ಕನ್ನಡತಿ, ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದವರು. ಮೊದಲ ಚಿತ್ರದದಲ್ಲೇ ಭಾರೀ ದೊಡ್ಡ ಮಟ್ಟಿನ ಯಶಸ್ಸು ರಶ್ಮಿಕಾಗೆ ಸಿಕ್ಕಿತು. ನಂತರ ಕನ್ನಡದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ಚಮಕ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರೊಡನೆ ಅಂಜನೀಪುತ್ರ ಸಿನಿಮಾದಲ್ಲಿ ನಟಿಸಿದರು.
ಕನ್ನಡ ಚಿತ್ರಗಳಿಂದ ಹೊರತಾಗಿ ತೆಲುಗು ಸಿನಿಮಾಗಳಲ್ಲಿಯೂ ರಶ್ಮಿಕಾ ಮಿಂಚಿನ ಸಂಚಲನವನ್ನುಂಟು ಮಾಡಿದ್ದಾರೆ. ರಶ್ಮಿಕಾ ಮತ್ತು ಕಿರಿಕ್ ಪಾರ್ಟಿಯ ಹೀರೋ ರಕ್ಷಿತ್ ನಡುವೆ ರಿಯಲ್ ಲೈಫ್ನಲ್ಲೂ ಲವ್ ಆಗಿತ್ತು. ಅವರಿಬ್ಬರ ನಿಶ್ಚಿತಾರ್ಥ ಕೂಡ ನಡೆದಿತ್ತು. ಆದರೆ, ಬ್ರೇಕಪ್ ಆಗಿದೆ. ತೆಲುಗಿನಲ್ಲಿ ವಿಜಯ್ ದೇವರಕೊಂಡ ಜೊತೆಗೆ ಗೀತಾಗೋವಿದಂ ಚಿತ್ರದಲ್ಲಿ ಲಿಪ್ ಲಾಕ್ ಮಾಡಿದ್ದೇ ಇಬ್ಬರ ಪ್ರೀತಿ ಮುರಿದು ಬೀಳಲು ಕಾರಣ ಎನ್ನಲಾಗಿದೆ. ಆದರೆ, ರಕ್ಷಿತ್ ಆಗಲಿ, ರಶ್ಮಿಕಾ ಆಗಲಿ ಈ ಬಗ್ಗೆ ಏನನ್ನೂ ಹೇಳಿಲ್ಲ.
ಇದೆಲ್ಲಾ ಬೆಳವಣಿಗೆಗಳ ನಡುವೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ನಡುವೆ ಲವ್ ಆಗಿದೆ ಎನ್ನಲಾಗುತ್ತಿದೆ. ಆದರೆ, ಲವ್ ಆಗಿದೆಯೋ ಇಲ್ವೋ ಅವರು ಅತ್ಯಾಪ್ತರಾಗಿದ್ದರು. ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಕ್ಲೋಸ್ ಆಗಿ ಇದ್ದಿದ್ದಂತೂ ನಿಜ. ರಶ್ಮಿಕಾ ದೇವರಕೊಂಡ ಜೊತೆಗಿನ ಫೋಟೋಗಳನ್ನು ಇನ್ಸ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದರು. ಅನೇಕ ಫೋಟೋಗಳು ಪೋಸ್ಟ್ ಮಾಡಲಾಗಿತ್ತು, ಆದರೆ, ಈಗ ರಶ್ಮಿಕಾ ಆ ಫೋಟೋಗಳನ್ನು ತೆಗೆದು ಬಿಟ್ಟಿದ್ದಾರೆ. ಆದ್ದರಿಂದ ಇಬ್ಬರ ನಡುವಿನ ಗೆಳೆತನ ಮುರಿದು ಬಿದ್ದಿದೆ ಎಂದು ಹೇಳಲಾಗುತ್ತಿದೆ.
ವಿಜಯ್ ದೇವರಕೊಂಡ -ರಶ್ಮಿಕಾ ಗೆಳೆತನವೂ ಮುರಿದು ಬಿತ್ತು ಅಂತಿದೆ ಇನ್ಸ್ಟಾಗ್ರಾಂ..!
Date: