ವಿರಾಟ್ -ಅನುಷ್ಕಾ ಮಗುವಿಗೆ ನಾಮಕರಣ..! ವಿರುಷ್ಕಾ ಜೋಡಿಯ ಕಂದಮ್ಮನ ಹೆಸರೇನು?

Date:

ಮುಂಬೈ: ಜನವರಿ 11 ರಂದು ಅನುಷ್ಕಾ ಮುದ್ದಾದ ಹೆಣ್ಣು ಮಗುವಿನ ಜನ್ಮ ನೀಡಿದ್ದರು. ಇದೀಗ ಅವರ ಮುದ್ದು ಮಗಳಿಗೆ ಹೆಸರನ್ನು ಇಟ್ಟಿರುವ ವಿಚಾರವನ್ನು ಸೋಷಿಲ್ ಮೀಡಿಯಾ ಮೂಲಕವಾಗಿ ರಿವೀಲ್ ಮಾಡಿದ್ದಾರೆ.

ಮುದ್ದು ಮಗಳಿಗೆ ‘ವಮಿಕಾ’ ಎನ್ನುವ ಹೆಸರಿಡುವ ಮೂಲಕವಾಗಿ ನಾಮಕರಣ ಮಾಡಿದ್ದಾರೆ. ತಾಯಿ ದುರ್ಗೆಯೆ ಹೆಸರು ಆಗಿದೆ ಮತ್ತು ವಿರಾಟ್- ಅನುಷ್ಕಾ ಹೆಸರಿನ ಮೊದಲ ಹಾಗೂ ಅಂತ್ಯದ ಅಕ್ಷರ ಜೋಡಿಸಿ ಮಗಳಿಗೆ ಹೆಸರಿಟ್ಟಿದ್ದಾರೆ.

ನಾವಿಬ್ಬರು ಪ್ರೀತಿ, ಕೃತಜ್ಞತೆಯಿಂದ ಬದುಕಿದಂತೆ ನಾವು ವಮಿಕಾಳನ್ನು ಕೂಡ ನಡೆಸಿಕೊಂಡು ಹೋಗುತ್ತೇವೆ. ವಮಿಕಾ ನಮ್ಮ ಜೀವನದಲ್ಲಿ ಬಂದು ಅದೆಲ್ಲವನ್ನು ಮತ್ತೊಂದು ಹಂತಕ್ಕೆ ತಂದಿದ್ದಾಳೆ. ಕೆಲವೊಂದು ಸಂದರ್ಭದಲ್ಲಾದರೂ ಅಳು, ನಗು, ಚಿಂತೆ, ಆನಂದ ಭಾವನೆಗಳನ್ನು ಅನುಭವಿಸಿದ್ದೇವೆ. ಇತ್ತೀಚೆಗೆ ನಿದ್ದೆ ಅಸ್ಪಷ್ಟವಾಗಿದೆ, ಆದರೆ ಹೃದಯ ತುಂಬಿದೆ. ನಿಮ್ಮೆಲ್ಲರ ಆಶಿರ್ವಾದ ಶುಭಾಶಯ, ಪ್ರೀತಿಗೆ ಧನ್ಯವಾದಗಳು ಎಂದು ಬರೆದು ತಮ್ಮ ಮಗುವಿನ ಜೊತೆಗೆ ದಂಪತಿ ಇರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.

ಅಭಿಮಾನಿಗಳಿಗಾಗಿ ತಮ್ಮ ಮದುವೆ ವಿಚಾರದಿಂದ ಹಿಡಿದು ಅವರ ಪ್ರತಿಯೊಂದು ವಿಚಾರವನ್ನು ಸೋಷಿಯಲ್ ಮೀಡಿಯಾ ಮೂಲಕವಾಗಿ ತಿಳಿಸುವ ಈ ಜೋಡಿ ಮುದ್ದು ಮಗಳಿಗೆ ಯಾವ ಹೆಸರು ಇಡುತ್ತಾರೆ ಎಂಬ ಕುರಿತಾಗಿ ಚರ್ಚೆ ನಡೆಯುತ್ತಿತ್ತು. ಭಾರತೀಯ ಕ್ರಿಕೆಟ್ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಈಗ ಮಗಳ ಜೊತೆಗಿರುವ ಫೋಟೋ ಜೊತೆಗೆ ಹೆಸರನ್ನು ಕೂಡ ರಿವೀಲ್ ಮಾಡಿದ್ದಾರೆ. ತಂದೆ-ತಾಯಿಗಳಾಗಿ ಬಡ್ತಿ ಪಡೆದಿರುವ ವಿರುಷ್ಕಾ ದಂಪತಿ ಮಗಳಿಗೆ ಹೆಸಟ್ಟ ವಿಚಾರವನ್ನು ಟ್ವಿಟ್ಟರ್, ಇನ್‍ಸ್ಟಾಗ್ರಾಮ್ ಮೂಲಕವಾಗಿ ಹಂಚಿಕೊಂಡು ಸಂತೋಷವನ್ನು ವ್ಯಕ್ತಪಡಿಸುತ್ತಿದ್ದಾರೆ.


ಟೋಕಿಯೋದ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸಿಸುತ್ತಿದ್ದ 48 ವರ್ಷದ ಯೂಮಿ ಯೋಶಿನೊ, ಮನೆ ಬಿಟ್ಟು ಹೋಗಬೇಕಾಗುತ್ತದೆ ಎಂಬ ಕಾರಣಕ್ಕೆ 10 ವರ್ಷದ ಹಿಂದೆ ಮೃತಪಟ್ಟಿದ್ದ ತನ್ನ ತಾಯಿಯ ಶವವನ್ನು ಫ್ರೀಜರ್‌ನಲ್ಲಿ ಮುಚ್ಚಿಟ್ಟಿದ್ದಳು ಎನ್ನಲಾಗಿದೆ.
ಯೋಶಿನೊ ವಾಸವಿದ್ದ ಅಪಾರ್ಟ್‌ಮೆಂಟ್ ಲೀಸ್ ಪೇಪರ್‌ ಮೇಲೆ ಆಕೆಯ ತಾಯಿಯ ಹೆಸರಿತ್ತು. ಆಕೆಯ ನಿಧನದ ನಂತರ ಯೋಶಿನೊ ಈ ಅಪಾರ್ಟ್‌ಮೆಂಟ್‌ನ್ನು ಬಿಟ್ಟು ಹೋಗಬೇಕಿತ್ತು. ಆದರೆ ಆ ಮನೆ ಬಿಡಲು ಮನಸ್ಸಿನಲ್ಲದ ಯೋಶಿನೊ, ಆಕೆಯ ಸಾವನ್ನೇ ಜಗತ್ತಿನಿಂದ ಮುಚ್ಚಿಟ್ಟು 10 ವರ್ಷ ಅದೇ ಮನೆಯಲ್ಲಿ ವಾಸಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಬಾಡಿಗೆ ಕಟ್ಟಲು ಸಾಧ್ಯವಾಗದ ಯೋಶಿನೊಳನ್ನು ಅಪಾರ್ಟ್‌ಮೆಂಟ್ ಮಾಲೀಕ ಒತ್ತಾಯಪೂರ್ವಕವಾಗಿ ಮನೆ ಖಾಲಿ ಮಾಡಿಸಿದ್ದಾನೆ. ಬಳಿಕ ಕೆಲಸಗಾರ ಮನೆ ಸ್ವಚ್ಛ ಮಾಡುತ್ತಿದ್ದ ವೇಳೆ ಫ್ರೀಜರ್‌ನಲ್ಲಿ 10 ವರ್ಷ ಹಳೆಯ ಮೃತದೇಹ ಪತ್ತೆಯಾಗಿದೆ.
ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ ಅಪಾರ್ಟ್‌ಮೆಂಟ್ ಮಾಲೀಕ, ಇದು ಯೋಶಿನೊ ಅವರ ತಾಯಿಯ ಮೃತದೇಹ ಎಂಬುದನ್ನು ಖಚಿತಪಡಿಸಿದ್ದಾನೆ. ಕೂಡಲೇ ಯೋಶಿನೋಳನ್ನು ವಶಕ್ಕೆ ಪಡೆದ ಪೊಲೀಸರು ಆಕೆಯನ್ನು ವಿಚಾರಣೆಗೆ ಗುರಿಪಡಿಸಿದ್ದಾರೆ.
ವಿಚಾರಣೆ ಸಂದರ್ಭದಲ್ಲಿ 10 ವರ್ಷದಿಂದ ತಾಯಿಯ ಮೃತದೇಹ ಫ್ರೀಜರ್‌ನಲ್ಲಿಟ್ಟಿದ್ದಾಗಿ ಸತ್ಯ ಒಪ್ಪಿಕೊಂಡಿರುವ ಯೋಶಿನೊ, ಮನೆ ಬಿಡಲು ಮನಸ್ಸಿಲ್ಲದೇ ಹೀಗೆ ಮಾಡಿದ್ದಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾಳೆ.
ಯೋಶಿನೊ ತಾಯಿ ತಮ್ಮ 60ನೇ ವಯಸ್ಸಿನಲ್ಲಿ ಮೃತಪಟ್ಟಿದ್ದು, ಯೋಶಿನೊ ಕಳೆದ 10 ವರ್ಷಗಳಿಂದ ತನ್ನ ತಾಯಿಯ ಮೃತದೇಹದೊಮದಿಗೆ ಜೀವನ ನಡೆಸುತ್ತಿದ್ದಳು. ಸದ್ಯ ಯೋಶಿನೋಳನ್ನು ವಶಕ್ಕೆ ಪಡೆದಿರುವ ಪೊಲೀಸರು, ವಿಚಾರಣೆ ಮುಂದುವರೆಸಿದ್ದಾರೆ.

 

Share post:

Subscribe

spot_imgspot_img

Popular

More like this
Related

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು ಮೈಸೂರು:ಸ್ನಾನದ ವೇಳೆ...

ತುಳಸಿ ಗಿಡದಲ್ಲಿನ ಈ ಬದಲಾವಣೆಗಳು ನೀಡುವ ಸೂಚನೆಗಳೇನು..?

ತುಳಸಿ ಗಿಡದಲ್ಲಿನ ಈ ಬದಲಾವಣೆಗಳು ನೀಡುವ ಸೂಚನೆಗಳೇನು..? ಮನೆಯ ಅಂಗಳದಲ್ಲಿ ಬೆಳೆದ ತುಳಸಿ...

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ: ಶಿವಾನಂದ ಪಾಟೀಲ್

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ:...

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್ ಬೆಂಗಳೂರು:...