ವಿಶ್ವಕಪ್ ಬೆನ್ನಲ್ಲೇ ಭಾರತ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ಆಗಸ್ಟ್ 3ರಿಂದ ವೆಸ್ಟ್ ಇಂಡೀಸ್ ಮತ್ತು ಭಾರತದ ನಡುವೆ ಟಿ20, ಏಕದಿನ ಮತ್ತು ಟೆಸ್ಟ್ ಸರಣಿ ನಡೆಯಲಿದೆ.
ವಿಶ್ವಕಪ್ ಸೆಮಿಫೈನಲ್ ಸೋಲಿನಿಂದ ಟೀಮ್ ಇಂಡಿಯಾದಲ್ಲಿ ಭಾರಿ ಬದಲಾವಣೆ ಆಗುವ ಸಾಧ್ಯತೆಯೂ ಇದೆ. ಈಗಾಗಲೇ ವಿರಾಟ್ ಕೊಹ್ಲಿ ಬದಲಿಗೆ ರೋಹಿತ್ ಶರ್ಮಾಗೆ ನಾಯಕ ಪಟ್ಟ ಕಟ್ಟುವ ಬಗ್ಗೆ ಬಲವಾದ ಮಾತುಗಳು ಕೇಳಿ ಬರ್ತಿವೆ.
ಇದೀಗ ಭಾರತ ವೆಸ್ಟ್ ಇಂಡೀಸ್ ವಿರುದ್ಧ 2 ಟೆಸ್ಟ್, 3 ಏಕದಿನ ಮತ್ತು 3 ಟಿ-20 ಮ್ಯಾಚ್ಗಳ ಸರಣಿ ಆಡಲಿದೆ. ಆಗಸ್ಟ್ 3ರಂದು ಮೊದಲ ಟಿ20 ಮ್ಯಾಚ್ ನಡೆಯಲಿದೆ. ಜುಲೈ 19ರಂದು ಆಯ್ಕೆ ನಡೆಯಲಿದ್ದು, ಹೊಸ ಮುಖಕ್ಕೆ ಆಧ್ಯತೆ ನೀಡುವ ಸಾಧ್ಯತೆಗಳಿವೆ. ವಿರಾಟ್ ಕೊಹ್ಲಿ ಹಾಗೂ ಜಸ್ಪ್ರೀತ್ ಬುಮ್ರಾಗೆ ರೆಸ್ಟ್ ನೀಡಲಾಗುತ್ತದೆ ಎನ್ನಲಾಗಿದೆ. ವಿರಾಟ್ ಬದಲಿಗೆ ರೋಹಿತ್ ಶರ್ಮಾಗೆ ತಂಡದ ಸಾರಥ್ಯವಹಿಸುವ ನಿರೀಕ್ಷೆ ಇದೆ.
ಕನ್ನಡಿಗರಾದ ಕೆ.ಎಲ್ ರಾಹುಲ್, ಮಯಾಂಕ್ ಅಗರ್ವಾಲ್ ಹಾಗೂ ಮನೀಷ್ ಪಾಂಡೆಗೆ ತಂಡದಲ್ಲಿ ಸ್ಥಾನ ನೀಡಬಹುದಾಗಿದೆ. ಶ್ರೇಯಸ್ ಅಯ್ಯರ್ ಗೆ ಅವಕಾಶ ನೀಡಿದರೂ ಅಚ್ಚರಿ ಇಲ್ಲ.
ಇನ್ನುಳಿದಂತೆ ರಿಷಭ್ ಪಂತ್, ಶಮಿ, ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ತಂಡದಲ್ಲಿ ಉಳಿದುಕೊಳ್ಳೋದು ಬಹುತೇಕ ಪಕ್ಕಾ. ವಿಕೆಟ್ ಕೀಪರ್, ಮಾಜಿ ಕ್ಯಾಪ್ಟನ್ ಧೋನಿಗೆ ವಿದಾಯದ ಸರಣಿ ಆದರೂ ಆಗಬಹುದು. ವರ್ಲ್ಡ್ಕಪ್ ತಂಡದಲ್ಲಿ ಸ್ಥಾನ ಪಡೆದಿದ್ದ ಕೇದಾರ್ ಜಾಧವ್ ಮತ್ತು ದಿನೇಶ್ ಕಾರ್ತಿಕ್ ಅವಕಾಶ ವಂಚಿತರಾಗುವುದು ಬಹುತೇಕ ಪಕ್ಕಾ,