ವಿಜಿನ ವಾಪಸ್ ಕೊಟ್ಬಿಡಿ: ವಿಜಯಲಕ್ಷ್ಮಿ ಕಣ್ಣೀರು

Date:

ಸಂಚಾರಿ ವಿಜಯ್ ಅಪಘಾತದ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ವಿಜಯಲಕ್ಷ್ಮಿ ‘ಪವಾಡ ಏನಾದರೂ ಆಗಲಿ, ಉಳಿಸಿಕೊಳ್ಳಲು ಸಾಧ್ಯವಾದರೆ ದಯವಿಟ್ಟು ನಮ್ಮ ವಿಜಿ ಬ್ರೋನ ವಾಪಸ್ ಕೊಟ್ಬಿಡು ದೇವರೇ’ ಎಂದು ಕೇಳಿಕೊಂಡಿದ್ದಾರೆ.

ಸಂಚಾರಿ ವಿಜಯ್ ಆರೋಗ್ಯ ಪರಿಸ್ಥಿತಿ ಬಗ್ಗೆ ವಿಡಿಯೋ ಮೂಲಕ ಮಾತನಾಡಿದ ವಿಜಯಲಕ್ಷ್ಮಿ ‘ಕಳೆದ ವರ್ಷ ನಾನು ಮಲ್ಯ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಮಯದಲ್ಲಿ ಸಂಚಾರಿ ವಿಜಯ್ ಮತ್ತು ಕಾರುಣ್ಯ ರಾಮ್ ನನ್ನ ಯೋಗಕ್ಷೇಮ ವಿಚಾರಿಸಿದವರಲ್ಲಿ ಮೊದಲಿಗರು. ತುಂಬಾ ಪ್ರೀತಿಯಿಂದ, ತುಂಬಾ ಆತ್ಮೀಯತೆಯಿಂದ ನನ್ನ ಭೇಟಿ ಮಾಡಿದರು. ವಿಜಯ್ ಭೇಟಿ ಬಳಿಕ ನನಗೊಬ್ಬ ಸಹೋದರ ಸಿಕ್ಕಿದ್ದರು. ವಿಜಯ್ ಬ್ರೋ ಎಂದು ಕರೆಯುತ್ತಿದ್ದೆ. ಈ ಸುದ್ದಿ ಕೇಳಿದಾಗನಿಂದಲೂ ಇದು ನಿಜ ಆಗಿರಬಾರದು ಅನಿಸುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ವಿಜಿಗೆ ಹೀಗಾಗಿದೆ ಎಂದು ಊಹಿಸಿಕೊಳ್ಳಲು ಸಾಧ್ಯವಿಲ್ಲ. ವಿಜಿ ಬ್ರೋ ನಮ್ಮನ್ನು ಬಿಟ್ಟು ಹೋಗ್ಬೇಕು ಅಂತ ಏಕೆ ಅನಿಸಿತು. ಬಹಳ ಶೋಕದಲ್ಲಿದ್ದೇವೆ. ಪ್ರತಿಭಾನ್ವಿತ ನಟ ಜೊತೆಗೆ ಒಳ್ಳೆಯ ಮನುಷ್ಯ. ಕಲಾವಿದರು ಈ ರೀತಿ ದುರಂತ ಎದುರಿಸುವುದು ಬಹಳ ನೋವು ಉಂಟು ಮಾಡುತ್ತಿದೆ’ ಎಂದು ಭಾವುಕರಾದರು.

‘ದಯವಿಟ್ಟು ವಿಜಿ ಅವರಿಗೆ ಏನಾದರು ಪವಾಡ ಆಗಬಾರದೇ? ದೇವರೇ ಉಳಿಸಿಕೊಳ್ಳುವುದಕ್ಕೆ ಸಾಧ್ಯವಾದರೆ ವಿಜಿನಾ ಕೊಟ್ಬಿಡು. ನಾನು ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ. ಈ ಸುದ್ದಿ ನೋಡಲು ಸಹ ಸಾಧ್ಯವಾಗ್ತಿಲ್ಲ’ ಎಂದು ನಟಿ ವಿಜಯಲಕ್ಷ್ಮಿ ವಿನಂತಿಸಿದರು.

 

 

 

Share post:

Subscribe

spot_imgspot_img

Popular

More like this
Related

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ: HDK

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ:...

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ ಬಿಜೆಪಿಯವರಿಗೆ...

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ...

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು ಮೈಸೂರು:ಸ್ನಾನದ ವೇಳೆ...