ಮನುಷ್ಯನ ಜೀವನ ಅಂದ ಮೇಲೆ ಅಲ್ಲಿ ಆತುರತೆ ಕಾತುರತೆ ಇರುವುದು ಸಾಮಾನ್ಯ. ಇದಕ್ಕೆ ಜಾಜಾ ಉದಾಹರಣೆಯಂತೆ ಇದೀಗ ಪ್ರಕರಣವೊಂದು ಬಾರಿ ಸುದ್ದಿಯಾಗುತ್ತಿದೆ.
ವಿಮಾನ ಏರುವ ಆತುರದಲ್ಲಿ ಯಾವುದೋ ಬ್ಯಾಗ್‌ನ್ನು ಅಥವಾ ಯಾವುದೇ ವಸ್ತುವನ್ನು ಬಿಟ್ಟುಬಂದಿದ್ದು ನೋಡಿದ್ದೇವೆ ಆದರೆ ವಿಮಾನ ಏರುವ ಆಸೆಯಲ್ಲಿ ತನ್ನ ಮಗುವನ್ನೇ ಬಿಟ್ಟು ಬಂದು ವಿಮಾನ ಏರಿದ ಘಟನೆಯ ಬಗ್ಗೆ ಎಲ್ಲಾದರೂ ಕೇಳಿದ್ದೀರ ಅಥವಾ ನೋಡಿದ್ದೀರಾ..? ಅಂತಹ ಅಪರೂಪದ ಘಟನೆಯೊಂದು ಇತ್ತೀಚೆಗೆ ಜೆಡ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಈ ಘಟನೆ ನಡೆದ ಬಳಿಕ ಇದರ ಬಗ್ಗೆ ತಿಳಿದ ಸಿಬ್ಬಂದಿ ತಕ್ಷಣವೇ ಎಟಿಸಿಗೆ ಮಾಹಿತಿ ನೀಡಿ, ತಾಯಿ ಹಾಗೂ ಮಗುವನ್ನು ಒಂದು ಮಾಡುವ ಹಿನ್ನೆಲೆಯಲ್ಲಿ ವಿಮಾನವನ್ನು ಮತ್ತೆ ಜೆಡ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಿಂತಿರುಗಿಸಲಾಗಿದೆ.
ಪುನಃ ಜೆಡ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಈ ಮಹಿಳೆ ಮಗುವಿನ ಜತೆ ಮತ್ತೆ ಪ್ರಯಾಣ ಮುಂದುವರಿಸಿದ್ದರು. ವಿಮಾನ ಏರಿ ಕೆಲವು ನಿಮಿಷಗಳವರೆಗೂ ಆಕೆಗೆ ಮಗುವಿನ ನೆನಪೇ ಆಗಲಿಲ್ಲ ಎನ್ನುವುದು ಇಲ್ಲಿ ಗಮನಿಸಬೇಕಾದ ವಿಷಯ.