ಇಂಗ್ಲೆಂಡ್ನಲ್ಲಿ ನಡೆದ ವರ್ಲ್ಡ್ಕಪ್ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ವಿರುದ್ಧ 18ರನ್ಗಳಿಂದ ಪರಾಭವಗೊಂಡು ಟೂರ್ನಿಯಿಂದ ಹೊರ ಬಂದಮೇಲೆ ಟೀಮ್ನಲ್ಲಿ ಭಾರಿ ಬದಲಾವಣೆಯ ಮಾತುಗಳು ಕೇಳಿ ಬರುತ್ತಿವೆ.
ಈ ನಡುವೆ ಧೋನಿಯ ನಿವೃತ್ತಿಯ ಬಗ್ಗೆ ಹೆಚ್ಚಿನ ಚರ್ಚೆಗಳಾಗುತ್ತಿವೆ. ಬಿಸಿಸಿಐ ಕೂಡ ಧೋನಿ ವಿದಾಯಕ್ಕೆ ಸೂಚನೆ ನೀಡಿದೆ ಎಂದು ಹೇಳಲಾಗುತ್ತಿದೆ. ಇದೀಗ ಧೋನಿ ವೆಸ್ಟ್ ಇಂಡೀಸ್ ಪ್ರವಾಸದಿಂದ ದೂರ ಉಳಿಯೋದು ಕನ್ಫರ್ಮ್ ಆಗಿದೆ. ಬಿಸಿಸಿಐಯೇ ಈ ಬಗ್ಗೆ ಹೇಳಿದೆ. ಧೋನಿಯೊಂದಿಗೆ ಮಾತನಾಡಿ ವೆಸ್ಟ್ ಇಂಡೀಸ್ ವಿರುದ್ಧದ ಟೂರ್ನಿಗೆ ತಂಡವನ್ನು ಪ್ರಕಟಿಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಧೋನಿಯನ್ನು ಮಾತನಾಡಿಸದೇ ವಿಶ್ರಾಂತಿ ಹೆಸರಲ್ಲಿ ಅವರನ್ನು ತಂಡದಿಂದ ಕೈ ಬಿಡಲಾಗುತ್ತೆ ಎಂಬ ಮಾತು ಕೇಳಿ ಬಂದಿದೆ.
ಧೋನಿ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತಂಡದಿಂದ ಹೊರಗುಳಿಯಲಿದ್ದಾರೆ ಅಂತ ಬಿಸಿಸಿಐ ಹೇಳಿದೆ. ” ಎಂ.ಎಸ್.ಧೋನಿ ಅವರು ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳುವುದಿಲ್ಲ. ಇನ್ನು ಮುಂದೆ ಅವರು ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿ ಭಾರತ ತಂಡದ ಜೊತೆ ಪ್ರಯಾಣಿಸುವುದಿಲ್ಲ. ಧೋನಿ ಅವರ ಸ್ಥಾನದಲ್ಲಿ ರಿಶಭ್ ಪಂತ್ ವಿಕೆಟ್ ಕೀಪರ್ ಆಗಿ ಕಾಣಿಸಿಕೊಳ್ಳುತ್ತಾರೆ. ರಿಶಭ್ಗೆ ಉತ್ತಮ ಮಾರ್ಗದರ್ಶಕರಾಗಿ ಧೋನಿ ಸಹಾಯ ಮಾಡಲಿದ್ದಾರೆ” ಎಂದು ಬಿಸಿಸಿಐ ಮೂಲಗಳು ಹೇಳಿವೆ ಎಂದು ವರದಿಯಾಗಿದೆ.