ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿರುವ ಬ್ಯಾಂಕ್‌ಗಳ ರಜಾದಿನಗಳ ಪಟ್ಟಿ ಪ್ರಕಾರ ಈ ತಿಂಗಳಲ್ಲಿ ಒಟ್ಟು 21 ದಿನ ಬ್ಯಾಂಕ್‌ಗಳಿಗೆ ರಜೆ ಇರಲಿದೆ.
ಅದರಲ್ಲಿ ಈ ವಾರ 7 ದಿನಗಳಲ್ಲಿ 6 ದಿನ ಬ್ಯಾಂಕ್‌ಗಳಿಗೆ ರಜೆ ಇರಲಿದೆ ಎಂದು ಹೇಳಿದೆ. ಅಕ್ಟೋಬರ್ ತಿಂಗಳಲ್ಲಿ ಈಗಾಗಲೇ ಗಾಂಧಿ ಜಯಂತಿ ರಜೆ ಮುಗಿದಿದ್ದು, ಮುಂದೆ ವಿಜಯ ದಶಮಿ, ಈದ್ ಮಿಲಾದ್, ವಾಲ್ಮೀಕಿ ಜಯಂತಿ ಸೇರಿದಂತೆ ಹಲವು ಸರ್ಕಾರಿ ರಜೆಗಳಿವೆ. ರಾಜ್ಯದಿಂದ ರಾಜ್ಯಕ್ಕೆ ಬ್ಯಾಂಕ್ ರಜೆಗಳು ಬದಲಾಗಲಿವೆ. ಗೆಜೆಟೆಡ್ ರಜಾದಿನಗಳು ಮಾತ್ರ ದೇಶಾದ್ಯಂತ ಎಲ್ಲಾ ಬ್ಯಾಂಕ್‌ಗಳಿಗೆ ಅನ್ವಯವಾಗಲಿವೆ.
ಈ ಅಕ್ಟೋಬರ್ ತಿಂಗಳಿನಲ್ಲಿ 14 ದಿನಗಳು ಬ್ಯಾಂಕ್‌ಗಳಿಗೆ ರಜೆ ಇದೆ ಎಂದು ಆರ್‌ಬಿಐ ಹೇಳಿದೆ. ಇನ್ನುಳಿದ 7 ರಜಾದಿನಗಳಲ್ಲಿ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರಗಳು ಸೇರಿವೆ. ಎಲ್ಲಾ ಬ್ಯಾಂಕುಗಳು ಸಾರ್ವಜನಿಕ ರಜಾದಿನಗಳಲ್ಲಿ ಮುಚ್ಚಿರುತ್ತವೆ ಮತ್ತು ಕೆಲವು ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ರಜಾದಿನಗಳನ್ನು ಮೂರು ವರ್ಗಗಳಾಗಿ ವರ್ಗೀಕರಿಸಿದೆ. ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ; ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜಾ ಅಡಿಯಲ್ಲಿ ರಜೆ; ಮತ್ತು ಅಕೌಂಟ್ಸ್ ಕ್ಲೋಸಿಂಗ್.
ರಜಾದಿನಗಳಲ್ಲಿ ಗ್ರಾಹಕರು ಬ್ಯಾಂಕ್ ವ್ಯವಹಾರ ಇಟ್ಟುಕೊಳ್ಳುವುದನ್ನು ಕ್ಯಾನ್ಸಲ್ ಮಾಡಿ ಎಂದು ಆರ್‌ಬಿಐ ಸಲಹೆ ನೀಡಿದೆ. ಈ ಮೇಲ್ಕಂಡ ರಜಾದಿನಗಳಲ್ಲಿ ಬ್ಯಾಂಕ್ಗಳು ಮುಚ್ಚಲ್ಪಟ್ಟಿರುತ್ತವೆ. ಮೊಬೈಲ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಎಂದಿನಂತೆ ಕಾರ್ಯನಿರ್ವಹಿಸಲಿವೆ. ಗಮನಿಸಬೇಕಾದ ಇನ್ನೊಂದು ಪ್ರಮುಖ ವಿಷಯವೆಂದರೆ, ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಭಾನುವಾರಗಳಲ್ಲಿ ಬ್ಯಾಂಕುಗಳು ಮುಚ್ಚಿರುತ್ತವೆ, ಏಕೆಂದರೆ ಇದನ್ನು ಆರ್‌ಬಿಐ ಕಡ್ಡಾಯಗೊಳಿಸಿದೆ. ಒಟ್ಟಾರೆಯಾಗಿ, ಬ್ಯಾಂಕುಗಳು ಅಕ್ಟೋಬರ್ ತಿಂಗಳಲ್ಲಿ ಸುಮಾರು 21 ರಜಾದಿನಗಳನ್ನು ನಿರೀಕ್ಷಿಸಬಹುದು.
ಇನ್ನು ಕರ್ನಾಟಕದಲ್ಲಿ ಅಕ್ಟೋಬರ್ 14ಕ್ಕೆ ಮಹಾನವಮಿ, ಅಕ್ಟೋಬರ್ 15ರಂದು ವಿಜಯದಶಮಿ, ಅಕ್ಟೋಬರ್ 19ರಂದು ಈದ್ ಮಿಲಾದ್, ಅಕ್ಟೋಬರ್ 20ರಂದು ಮಹರ್ಷಿ ವಾಲ್ಮೀಕಿ ಜಯಂತಿ, ಹಾಗೂ ಅಕ್ಟೋಬರ್ 23ರಂದು ನಾಲ್ಕನೇ ಶನಿವಾರ ಆಗಿರುವುದರಿಂದ ಬ್ಯಾಂಕ್‌ಗಳಿಗೆ ರಜೆ ಇರಲಿದೆ.