ಟೀಮ್ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಗಣಿತವೆಂದ್ರೆ ಭಯವಾಗ್ತಿತ್ತಂತೆ. ಹತ್ತನೇ ತರಗತಿಯಲ್ಲಿ ಗಣಿತ ಪರೀಕ್ಷೆ ಪಾಸ್ ಆಗಲು ಪಟ್ಟ ಪರಿಶ್ರಮದ ಬಗ್ಗೆ ಕೊಹ್ಲಿ ಹೇಳಿದ್ದಾರೆ. ಕ್ರಿಕೆಟ್ ಗಿಂತ ಹೆಚ್ಚು ಪರಿಶ್ರಮಪಟ್ಟಿದ್ದೆ ಎಂದು ಕೊಹ್ಲಿ ಹೇಳಿದ್ದಾರೆ.
100 ಅಂಕಗಳಿಗೆ ಗಣಿತ ಪರೀಕ್ಷೆ ನಡೆಯುತ್ತಿತ್ತು. ನನಗೆ ಕೇವಲ 3 ಅಂಕ ಬರ್ತಿತ್ತು ಎಂದರು ಗಣಿತವನ್ನು ಏಕೆ ಅಧ್ಯಯನ ಮಾಡ್ತಾರೆ ಎಂಬುದು ನನಗೆ ಅರ್ಥವಾಗಲಿಲ್ಲ. ನನಗೆ ಗಣಿತ ಬರ್ತಿರಲಿಲ್ಲ. ಜೀವನದಲ್ಲಿ ಸೂತ್ರಗಳನ್ನು ನಾನು ಎಂದೂ ಬಳಸಿಲ್ಲ ಎಂದ ವಿರಾಟ್ ಕೊಹ್ಲಿ .