ಇಂದು ಉಪಚುನಾವಣೆ ಫಲಿತಾಂಶ ಹೊರಬಂದಿದೆ ಬಿಜೆಪಿ ಹೆಚ್ಚಿನ ಸ್ಥಾನ ಪಡೆದುಕೊಡಿದೆ ಕಾಂಗ್ರೆಸ್ ಎರಡು ಕ್ಷೇತ್ರದಲ್ಲಿ ಜಯಗಳಿಸಿದ್ದರೆ ಜೆಡಿಎಸ್ ಖಾತೆಯನ್ನೆ ತೆರೆದಿಲ್ಲ ಆದರೆ ಇತ್ತ ಇದ್ದಕೊದ್ದಂತೆ ವಿರೋಧಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.
ಈ ಚುನಾವಣೆಯ ಸಂಪೂರ್ಣ ಹೊಣೆಯನ್ನು ಸಿದ್ದರಾಮಯ್ಯನವರೇ ಹೊತ್ತುಕೊಂಡಿದ್ದು, ಈ ಮಟ್ಟಿಗಿನ ಸೋಲನ್ನು ನಿರೀಕ್ಷಿಸಿರಲಿಲ್ಲ ಎಂದು ಆಪ್ತರ ಮುಂದೆ ಹೇಳಿಕೊಂಡಿರುವ ಅವರು ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆನ್ನಲಾಗಿದೆ. ಅವರ ರಾಜೀನಾಮೆ ಪತ್ರಕೂಡ ಸಿದ್ದಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ ಈ ಚುನಾವಣೆಯಲ್ಲಿ ಅವರು ಹೆಚ್ಚಿನ ಸ್ಥಾನ ಗಳಿಸುತ್ತೆ ಎಂಬ ನಂಬಿಕೆ ಇಟ್ಟುಕೊಂಡುದ್ದರು ಅದಕ್ಕೆ ನಿರಾಶೆ ಆಗಿ ಅವರು ರಾಜೀನಾಮೆ ಕೊಡಲು ನಿರ್ಧಾರ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.