ವಿಶ್ವಕಪ್ ನಂತರ ಟೀಮ್ ಇಂಡಿಯಾದ ಮಾಜಿ ನಾಯಕ , ಕೂಲ್ ಕ್ಯಾಪ್ಟನ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾದಿಂದ ದೂರ ಉಳಿಯುವ ಸಾಧ್ಯತೆಯಿದೆ.
ಧೋನಿ ದಿಢೀರ್ ಅಂತ ಮೂರೂ ಮಾದರಿಯ ನಾಯಕತ್ವಕ್ಕೆ ರಾಜೀನಾಮೆ ನೀಡಿ, ಅಚ್ಚರಿ ನ್ಯೂಸ್ ಕೊಟ್ಟಿದ್ದರು. ವಿಶ್ವಕಪ್ ನಲ್ಲಿ ವೈಪಲ್ಯ ಅನುಭವಿಸುತ್ತಿರುವ ಅವರು ದಿಢೀರ್ ಅಂತ ಕ್ರಿಕೆಟಿಗೆ ನಿವೃತ್ತಿ ಘೋಷಿಸಲೂ ಬಹುದು.
ವಿಶ್ವಕಪ್ ಫೈನಲ್ ಬಳಿಕ ಧೋನಿ ದಿಢೀರ್ ಎಂದು ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಧೋನಿ ಯಾವ್ದೇ ನಿರ್ಧಾರವನ್ನು ತತ್ ಕ್ಷಣವೇ ತೆಗೆದುಕೊಂಡರೆ ಆಶ್ಚರ್ಯ ಪಡಬೇಕಿಲ್ಲ.
ಧೋನಿ ಈ ಬಾರಿಯ ವಿಶ್ವಕಪ್ ನಲ್ಲಿ ಕಳಪೆ ಫಾರ್ಮ್ನಲ್ಲಿದ್ದಾರೆ. ಧೋನಿಗೆ ಸೆಮಿ ಫೈನಲ್ ಅಥವಾ ಫೈನಲ್ ಪಂದ್ಯವು ವೃತ್ತಿ ಬದುಕಿನ ವಿದಾಯ ಪಂದ್ಯವಾಗಲಿದೆ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ.
ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದೆ.
ಜುಲೈ 14ರಂದು ನಡೆಯಲಿರುವ ಫೈನಲ್ಗೇರುವ ತುಡಿತದಲ್ಲಿದೆ. ಈ ಮೂಲಕ 2ನೇ ಬಾರಿ ವಿಶ್ವಕಪ್ ತಂದುಕೊಟ್ಟ ನಾಯಕನಿಗೆ ಅದ್ದೂರಿ ಬೀಳ್ಕೊಡುಗೆ ಕೊಡುವ ನಿರ್ಧಾರದಲ್ಲಿದೆ ವಿರಾಟ್ ಕೊಹ್ಲಿ ಅಂಡ್ ಟೀಮ್.
ಧೋನಿ ಭಾರತಕ್ಕೆ 2ನೇ ಏಕದಿನ ವಿಶ್ವಕಪ್ ತಂದುಕೊಟ್ಟ ನಾಯಕ. 2007 ರಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್ ಹಾಗೂ 2011ರ ವಿಶ್ವಕಪ್ ತಂದು ಕೊಟ್ಟ ಹಿರಿಮೆ ಧೋನಿಯದ್ದು.
ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 348 ಏಕದಿನ ಪಂದ್ಯಗಳನ್ನು ಆಡಿರುವ ಮಹೇಂದ್ರ ಸಿಂಗ್ ಧೋನಿ 50.58 ರನ್ ಸರಾಸರಿಯಲ್ಲಿ 10723 ರನ್ಗಳಿಸಿದ್ದಾರೆ. 2004ರಲ್ಲಿ ಬಾಂಗ್ಲಾದೇಶದ ವಿರುದ್ಧ ಏಕದಿನ ಕ್ರಿಕೆಟ್ಗೆ ಪಾದರ್ಪಣೆ ಮಾಡಿದ ಧೋನಿ, ವಿಶ್ವಕಪ್ನೊಂದಿಗೆ ಕ್ರಿಕೆಟ್ ವಿದಾಯ ಹೇಳಲು ಇಚ್ಛಿಸಿದ್ದಾರೆ ಎನ್ನಲಾಗಿದೆ.