ವಾಟ್ಸ್ ಆ್ಯಪ್ ನಲ್ಲಿ ಕ್ವಾಲಿಟಿ ಹಾಳಗದಂತೆ ಫೋಟೋ ಕಳಿಸುವುದು ಹೇಗೆ ಗೊತ್ತಾ?

Date:

ಇದು ಸೋಶಿಯಲ್ ಮೀಡಿಯಾ ಜಮಾನ. ಇಲ್ಲಿ ಫೇಸ್ ಬುಕ್, ಇನ್ಸ್‍ಟ್ರಾಗ್ರಾಂ, ಟ್ವೀಟರ್, ವಾಟ್ಸಪ್ ಗಳದ್ದೇ ಕಾರುಬಾರು. ಇವುಗಳನ್ನು ಬಿಟ್ಟು ನಾವು ನೀವು ಇರಲ್ಲ…!

ಇವುಗಳಲ್ಲಿಯೂ ವಾಟ್ಸಪ್ ಬೇಕೆ ಬೇಕು. ಆದ್ರೆ ಈ ವಾಟ್ಸಪ್ ನಲ್ಲಿ ಫೋಟೋ ಮತ್ತು ವೀಡಿಯೋಗಳನ್ನು ಕಳುಹಿಸಿದ್ರೆ ರೆಸಲ್ಯೂಷನ್ ಮತ್ತು ಕ್ವಾಲಿಟಿ ಹಾಳಾಗುತ್ತೆ ಅನ್ನೋದು ಎಲ್ಲರ ಮಾತು…!

ನಿಮಗಿದು ಗೊತ್ತಾ ವಾಟ್ಸಪ್ ನಲ್ಲಿ ಫೋಟೋ, ವೀಡಿಯೋಗಳನ್ನು ಗುಣಮಟ್ಟ ಹಾಳಾಗದಂತೆ ಕಳುಹಿಸಬಹುದು…!
ಹೇಗೆ ಗೊತ್ತಾ…?
ವಾಟ್ಸಪ್ ನಲ್ಲಿ ಚಾಟ್ ವಿಂಡೋ ಓಪನ್ ಮಾಡಿ, ಮೆಸೇಜ್ ಮಾಡೋ ಪಕ್ಕದಲ್ಲಿರೋ ಅಟ್ಯಾಚ್ಮೆಂಟ್ ಬಟನ್ ಕ್ಲಿಕ್ ಮಾಡಿ. ಅಲ್ಲಿ ಡ್ಯಾಂಕ್ಯುಮೆಂಟ್ ಆಪ್ಷನ್ ಸಿಗುತ್ತೆ. ಅದನ್ನು ಕ್ಲಿಕ್ ಮಾಡಿ. ಬಳಿಕ ಬ್ರೌಸ್ ಅದರ್ ಡಾಕ್ಯುಮೆಂಟ್ಸ್ ಅಂತ ಬರುತ್ತೆ. ಅದನ್ನು ಓಪನ್ ಮಾಡಿ. ನಿಮ್ಮ ಫೈಲ್ ಮ್ಯಾನೇಜರ್ ತೆರೆದುಕೊಳ್ಳೊತ್ತೆ ನಿಮಗೆ ಬೇಕಾದ ಫೋಟೋ ಅಥವಾ ವೀಡಿಯೋವನ್ನು ಸೆಲೆಕ್ಟ್ ಮಾಡಿ ಓಕೆ ಬಟನ್ ಒತ್ತಿ. ನೀವು ಕಳುಹಿಸಬೇಕೆಂದಿರೋ ಇಮೇಜ್, ವೀಡಿಯೋ ಡಾಂಕ್ಯುಮೆಂಟ್ ರೂಪದಲ್ಲಿ ಸೆಂಡ್ ಆಗಿರುತ್ತೆ…! ಹೀಗೆ ಕಳುಹಿಸಿದಾಗ ಗುಣಮಟ್ಟ ಸ್ವಲ್ಪವೇ ಸ್ವಲ್ಪ ಕೆಡುವುದಿಲ್ಲ.

ಅಮೆರಿಕಾದಲ್ಲಿ  ವಿಜ್ಞಾನಿ, ಭಾರತದಲ್ಲಿ ಫಾರ್ಮರ್..!

ಡಾ. ಹರಿನಾಥ್ ಕಸಿಗಣೇಸನ್. ದೊಡ್ಡ ವಿಜ್ಞಾನಿ. ಮೂಲತಃ ತಮಿಳುನಾಡಿನವರು.ಕೆಲ ವರ್ಷಗಳ ಹಿಂದೆಯಷ್ಟೇ ಈ ವಿಜ್ಞಾನಿ ಅಮೆರಿಕಾದಲ್ಲಿ ದೊಡ್ಡ ಕೆಲಸದಲ್ಲಿ ಇದ್ರು. ಕೈ ತುಂಬಾ ಸಂಬಳ. ಸುಖಕರ ಜೀವನ. ಪ್ರತಿದಿನ ಹೊಸತನವನ್ನು ಹೊಸ ಹೊಸ ವಿಷಯ ಗಳ ಬಗ್ಗೆ ಆವಿಷ್ಕಾರ ಮಾಡುತ್ತಾ ದೊಡ್ಡ ಹೆಸರು ಮಾಡಿದ್ದರು.

ಈ ವಿಜ್ಞಾನಿ ಈಗ ಅಪ್ಪಟ ಕೃಷಿಕರಾಗಿದ್ದಾರೆ. ಅಲ್ಲದೆ, ಅಂದಿನ ಜೀವನಕ್ಕೂ ಇಂದಿನ ಜೀವನಕ್ಕೂ ತುಂಬಾನೇ ವ್ಯತ್ಯಾಸವಿದೆ. ತಮಿಳುನಾಡು ಬಾರ್ಡರ್ ನಲ್ಲಿರುವ ಪೆನ್ನಗರಮ್ ಎಂಬ ಹಳ್ಳಿಯತ್ತ ಹೋದರೆ ಉಳಿದ ರೈತರ ಹೊಲಗಳ ಜೊತೆಗೆ ಡಾ. ಹರಿನಾಥ್ ಅವರ ಜಮೀನು ಕೂಡ ಕಾಣಸಿಗುತ್ತದೆ.

ಡಾ. ಹರಿನಾಥ್ ಅವರನ್ನು ಶಿಕ್ಷಕಿಯಾಗಿದ್ದ ತಾಯಿ ತುಂಬಾ ಕಷ್ಟದಿಂದ ಮಗನನ್ನು ಬೆಳೆಸಿದರು. ಕಾಡಿನ ಸಮೀಪವಿದ್ದ ಮನೆ, ಶಿಕ್ಷಕ ವೃತ್ತಿಯ ಜೊತೆಗೆ ಸಾಂಪ್ರದಾಯಿಕ ವ್ಯವಸಾಯ ಮಾಡುತ್ತಿದ್ದ ಕುಟುಂಬದಲ್ಲಿ ಹರಿನಾಥ್ ಬೆಳೆದರು. ಆಗಲೇ ಕೃಷಿಯತ್ತ ಬಹಳ ಆಸಕ್ತಿ ಇತ್ತು. ಮುಂದೆ ಚೆನ್ನೈಯಲ್ಲಿ ಉನ್ನತ ಪದವಿ ಪಡೆದರು.
ಮುಂದೆ ಡಾ. ಹರಿನಾಥ್ ಜಾಬ್ ಜರ್ನಿ ಶುರುವಾಯಿತು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಸಂಶೋಧಕರಾಗಿ ಉದ್ಯೋಗ ಶುರುವಾಯಿತು. ಇನ್ನು ಹರಿನಾಥ್ ಅವರು ಡಿಆರ್ ಡಿಓದಲ್ಲಿ ಸಂಶೋಧಕರಾಗಿದ್ದಾಗ ಅಮೆರಿಕಾದ ಕೆರೋಲಿನಾದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸಂಶೋಧನಾ ಕಾರ್ಯಕ್ಕೆಂದು ತೆರಳಬೇಕಾಯಿತು. ಕನಿಷ್ಠ ಒಂದು ವರ್ಷದ ರಜೆಯ ಅವಶ್ಯಕತೆ ಇತ್ತು.

ಅದು, ಡಾ.ಎಪಿಜೆ ಅಬ್ದುಲ್ ಕಲಾ ರಾಷ್ಟ್ರಪತಿಯಾಗಿದ್ದ ಕಾಲ. ಸಂಶೋಧಕರಾಗಿ ಬಹಳ ಚುರುಕಾಗಿ ಕೆಲಸ ಮಾಡುತ್ತಿದ್ದ ಹರಿನಾಥ್ ಬಗ್ಗೆ ಡಾ. ಕಲಾಂ ಅವರಿಗೆ ಮೊದಲೇ ಗೊತ್ತಿತ್ತು. ಎರಡು ವರ್ಷಗಳ ರಜೆ ಮಂಜೂರು ಮಾಡುವ ಮೊದಲು ಅವರು ಹರಿನಾಥ್ ಅವರಿಗೆ ಒಂದು ಮಾತು ಹೇಳಿದ್ದರಂತೆ. ಅದೇನೆಂದರೆ, ಅಮೆರಿಕಾದಲ್ಲಿ ನಿಲ್ಲಬೇಡ, ಮರಳಿ ಭಾರತಕ್ಕೆ ಬಾ. ಹುಟ್ಟಿದ ದೇಶಕ್ಕೆ ನಿನ್ನ ಸೇವೆ ಸಿಗಲಿ ಅಂತ.
ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಮಾತು, ವಿಚಾರಗಳು ಹರಿನಾಥ್ ಅವರಿಗೆ ಪ್ರೇರಣೆಯಾಯಿತು. ಅದರಂತೆ ಅಮೆರಿಕಾದಲ್ಲಿ ದೊಡ್ಡ ಕೆಲಸದಲ್ಲಿದ್ದರು. ಕೈ ತುಂಬಾ ಸಂಬಳ ಕೂಡ ಇತ್ತು. ಆ ದೇಶದಲ್ಲೂ ದೊಡ್ಡ ಹೆಸರು ಮಾಡಿದ್ದರು. ಆದರೆ, ಅದನ್ನೆಲ್ಲ ತೊರೆದು, ತಮ್ಮ ಕುಟುಂಬ ಮೊದಲು ಮಾಡುತ್ತಿದ್ದ ಕೃಷಿಯನ್ನು ಮತ್ತೆ ಜೀವಂತವಾಗಿರಿಸಲು ಭಾರತಕ್ಕೆ ಮರಳಿ ಬಂದರು.

ಈಗ ಡಾ. ಹರಿನಾಥ್ ರಕ್ಷಣಾ ಕ್ಷೇತ್ರದ ಸಂಶೋಧನೆಗಿಂತ ಕೃಷಿಯಲ್ಲಿ ಸಿದ್ಧಿ ಪಡೆದುಕೊಂಡಿದ್ದಾರೆ. ಇವರ ಕುಟುಂಬವೂ ಕೃಷಿಯಲ್ಲೇ ಮುಳುಗಿದೆ. ಏನೇ ಹೇಳಿ, ಕೃಷಿಯೆಂದು ಅಸಡ್ಡೆ ತೋರುವವರಿಗೆ ವಿಜ್ಞಾನಿ ಡಾ. ಹರಿನಾಥ್ ಅವರೇ ಸ್ಫೂರ್ತಿ ಅಲ್ಲವೇ?

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...