ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ ಕೇಸ್ʼಗೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ. ಆಂಧ್ರ ಮೂಲದ ಶ್ರೀನಿವಾಸ್ ರಾವ್ ಬಂಧಿತ ಆರೋಪಿಯಾಗಿದ್ದು, ಕೇಸ್ ನಲ್ಲಿ ಪ್ರಮುಖ ಪಾತ್ರವಹಿಸಿದ್ದಾನೆ. ಆರೋಪಿ ಶ್ರೀನಿವಾಸ್ ರಾವ್ ಬಿಎಸ್ ಎನ್ ಎಲ್ ಮಹಿಳಾಧಿಕಾರಿಯೊಬ್ಬರ ಪತಿಯಾಗಿದ್ದಾನೆ. ಆರೋಪಿ ಸತ್ಯ ನಾರಾಯಣ ವರ್ಮಾ ಜೊತೆ ಸತತ ಕಾಂಟ್ಯಾಕ್ಟ್ ನಲ್ಲಿದ್ದನು.
ವಾಲ್ಮೀಕಿ ನಿಗಮದ ಹಣ ಅಕ್ರಮವಾಗಿ ವರ್ಗಾವಣೆ ಮಾಡಲು ಸಹಕಾರ ನೀಡಿದ್ದು, ಇದೇ ರೀತಿ ಈ ಹಿಂದೆಯೂ ಕೃತ್ಯ ಎಸಗಿದ್ದರು. ಬ್ಯಾಂಕ್ ಖಾತೆಯಿಂದ ಶ್ರೀನಿವಾಸ್ ರಾವ್ ಹೆಸರಿಗೆ 10 ಕೋಟಿ ರೂ ವರ್ಗಾಯಿಸಿದ್ದ. ಹಣವನ್ನು ವಿತ್ ಡ್ರಾ ಮಾಡಿಕೊಂಡಿದ್ದ ಆರೋಪಿ ಶ್ರೀನಿವಾಸ್ ರಾವ್, ಪ್ರಕರಣ ಬೆಳಕಿಗೆ ಬರುತ್ತಿದಂತೆ ತಲೆಮರೆಸಿಕೊಂಡಿದ್ದ. ಸದ್ಯ ಆತನನ್ನ ಬಂಧಿಸಲಾಗಿದ್ದು, 9 ದಿನಗಳ ಕಾಲ ಕಸ್ಟಡಿಗೆ ಪಡೆದಿರುವ ಎಸ್ಐಟಿ ಅಧಿಕಾರಿಗಳು ಹಣ ಜಪ್ತಿ ಮಾಡುವ ಕಾರ್ಯದಲ್ಲಿ ತೊಡಗಿರುವುದಾಗಿ ತಿಳಿಸಿದ್ದಾರೆ.
ವಾಲ್ಮೀಕಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ ಕೇಸ್: ಮತ್ತೋರ್ವ ಆರೋಪಿಯನ್ನು ಬಂಧಿಸಿದ SIT
Date: