆ ಬಂದು ಬಿಡೋದಾದ್ರೆ, ವಿಶ್ವಕಪ್ ಬಳಿಕ ಮುಖ್ಯ ಕೋಚ್ ರವಿಶಾಸ್ತ್ರಿ, ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್, ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಸೇರಿದಂತೆ ಅನೇಕ ಸಪೋರ್ಟ್ ಸ್ಟಾಪ್ ಒಪ್ಪಂದ ವರ್ಲ್ಡ್ಕಪ್ ಬಳಿಕ ಮುಗಿಯಲಿದೆ. ಆದ್ದರಿಂದ ಬಿಸಿಸಿಐ ಹಾಗೂ ಸಿಒಎ ಕೋಚ್ ಹುದ್ದೆಗೆ ಹೊಸ ಅರ್ಜಿಗಳನ್ನು ಆಹ್ವಾನಿಸಿದೆ. ವಿಶ್ವಕಪ್ ನಂತರ ಹೊಸ ಕೋಚ್ ನೇಮಕದವರೆಗೂ ಇದೇ ಸ್ಟಾಪ್ ಮುಂದುವರೆಸಲು ಸಿಒಎ ತೀರ್ಮಾನ ಮಾಡಿದೆ.
ಕೋಚ್ ಆಯ್ಕೆಯಲ್ಲಿ ಅಡ್ವೈಸರಿ ಸಮಿತಿ ಸದಸ್ಯರು ಪ್ರಮುಖ ಪಾತ್ರವಹಿಸ್ತಾರೆ. ಐಪಿಎಲ್ನಲ್ಲಿ ಸಿಎಸಿ ಸದಸ್ಯರು, ಫ್ರಾಂಚೈಸಿಗಳ ಜೊತೆ ಕಾಣಿಸಿಕೊಂಡಿರೋದ್ರಿಂದ ಆ ವಿಷಯ ಸ್ವಲ್ಪ ಇದೀಗ ಗೊಂದಲದಲ್ಲಿದೆ.
ಯಾರಾಗ್ತಾರೆ ಕೋಚ್? : ಟೀಮ್ ಇಂಡಿಯಾದ ಮುಂದಿನ ಕೋಚ್ ಯಾರಾಗ್ತಾರೆ ಎನ್ನುವುದು ಕುತೂಹಲ. ಕಿರಿಯರ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರು ಭಾರತ ತಂಡ ಕೋಚ್ ಆಗಬೇಕು ಎನ್ನುವುದು ಬಹು ದೊಡ್ಡ ಕೂಗು. ನಮ್ಮ ದ್ರಾವಿಡ್ ಒಪ್ಪಿದ್ದರೆ ಎಂದೋ ಕೋಚ್ ಆಗಿರುತ್ತಿದ್ದರು. ಆದರೆ, ದ್ರಾವಿಡ್ ನಾನು ಕಿರಿಯರ ಗುರುವಾಗಿಯೇ ಇರುತ್ತೇನೆ ಎಂದಿದ್ದಾರೆ. ದ್ರಾವಿಡ್ ಅವರ ಹೆಸರು ಈ ಬಾರಿ ಕೂಡ ದೊಡ್ಡ ಮಟ್ಟಿನ ಸದ್ದು ಮಾಡಬಹುದು.
ಆದರೆ, ದ್ರಾವಿಡ್ ನಯವಾಗಿ ಅದನ್ನು ತಿರಸ್ಕರಿಸುವ ಸಾಧ್ಯತೆಯೇ ಹೆಚ್ಚು. ದ್ರಾವಿಡ್ ಟೀಮ್ ಇಂಡಿಯಾದ ಕೋಚ್ ಆದರೆ ನಿಜಕ್ಕೂ ಆ ಹುದ್ದೆಗೂ ಒಂದು ತೂಕ ಬರುತ್ತದೆ.