ಗಣರಾಜ್ಯೋತ್ಸವಕ್ಕೆ ವಿದೇಶಿ ಮುಖ್ಯ ಅತಿಥಿ ಇಲ್ಲ…ಕಾರಣ ಏನ್ ಗೊತ್ತಾ?

0
39

ಗಣರಾಜ್ಯೋತ್ಸವಕ್ಕೆ ವಿದೇಶಿ ಮುಖ್ಯ ಅತಿಥಿ ಇಲ್ಲ…ಕಾರಣ ಏನ್ ಗೊತ್ತಾ?

ಮಹತ್ವದ ಬೆಳವಣಿಗೆಯೊಂದರಲ್ಲಿ ಈ ಬಾರಿಯ(2021) ಗಣರಾಜ್ಯೋತ್ಸವ ಸಮಾರಂಭಕ್ಕೆ ಯಾವುದೇ ವಿದೇಶಿ ಮುಖ್ಯ ಅತಿಥಿ ಭಾಗವಹಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.

ಈ ಕುರಿತು ಮಾಹಿತಿ ನೀಡಿರುವ ವಿದೇಶಾಂಗ ಇಲಾಖೆ ವಕ್ತಾರ ಅನುರಾಗ್ ಶ್ರೀವಾತ್ಸವ್, ಮಾರಕ ಕೊರೊನಾ ವೈರಸ್ ಜಾಗತಿಕ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಯಾವುದೇ ವಿದೇಶಿ ಮುಖ್ಯ ಅತಿಥಿಯನ್ನು ಕರೆಯದಿರುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಮೊದಲು ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಈ ಬಾರಿಯ ಗಣರಾಜ್ಯೋತ್ಸವದ ಮುಖ್ಯ ಅತಿಥಿ ಎಂದು ಘೋಷಿಸಲಾಗಿತ್ತು. ಆದರೆ ಇಂಗ್ಲೆಂಡ್‌ನಲ್ಲಿ ಕಾಣಿಸಿಕೊಂಡ ಕೊರೊನಾ ರೂಪಾಂತರಿಯನ್ನು ಎದುರಿಸಲು, ಬೋರಿಸ್ ಜಾನ್ಸನ್ ತಮ್ಮ ಭಾರತ ಪ್ರವಾಸವನ್ನು ರದ್ದುಗೊಳಿಸಿದ್ದರು.

ರಾಷ್ಟ್ರೀಯ ಜವಾಬ್ದಾರಿ ನಿರ್ವಹಿಸಲು ಭಾರತ ಭೇಟಿಯನ್ನು ರದ್ದುಗೊಳಿಸಿದ್ದಾಗಿ ಬೋರಿಸ್ ಜಾನ್ಸನ್ ಸ್ಪಷ್ಟಪಡಿಸಿದ್ದರು. ಇದೀಗ ಯಾವುದೇ ವಿದೇಶಿ ಅತಿಥಿಗೆ ಆಮಂತ್ರಣ ನೀಡದಿರುವ ನಿರ್ಣಯವನ್ನು ಭಾರತ ಕೈಗೊಂಡಿದೆ.

ಇಷ್ಟೇ ಅಲ್ಲದೇ ಗಣರಾಜ್ಯೋತ್ಸವ ಸಮಾರಂಭದ ಸೇನಾ ಪಥಸಂಚಲನದಲ್ಲೂ ಭಾರೀ ಬದಲಾವಣೆ ಮಾಡಲಾಗಿದ್ದು, ಭಾರತೀಯ ಸೇನೆ ಈ ಬಾರಿ 144 ಯೋಧರ ಪಥಸಂಚಲನದ ಬದಲಾಗಿ 96 ಸೈನಿಕರ ಪಥಸಂಚಲನ ನಡೆಸಲು ನಿರ್ಧರಿಸಿದೆ.

ಇಷ್ಟೇ ಅಲ್ಲದೇ ಗಣರಾಜ್ಯೋತ್ಸವ ಸಮಾರಂಭದ ಸೇನಾ ಪಥಸಂಚಲನದಲ್ಲೂ ಭಾರೀ ಬದಲಾವಣೆ ಮಾಡಲಾಗಿದ್ದು, ಭಾರತೀಯ ಸೇನೆ ಈ ಬಾರಿ 144 ಯೋಧರ ಪಥಸಂಚಲನದ ಬದಲಾಗಿ 96 ಸೈನಿಕರ ಪಥಸಂಚಲನ ನಡೆಸಲು ನಿರ್ಧರಿಸಿದೆ.

ಅಲ್ಲದೇ ಒಟ್ಟು 1.5 ಲಕ್ಷ ಜನರಿಗೆ ಸ್ಥಳಾವಕಾಶ ಇರುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಈ ಬಾರಿ ಕೇವಲ 25 ಸಾವಿರ ಜನರಿಗೆ ಮಾತ್ರ ಅನುಮತಿ ನೀಡಲಾಗಿದೆ.

ಪ್ರತಿ ಬಾರಿ ಗಣರಾಜ್ಯೋತ್ಸವದಲ್ಲಿ 600 ಶಾಲಾ ಮಕ್ಕಳು ಭಾಗವಹಿಸುತ್ತಿದ್ದರು. ಆದರೆ ಈ ಬಾರಿ ಕೇವಲ 160 ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ 15 ವರ್ಷದ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಮಾತ್ರ ಸಮಾರಂಭದಲ್ಲಿ ಭಾಗವಹಿಸಲು ಅನುಮತಿ ನೀಡಲಾಗಿದೆ.

 

LEAVE A REPLY

Please enter your comment!
Please enter your name here