ಹೊಸ ಊರು, ಹೊಸ ಜಾಗ ಇವೆಲ್ಲವನ್ನು ನೋಡಲು, ಅಲ್ಲಿಯ ಅನುಭವಿಸಲು ಯಾರಿಗೆ ತಾನೆ ಮನಸ್ಸಿಲ್ಲ ಹೇಳಿ. ಶೂಟಿಂಗ್ ನ ಬ್ಯುಸಿ ಶೆಡ್ಯೂಲ್ ಗಳ ವಿದೇಶ ಪ್ರವಾಸ ಮಾಡುತ್ತಿದ್ದಾರೆ ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ಚಂದ್ರನ್ ಪ್ರವಾಸದ ಸುಂದರ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿ ತಮ್ಮ ಸಂತಸವನ್ನು ಶೇರ್ ಮಾಡುತ್ತಿದ್ದಾರೆ ಈ ದಂಪತಿ.
ಬೇಸಿಗೆ ಬಂದಾಗೆಲ್ಲ ನನಗೆ ಟ್ರಿಪ್ ಹೋಗುವುದೆಂದರೆ ತುಂಬಾ ಇಷ್ಟ. ಚಿಕ್ಕಂದಿನಿಂದಲೂ ನನಗೆ ಟ್ರಿಪ್ ಎಂದರೆ ಆಯಿತು. ಒಂದರ್ಥದಲ್ಲಿ ಇದನ್ನು ಹವ್ಯಾಸ ಎಂದರೂ ತಪ್ಪಾಗಲಾರದು. ಅದೆಂಥ ಕೆಲಸಗಳಿದ್ದರೂ, ಬಿಡುವು ಮಾಡಿಕೊಂಡು ಹೊಸ ಹೊಸ ತಾಣಗಳಿಗೆ ಭೇಟಿ ನೀಡುವೆ. ಕೇವಲ ದೇಶಗಳನ್ನು ಸುತ್ತುವುದು ಅಲ್ಲ.
ಅಲ್ಲಿನ ಪರಿಸರ ಮತ್ತು ಬದುಕಿನ ಹಲವು ಸಂಗತಿಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತೇನೆ’ ಎನ್ನುತ್ತಾರೆ ಪ್ರಜ್ವಲ್.
ಪ್ರತಿ ವರ್ಷದಂತೆ ಈ ವರ್ಷ ಅವರು ಹತ್ತು ದಿನಗಳ ಕಾಲ ಪ್ರವಾಸಕ್ಕೆ ಹೋಗಿದ್ದಾರೆ. ಇಟಲಿ, ಪೋಲೆಂಡ್ ಸೇರಿದಂತೆ ಹಲವು ತಾಣಗಳಿಗೆ ಭೇಟಿ ನೀಡಿದ್ದಾರೆ. ‘ಕೇವಲ ಗೂಗಲ್ ನಲ್ಲಿ ನೋಡಿಕೊಂಡು ಖುಷಿ ಪಡುವುದಲ್ಲ. ಬದಲಿಗೆ ಆಯಾ ಸ್ಥಳಗಳಿಗೆ ಹೋಗಿ ಎಂಜಾಯ್ ಮಾಡಬೇಕು. ಆ ಅನುಭವವೇ ಬೇರೆ’ ಎನ್ನುತ್ತಾರೆ ರಾಗಿಣಿ – ಪ್ರಜ್ವಲ್ ದಂಪತಿ.
ಟ್ರಿಪ್ ಮಾಡಲು ಬೇಸಿಗೆ ಬೆಸ್ಟ್ ಸೀಸನ್. ತಮಗಿಷ್ಟವಾದಂತಹ ಸ್ಥಳಗಳಿಗೆ ಆಪ್ತರೊಂದಿಗೆ ಹೋಗಿ, ಸ್ವಲ್ಪ ದಿನಗಳ ಕಾಲ ಮಸ್ತಿ ಮಾಡಿಕೊಂಡು ಬರುವುದರ ಜತೆಗೆ ಅಲ್ಲಿನ ಸಂಗತಿಗಳನ್ನೂ ತಿಳಿದುಕೊಂಡು ಬನ್ನಿ. ಇದಕ್ಕಿಂತ ಖುಷಿ ಲೈಫ್ ನಲ್ಲಿ ಬೇರೆ ಏನಿದೆ? ಆದರೆ ಪ್ರವಾಸಕ್ಕೆ ಹೋಗುವ ಮುನ್ನ ಪಕ್ಕಾ ಪ್ಲಾನ್ ಮಾಡಿಕೊಂಡು ಹೋದರೆ ಹಲವು ಉಪಯೋಗಗಳು ಇವೆ’ ಎನ್ನುತ್ತಾರೆ ಪ್ರಜ್ವಲ್.