ಟೀಮ್ ಇಂಡಿಯಾದ ಉಪ ನಾಯಕ ರೋಹಿತ್ ಶರ್ಮಾ ನಾಯಕ ವಿರಾಟ್ ಕೊಹ್ಲಿ ಅವರ ಸ್ಥಾನವನ್ನು ಆಕ್ರಮಿಸಿಕೊಳ್ಳಲಿದ್ದಾರೆ..! ಏನಿದು ಕೊಹ್ಲಿ ಬದಲು ರೋಹಿತ್ ಶರ್ಮಾ ನಾಯಕತ್ವ ವಹಿಸಿಕೊಳ್ಳುತ್ತಾರಾ? ಎಂದು ಪ್ರಶ್ನಿಸುತ್ತಿದ್ದೀರಾ..? ಇಲ್ಲ ಇದು ನಾಯಕ ಸ್ಥಾನ ವಿಚಾರವಲ್ಲ.. ನಂಬರ್ 1 ಬ್ಯಾಟ್ಸ್ಮನ್ ಸ್ಥಾನದ ವಿಷಯ..!
ಹೌದು ಐಸಿಸಿ ರ್ಯಾಕಿಂಗ್ ನಲ್ಲಿ ವಿರಾಟ್ ಕೊಹ್ಲಿ 891 ಪಾಯಿಂಟ್ ಗಳಿಂದ ಸದ್ಯ ನಂಬರ್ 1 ಸ್ಥಾನದಲ್ಲಿದ್ದಾರೆ. 885 ಪಾಯಿಂಟ್ ಗಳೊಂದಿಗೆ ರೋಹಿತ್ ಶರ್ಮಾ ನಂಬರ್ 2ನಲ್ಲಿದ್ದಾರೆ. ವಿಶ್ವಕಪ್ಗೆ ಮುನ್ನ ರೋಹಿತ್ ಶರ್ಮಾ840 ಪಾಯಿಂಟ್ ಹೊಂದಿದ್ದು, ಆಗಲೂ ಎರಡನೇ ಸ್ಥಾನದಲ್ಲೇ ಇದ್ದರು. ವಿಶ್ವಕಪ್ನಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿರುವ ಅವರು 8 ಮ್ಯಾಚ್ ಗಳಲ್ಲಿ 5 ಶತಕ ಒಂದು ಅರ್ಧ ಶತಕದೊಂದಿಗೆ 647ರನ್ ದಾಖಲಿಸಿದ್ದಾರೆ. ಅದರಿಂದ 840 ಪಾಯಿಂಟ್ಗಳಿಂದ 885 ಪಾಯಿಂಟ್ಗಳಿಗೆ ಏರಿದ್ದಾರೆ. ಹೀಗಾಗಿ ಇನ್ನು ಆರೇ ಆರು ಪಾಯಿಂಟ್ ಗಳಿಸಿಕೊಂಡರೆ ವಿರಾಟ್ ಸಮಕ್ಕೆ ಬಂದು ನಿಲ್ತಾರೆ..! ವಿಶ್ವಕಪ್ನಲ್ಲಿ ಸೆಮಿಫೈನಲ್ನಲ್ಲಿ ಉತ್ತಮ ಪ್ರದರ್ಶನ ನೀಡಿ, ಫೈನಲ್ನಲ್ಲೂ ಮಿಂಚಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸದಲ್ಲಿ ನಂಬರ್ 1 ಸ್ಥಾನಕ್ಕೆ ಬರುವ ಸಾಧ್ಯತೆ ಇದೆ.
ವಿರಾಟ್ ಸ್ಥಾನ ಆಕ್ರಮಿಸಿಕೊಳ್ಳಲಿದ್ದಾರೆ ರೋಹಿತ್ ಶರ್ಮಾ..!
Date: