ಮೌಂಟ್ ಮಾಂಗ್ನುಯಿ : ಟೀಮ್ ಇಂಡಿಯಾದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಅಬ್ಬರ ಮುಂದುವರೆದಿದೆ. ನ್ಯೂಜಿಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿ ಸರಣಿ ಶ್ರೇಷ್ಠರಾದ ರಾಹುಲ್ ಏಕದಿನ ಸರಣಿಯಲ್ಲೂ ಮಿಂಚಿದ್ದಾರೆ. ಮೊದಲ ಪಂದ್ಯದಲ್ಲಿ ಭಾರತ ಸೋಲನುಭವಿಸಿದರೂ ರಾಹುಲ್ ಅಜೇಯ 88ರನ್ ಮಾಡಿದ್ದರು. ಎರಡನೇ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದ ರಾಹುಲ್ ಇಂದು ಮತ್ತೆ ಭರ್ಜರಿ ಫಾರ್ಮ್ಗೆ ಮರಳಿ ಕಿವೀಸ್ ಬೌಲರ್ಗಳ ಕಿವಿ ಹಿಂಡಿದ್ದಾರೆ.
ಮೌಂಟ್ ಮಾಂಗ್ನುಯಿಯಲ್ಲಿ ನಡೆಯುತ್ತಿರೋ ನ್ಯೂಜಿಲೆಂಡ್ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತ 296ರನ್ ಬಾರಿಸಿದೆ. ತಂಡ ಆರಂಭಿಕ ಆಘಾತ ಅನುಭವಿಸಿದ್ದಾಗ ಕ್ರೀಸ್ಗಿಳಿದ ರಾಹುಲ್ ಜವಬ್ದಾರಿಯುತ ಆಟ ಪ್ರದರ್ಶಿಸಿದರು. ಮತ್ತೊಬ್ಬ ಯುವ ಆಟಗಾರ ಶ್ರೇಯಸ್ ಅಯ್ಯರ್ ಒಡಗೂಡಿ ಹಾಗೂ ಮತ್ತೊಬ್ಬ ಕನ್ನಡಿಗ ಮನೀಷ್ ಪಾಂಡೆ ಜೊತೆಗೂಡಿ ಎರಡು ಶತಕದ ಜೊತೆಯಾಟಗಳಲ್ಲಿ ಭಾಗಿಯಾದ ರಾಹುಲ್ ವೈಯಕ್ತಿಕ 112ರನ್ ಬಾರಿಸಿದ್ರು. ಶ್ರೇಯಸ್ ಅಯ್ಯರ್ 62 ಮತ್ತು ಮನೀಷ್ ಪಾಂಡೆ 42 ರನ್ ಕೊಡುಗೆ ನೀಡಿದ್ರು. ಈಗಾಗಲೇ ಸರಣಿ ಕಳೆದು ಕೊಂಡಿರೋ ಭಾರತ ಈ ಪಂದ್ಯವನ್ನು ಪ್ರತಿಷ್ಠೆಗಾಗಿ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ.
ವಾವ್ಹ್ .. ಮತ್ತೆ ಮಿಂಚಿದ ಕನ್ನಡಿಗ ಕೆ.ಎಲ್ ರಾಹುಲ್ ಸೆಂಚುರಿ..!
Date: