ಮಿಳು ಸೂಪರ್ ಸ್ಟಾರ್ ವಿಜಯ್ ಪ್ರಸ್ತುತ ನಿರ್ದೇಶಕ ಅಟ್ಲೀ ಅವರ ನಿರ್ದೇಶನದಲ್ಲಿ ತಲಪತಿ 63 ರಲ್ಲಿ ಅಭಿನಯಿಸುತ್ತಿದ್ದು ದೀಪಾವಳಿ ಬಿಡುಗಡೆಗಾಗಿ ಸಜ್ಜುಗೊಳಿಸುತ್ತಿದ್ದಾರೆ.. ತಲಪತಿ 63 ಅನ್ನು ತಾತ್ಕಾಲಿಕವಾಗಿ ಶೀರ್ಷಿಕೆ ಇಡಲಾಗಿದೆ. ಈಚಿತ್ರದ ನಾಯಕಿಯಾಗಿ ನಯನತಾರ ನಟಿಸಲಿದ್ದು ತನ್ನ ಚಿತ್ರದ ಭಾಗಗಳಿಗೆ ಚಿತ್ರೀಕರಣ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ವರದಿಯಾಗಿರುವಂತೆ, ವಿಜಯ್ ಅವರು ಮೈಕೆಲ್ ಆಗಿ ಫುಟ್ಬಾಲ್ ತರಬೇತುದಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಈಗ ಬಂದಿರುವ ಸುದ್ದಿ ಏನೆಂದರೆ. ಬಾಲಿವುಡ್ನ ಅಗ್ರ ನಟ ಕಿಂಗ್ ಶಾರುಖ್ ಖಾನ್ ಅವರು ಚಿತ್ರದಲ್ಲಿ ಒಂದು ಸಣ್ಣ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಮತ್ತು ಅಭಿಮಾನಿಗಳಿಗೆ ಇದು ಸಂತೋಷದ ಸುದ್ದಿಯಂತೂ ನಿಜ..
ನಿರ್ಮಾಪಕರು ಶಾರೂಖ್ ಖಾನ್ ಅವರನ್ನುಇನ್ನೂ ಭೇಟಿ ಮಾಡಿಲ್ಲ ಇದು ಕಾರ್ಯರೂಪಕ್ಕೆ ಬಂದರೆ, ಇದು ಶಾರುಖ್ ಅವರ ಎರಡನೇ ತಮಿಳು ಚಿತ್ರವಾಗಿದ್ದು, ಈ ಹಿಂದೆ ‘ಹೇ ರಾಮ್’ ಎಂಬ ಚಿತ್ರದಲ್ಲಿ ಕಮಲ್ ಹಾಸನ್ ಅವರೊಂದಿಗೆ ನಟಿಸಿದ್ದರು.
ವಿಜಯ ಮತ್ತು ಅಟ್ಲೀ ಮೂರನೆಯ ಬಾರಿ ಜೊತೆಯಾಗಿದ್ದು ಹಿಂದೆ ‘ಥೆರಿ’, ಮತ್ತು ‘ಮರ್ಸಲ್’ ಚಿತ್ರದಲ್ಲಿ ಕೆಲಸ ಮಾಡಿದ್ದರು ಮತ್ತು ಇದು ಸೂಪರ್ ಹಿಟ್ ಆಗಿದ್ದವು… ಈಗ ಈ ಚಿತ್ರದ ಮೇಲಿನ ಎಕ್ಸ್ಪೆಕ್ಟೇಷನ್ಸ್ ಸೂಪರ್ ಹೈ ಆಗಿದೆ. ತಲಪತಿ 63 ಚಿತ್ರ್ಕಕೆ ಸಂಗೀತವನ್ನು ಎಆರ್ ರಹಮಾನ್ ಸಂಯೋಜಿಸಿದ್ದಾರೆ ಮತ್ತು ಎಜಿಎಸ್ ಸಿನಿಮಾಸ್ ನಲ್ಲಿ ನಿರ್ಮಾಣ ಮಾಡಲಾಗುತ್ತಿದೆ.