2019ರ ಐಪಿಎಲ್ ನಲ್ಲಿ ಯಾಕೋ ಏನೋ ಆರ್ಸಿಬಿ ಅದೃಷ್ಟ ನೆಟ್ಟಗಿರಲಿಲ್ಲ, ಆರಂಭದಲ್ಲಿ ಸಾಲು ಸಾಲಾಗಿ ಆರು ಪಂದ್ಯಗಳನ್ನು ಸೋತು ತೀವ್ರವಾದ ಮುಖಭಂಗವನ್ನು ಟೂರ್ನಿಯಲ್ಲಿ ಅನುಭವಿಸಿತು,
ಇದಾದ ನಂತರ ಏಳನೇ ಪಂದ್ಯದಿಂದ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡು ಗೆಲುವಿನ ಟ್ರ್ಯಾಕಿಗೆ ಮರಳಿದ ಆರ್ ಸಿ ಬಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಅಭಿಮಾನಿಗಳಲ್ಲಿ ಐಪಿಎಲ್ ಕಪ್ ನ ಭರವಸೆಯನ್ನು ಮೂಡಿಸಿತ್ತು ಆದರೆ ಮೊನ್ನೆ ನಡೆದ ದೆಹಲಿ ವಿರುದ್ಧದ ಪಂದ್ಯದಲ್ಲಿ ಸೋತ ನಂತರ ಪ್ಲೇ ಆಫ್ ಕನಸು ನುಚ್ಚು ನೂರಾಗಿತ್ತು.
ಇದೀಗ ಸಾಲು ಸಾಲು ಸೋಲುಗಳನ್ನು ಕಂಡ ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಸ್ಥಾನಕ್ಕೆ ಕುತ್ತು ಬಂದಿದೆ, ವಿರಾಟ್ ಕೊಹ್ಲಿ ಸ್ಥಾನಕ್ಕೆ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎ ಬಿ ಡಿವಿಲಿಯರ್ಸ್ ಅವರನ್ನು ಆಯ್ಕೆ ಮಾಡಲು ಆರ್ ಸಿ ಬಿ ಆಡಳಿತ ಮಂಡಳಿ ಚಿಂತನೆಯನ್ನು ನಡೆಸಿದೆ ಎಂದು ಹೇಳಲಾಗುತ್ತಿದೆ.
ಈ ಬಾರಿಯ ಐಪಿಎಲ್ ನಲ್ಲಿ ಸಾಲು ಸಾಲು ಪಂದ್ಯಗಳನ್ನು ಹಾಡುವುದರ ಮೂಲಕ ಸೋಲುಗಳನ್ನು ಕಾಣುವುದರ ಮೂಲಕ ಮಾನಸಿಕವಾಗಿ ಹಾಗೂ ದೈಹಿಕವಾಗಿ ವಿರಾಟ್ ಕೊಹ್ಲಿ ಸಾಕಷ್ಟು ದಣಿದಿದ್ದಾರೆ ಇದರಿಂದ ಮುಂಬರುವ ಏಕದಿನ ವಿಶ್ವಕಪ್ ಮೇಲೆ ಪರಿಣಾಮ ಬೀರಬಾರದು ಎಂಬ ಕಾರಣದಿಂದ ಆರ್ ಸಿ ಬಿ ತಂಡದ ಫ್ರಾಂಚೈಸಿಗಳು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಒಂದು ವೇಳೆ ಈ ನಿರ್ಧಾರವನ್ನು ಟೀಮ್ ಮ್ಯಾನೇಜ್ಮೆಂಟ್ ಕೈಗೊಂಡಿದ್ದೆ ಆದಲ್ಲಿ ಇಂದಿನ ಪಂದ್ಯ ಹಾಗೂ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕಣಕ್ಕಿಳಿಯುವುದು ಅನುಮಾನವಾಗಿದೆ.
ಒಟ್ಟಾರೆ ಮುಂಬರುವ ವಿಶ್ವಕಪ್ಪನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ಕೈಗೊಳ್ಳಲು ಆರ್ಸಿಬಿ ಮ್ಯಾನೇಜ್ಮೆಂಟ್ ಚಿಂತಿಸಿ ರುವುದು ಸ್ವಾಗತಾರ್ಹ ಸಂಗತಿಯಾಗಿದೆ.