ಪ್ರಕಾಶ್ ಪುಲಿಜಲ ನಿರ್ದೇಶನದ ‘ಸಿರಿವೆನ್ನಲ’ ಸಿನಿಮಾದಲ್ಲಿ ಪ್ರಿಯಾಮಣಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ನಡುವೆ ಮತ್ತೊಂದು ಸಿಹಿ ಸುದ್ದಿ ಪ್ರಿಯಾಮಣಿ ಅಭಿಮಾನಿಗಳಿಗೆ ಸಿಗುತ್ತದೆ.
ರಾಣಾ ದಗ್ಗುಬಾಟಿ ನಾಯಕ ನಟರಾಗಿ ಅಭಿನಯಿಸುತ್ತಿರುವ ವಿರಾಟ ಪರ್ವಂ ಎನ್ನುವ ಸಿನಿಮಾದಲ್ಲಿ ನಟಿ ಪ್ರಿಯಾಮಣಿ ಅವರು ಪ್ರಮುಖ ಪಾತ್ರವೊಂದನ್ನು ನಿಭಾಯಿಸುತ್ತಿದ್ದಾರೆ.
ತುರ್ತು ಪರಿಸ್ಥಿತಿ ಹಿನ್ನೆಲೆಯ ಕಥೆಯನ್ನು ಇಟ್ಟುಕೊಂಡು ನಿರ್ಮಿಸಲಾಗುತ್ತಿರುವ ಈ ವಿರಾಟ ಪರ್ವಂನಲ್ಲಿ ಪ್ರಿಯಾಮಣಿ ಕಾಣಿಸಿಕೊಳ್ಳಲಿರುವ ವಿಶೇಷ ಪಾತ್ರ ಯಾವುದು ಎಂಬುದು ಕುತೂಹಲ .
ಈ ಚಿತ್ರವು ರಾಜಕೀಯ ಕಥಾಂದರವನ್ನು ಹೊಂದಿದೆ. ಪ್ರಜಾಪ್ರಭುತ್ವ, ಮಾರ್ಕ್ಸ್ ವಾದ ಮತ್ತು ಮಾನವಹಕ್ಕುಗಳ ವಿಷಯವನ್ನು ಒಳಗೊಂಡಿರುವ ಸಿನಿಮಾವಾಗಿದೆ.ಸಾಯಿ ಪಲ್ಲವಿ ಈ ಸಿನಿಮಾದ ನಾಯಕಿ. ತಬು ಮಾನವ ಹಕ್ಕುಗಳ ಆ್ಯಕ್ಟಿವಿಸ್ಟ್ ರೋಲ್ ನಲ್ಲಿ ಅಭಿನಯಿಸುತ್ತಿದ್ದಾರೆ. ‘ನೀಡಿ ನಾಡಿ ಓಕೆ ಕಥಾ’ ಚಿತ್ರವನ್ನು ನಿರ್ದೇಶಿಸಿದ್ದ ನಿರ್ದೇಶಕ ವೇಣು ಉಡುಗಲ ವಿರಾಟ ಪರ್ವಂಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ವಿರಾಟ ಪರ್ವದಲ್ಲಿ ಪ್ರಿಯಾಮಣಿ ಯಾರು?
Date: