ವಿಜಯಲಕ್ಷ್ಮಿ ಒಬ್ಬರಿಗೆ ಸಹಾಯ ಮಾಡುತ್ತಾ ಕೂರಲು ಆಗಲ್ಲ..! ನಟಿ ವಿರುದ್ಧ ಶಿವಣ್ಣ ಗರಂ..!

Date:

ನಟಿ ವಿಜಯಲಕ್ಷ್ಮಿ ಚಿಕಿತ್ಸೆ ಖರ್ಚು ಬರಿಸಲು ಹಣವಿಲ್ಲ ಯಾರಾದರು ಸಹಾಯ ಮಾಡಿ ಎಂದು ಕೇಳಿಕೊಂಡಿದ್ದರು.
ಆದರೆ, ಮತ್ತೊಂದು ಕಡೆ ವಿಜಯಲಕ್ಷ್ಮಿ ಅವರ ಬಗ್ಗೆ ಅನುಮಾನ ಕೂಡ ವ್ಯಕ್ತವಾಗುತ್ತಿತ್ತು. ಯಾಕೆಂದರೆ ಅವರು ಆಸ್ಪತ್ರೆ ಸೇರಿದ ದಿನದಿಂದಲೂ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ, ನಿಜಕ್ಕೂ ಆರೋಗ್ಯ ಸರಿ ಇಲ್ವಾ.? ಎಂಬ ಅನುಮಾನಗಳು ಎಲ್ಲರನ್ನು ಕಾಡತೊಡಗಿತ್ತು. ಇದರ ನಡುವಲ್ಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ನಟಿ ವಿಜಯಲಕ್ಷ್ಮಿ ಒಂದಿಷ್ಟು ವೀಡಿಯೋಗಳನ್ನು ಮಾಡಿ ಹರಿಬಿಟ್ಟಿದ್ದರು. ಇದರಲ್ಲಿ ಚಿತ್ರರಂಗದವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವುದರ ಜೊತೆಗೆ ಶಿವಣ್ಣ ಹಾಗೂ ಅವರ ಸಹೋದರರು ನನ್ನ ಸಹಾಯಕ್ಕೆ ಬರುತ್ತಿಲ್ಲ ಎಂದು ದೂರುವ ಮೂಲಕ ರಾಜ್ ಫ್ಯಾಮಿಲಿಯ ವಿರುದ್ಧ ಮಾತನಾಡಿದ್ದರು.

ಇದಕ್ಕೆ ಸಂಭಂದಪಟ್ಟಂತೆ ಇದೀಗ ನಟ ಶಿವರಾಜ್ ಕುಮಾರ್ ಸಹ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಶಿವರಾಜ್ ಕುಮಾರ್ ಅಭಿನಯದ ‘ಕವಚ’ ಸಿನಿಮಾ ಏಪ್ರಿಲ್ 5ಕ್ಕೆ ತೆರೆಕಾಣುತ್ತಿದೆ. ಈ ಪತ್ರಿಕಾಗೋಷ್ಠಿಯನ್ನು ಮೈಸೂರಿನಲ್ಲಿ ಕರೆದಿದ್ದ ಚಿತ್ರತಂಡ ಚಿತ್ರದ ಬಗ್ಗೆ ಮಾತನಾಡುತ್ತಿರುವಾಗ ನಟಿ ವಿಜಯಲಕ್ಷ್ಮಿ ಅವರ ವಿಚಾರವು ಕೂಡಾ ಪ್ರಸ್ತಾಪವಾಗಿದೆ. ಈಗ ಅವರ ಬಗ್ಗೆ ಏನು ಮಾತನಾಡಲ್ಲ ಎಂದ ಶಿವಣ್ಣ ಒಂದಿಷ್ಟು ವಿಚಾರಗಳನ್ನು ಮಾದ್ಯಮದವರ ಮುಂದೆ ಹಂಚಿಕೊಂಡಿದ್ದಾರೆ.

ವಿಜಯಲಕ್ಷ್ಮಿ ಒಬ್ಬರಿಗೆ ಸಹಾಯ ಮಾಡುತ್ತಾ ಕೂರಲು ಆಗಲ್ಲ. ಬಲಗೈಯಲ್ಲಿ ಮಾಡಿದ್ದ ಸಹಾಯ ಎಡಗೈಗೆ ಗೊತ್ತಾಗಬಾರದು. ದೇವರು ಇದ್ದಾನೆ ನೋಡುತ್ತಾ ಇರ್ತಾನೆ. ಅವರ ಮನಸ್ಸಿಗೆ ಏನು ಬರುತ್ತೊ ಅದನ್ನ ಮಾತಾಡುತ್ತಾ ಇರಲಿ ನಾವು ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ, ಎಲ್ಲ ಸರಿ ಇದ್ದವರಿಗೆ ಕಷ್ಟಪಟ್ಟು ಕೆಲಸ ಮಾಡೋಕೆ ಆಗುವುದಿಲ್ಲವಾ. ಎಷ್ಟೋ ಜನ ಗಾರ್ಮೆಂಟ್ಸ್ ಗಳಲ್ಲಿ ಕೆಲಸ ಮಾಡುತ್ತಾರೆ. ಅವರನ್ನು ನೋಡಿದ್ರೆ ಹೆಮ್ಮೆ ಎನಿಸುತ್ತೆ. ಕಷ್ಟ ಪಡೋದನ್ನ ನೋಡಿದ್ರೆ ಅವರಿಗೆ ಕೈ ಮುಗಿಯಬೇಕು ಅನಿಸುತ್ತೆ ಎಂದು ಹೇಳುವ ಮೂಲಕ ನಟಿ ವಿಜಯ ಲಕ್ಷಿ ಅವರ ವಿರುದ್ಧ ಕಿಡಿಕಾರಿದ್ದಾರೆ.

 

Share post:

Subscribe

spot_imgspot_img

Popular

More like this
Related

ಕಾರಾಗೃಹದಲ್ಲಿ ಅತ್ಯಾಚಾರಿಗಳಿಗೆ, ಉಗ್ರರಿಗೆ ರಾಜಾತಿಥ್ಯಕ್ಕೆ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ

ಕಾರಾಗೃಹದಲ್ಲಿ ಅತ್ಯಾಚಾರಿಗಳಿಗೆ, ಉಗ್ರರಿಗೆ ರಾಜಾತಿಥ್ಯಕ್ಕೆ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ಬೆಂಗಳೂರು: ಪರಪ್ಪನ...

ಪರಪ್ಪನ ಅಗ್ರಹಾರ ಜೈಲಲ್ಲಿ ಬಿಂದಾಸ್ ಲೈಫ್: ಇಬ್ಬರು ಅಧಿಕಾರಿಗಳ ತಲೆದಂಡ

ಪರಪ್ಪನ ಅಗ್ರಹಾರ ಜೈಲಲ್ಲಿ ಬಿಂದಾಸ್ ಲೈಫ್: ಇಬ್ಬರು ಅಧಿಕಾರಿಗಳ ತಲೆದಂಡ ಬೆಂಗಳೂರು: ಪರಪ್ಪನ...

ಜೈಲಿನ ರಾಜಾತಿಥ್ಯದ ವಿಡಿಯೋ ರಿಲೀಸ್: ದರ್ಶನ್ ಆಪ್ತ ಧನ್ವೀರ್ ಸಿಸಿಬಿ ವಶಕ್ಕೆ!

ಜೈಲಿನ ರಾಜಾತಿಥ್ಯದ ವಿಡಿಯೋ ರಿಲೀಸ್: ದರ್ಶನ್ ಆಪ್ತ ಧನ್ವೀರ್ ಸಿಸಿಬಿ ವಶಕ್ಕೆ! ರೇಣುಕಾಸ್ವಾಮಿ...

ಡಿ ಗ್ಯಾಂಗ್​ ದೋಷಾರೋಪ ನಿರಾಕರಣೆ: ಇಂದು ಸಾಕ್ಷ್ಯ ವಿಚಾರಣೆಗೆ ದಿನಾಂಕ ನಿಗದಿಪಡಿಸುವ ಸಾಧ್ಯತೆ!

ಡಿ ಗ್ಯಾಂಗ್​ ದೋಷಾರೋಪ ನಿರಾಕರಣೆ: ಇಂದು ಸಾಕ್ಷ್ಯ ವಿಚಾರಣೆಗೆ ದಿನಾಂಕ ನಿಗದಿಪಡಿಸುವ...