ವರ್ಲ್ಡ್​​​​​​ಕಪ್ ನಮ್ದೇ ಬಿಡ್ರಿ… ಹಿಟ್​​ ಮ್ಯಾನ್ ಮಾಡಿದ್ರು ವರ್ಲ್ಡ್​ ರೆಕಾರ್ಡ್…!

Date:

ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಇಂಗ್ಲೆಂಡ್​ನಿಂದ ವಿಶ್ವಕಪ್ ಗೆದ್ದು ಕೊಂಡೇ ಭಾರತಕ್ಕೆ ಮರಳುವುದು. ಇದರಲ್ಲಿ ಅನುಮಾನವೇ ಬೇಡ. ಅದರಲ್ಲೂ ರೋಹಿತ್ ಶರ್ಮಾ ಅವರ ಫಾರ್ಮ್ ನೋಡಿದ್ರೆ ಈಗಾಗಲೇ ಸೆಮಿಫೈನಲ್​ನಲ್ಲಿರುವ ತಂಡಗಳ ಎದೆಯಲ್ಲಿ ನಡುಕ ಹುಟ್ಟಿ ಬಿಟ್ಟಿದೆ. ರೋಹಿತ್ ಗೆ ಶತಕಗಳಿಸುವುದು ನೀರುಕುಡಿದಷ್ಟೇ ಸುಲಭವಾಗಿದೆ.
ಹೌದು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲೂ ಹಿಟ್ ಮ್ಯಾನ್, ಡಬಲ್ ಸೆಂಚುರಿ ಸ್ಟಾರ್ ರೋಹಿತ್ ಶರ್ಮಾ ಶತಕ ಸಿಡಿಸಿದ್ದಾರೆ. 103ರನ್​ಗಳನ್ನು ಗಳಿಸಿ ಪೆವಿಲಿಯನ್ ಸೇರುವ ಮುನ್ನ ವಿಶ್ವ ದಾಖಲೆಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ.
ಪ್ರಸಕ್ತ ವಿಶ್ವಕಪ್​ನಲ್ಲಿ ರೋಹಿತ್ ಶರ್ಮಾ ಮಾಡಿದ 5ನೇ ಶತಕವಿದು. ಈ ಪಂದ್ಯಕ್ಕೂ ಮೊದಲು ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಇಂಗ್ಲೆಂಡ್, ಬಾಂಗ್ಲಾ ದೇಶದ ವಿರುದ್ಧ ಹಿಟ್ ಮ್ಯಾನ್ ಸೆಂಚುರಿ ಮಾಡಿದ್ದರು. ಒಂದೇ ವಿಶ್ವಕಪ್​ನಲ್ಲಿ 5 ಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್​ಮನ್ ಆದ ರೋಹಿತ್ ಈ ಹಿಂದೆ 2015ರ ವಿಶ್ವಕಪ್​ ನಲ್ಲಿ 4 ಸೆಂಚುರಿ ಬಾರಿಸಿದ್ದ ಶ್ರೀಲಂಕಾದ ಕುಮಾರ ಸಂಗಕ್ಕಾರ ಅವರ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.


ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ 2003ರ ವಿಶ್ವಕಪ್​ನಲ್ಲಿ 3 ಸೆಂಚುರಿ ಬಾರಿಸಿದ್ದರು. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಈ ದಾಖಲೆಯನ್ನು ರೋಹಿತ್ ಸರಿದೂಗಿಸಿದ್ದರು. ಬಾಂಗ್ಲಾ ವಿರುದ್ಧದ ಸೆಂಚುರಿಯೊಂದಿಗೆ ಸಂಗಕ್ಕಾರ ಜೊತೆ 4ನೇ ಸ್ಥಾನವನ್ನು ರೋಹಿತ್ ಶೇರ್ ಮಾಡಿ ಕೊಂಡಿದ್ದರು. ಇಂದ ಲಂಕಾ ವಿರುದ್ಧ ಲಂಕಾ ಕ್ರಿಕೆಟ್ ದಿಗ್ಗಜನ ದಾಖಲೆಯನ್ನು ರೋಹಿತ್ ಪುಡಿಗಟ್ಟಿದ್ದಾರೆ.
ಕನ್ನಡಿಗ ಕೆ.ಎಲ್‌ ರಾಹುಲ್ ಕೂಡ ಶತಕ (111) ರನ್ ಮಾಡಿದ್ದು ಭಾರತ 7 ವಿಕೆಟ್ ಗಳಿಂದ ಜಯ ಸಾಧಿಸಿದೆ.

Share post:

Subscribe

spot_imgspot_img

Popular

More like this
Related

ಶಾಸಕ ಹೆಚ್.ವೈ.ಮೇಟಿ ರವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ

ಶಾಸಕ ಹೆಚ್.ವೈ.ಮೇಟಿ ರವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಬೆಂಗಳೂರು: ನಿಷ್ಠಾವಂತ ರಾಜಕಾರಣಿಯಾಗಿದ್ದ...

ಲಿಫ್ಟ್‌ ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಲೆ ಮಾಡಿದ್ದ ಮನೆಕೆಲಸದಾಕೆಯ ಅರೆಸ್ಟ್.!‌

ಲಿಫ್ಟ್‌ ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಲೆ ಮಾಡಿದ್ದ ಮನೆಕೆಲಸದಾಕೆಯ ಅರೆಸ್ಟ್.!‌ ಬೆಂಗಳೂರು:...

ಕಾಂಗ್ರೆಸ್​​ ಹಿರಿಯ ಶಾಸಕ ಹೆಚ್​.ವೈ. ಮೇಟಿ ಇನ್ನಿಲ್ಲ

ಕಾಂಗ್ರೆಸ್​​ ಹಿರಿಯ ಶಾಸಕ ಹೆಚ್​.ವೈ. ಮೇಟಿ ಇನ್ನಿಲ್ಲ ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್...

ವಿಜಯಪುರದಲ್ಲಿ ಮತ್ತೆ ಭೂಕಂಪನ; ಭೀತಿಯಲ್ಲಿ ಜನತೆ

ವಿಜಯಪುರದಲ್ಲಿ ಮತ್ತೆ ಭೂಕಂಪನ; ಭೀತಿಯಲ್ಲಿ ಜನತೆ ವಿಜಯಪುರ: ವಿಜಯಪುರ ನಗರದಲ್ಲಿ ಮತ್ತೊಮ್ಮೆ ಭೂಕಂಪನದ...