ಯಡಿಯೂರಪ್ಪ 38 ಸಾವಿರ ಕೋಟಿ ನಷ್ಟವಾಗಿದೆ ಎಂದು ವರದಿ ಸಲ್ಲಿಸಿದ್ದು, ಅದನ್ನು ವಾಪಸ್ ಕಳುಹಿಸಲಾಗಿದೆ. ರಾಜ್ಯ ಸಲ್ಲಿಸಿದ ವರದಿ ಕೇಂದ್ರದ ವರದಿಯೊಂದಿಗೆ ತಾಳೆ ಆಗುತ್ತಿಲ್ಲ. ಯಡಿಯೂರಪ್ಪ ಕೇಳಿರುವ ಪರಿಹಾರ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಹೀಗಾಗಿ ಉತ್ತರ ಕರ್ನಾಟಕಕ್ಕೆ ಕೇಂದ್ರದ ನೆರೆ ಪರಿಹಾರ ನೀಡಿಲ್ಲ ಎಂದು ದೇವೇಗೌಡರು ತಿಳಿಸಿದ್ದಾರೆ ಹಾಗು ಜೆಡಿಎಸ್ ಶಾಸಕರು, ಸಂಸದರು ವಿಧಾನಸಭೆ, ಲೋಕಸಭೆಯಲ್ಲಿ ಹೋರಾಟ ನಡೆಸಲಿದ್ದಾರೆ.
ಪ್ರವಾಹ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡದಿರುವುದನ್ನು ವಿರೋಧಿಸಿ ಪಕ್ಷದಿಂದಲೂ ರ್ಯಾಲಿ ನಡೆಸಲಾಗುವುದು. ಸದನದ ಒಳಗೆ ಚುನಾಯಿತ ಪ್ರತಿನಿಧಿಗಳು ಹೋರಾಟ ನಡೆಸಲಿದ್ದು, ಮುಖಂಡರು -ಕಾರ್ಯಕರ್ತರೊಂದಿಗೆ ವಿಧಾನಸೌಧದಿಂದ ಕಾಲ್ನಡಿಗೆಯಲ್ಲಿ ಫ್ರೀಡಂ ಪಾರ್ಕ್ ವರೆಗೆ ರ್ಯಾಲಿ ನಡೆಸುವುದಾಗಿ ದೇವೇಗೌಡರು ತಿಳಿಸಿದ್ದಾರೆ