ವಿವಾಹಿತ ಮಹಿಳೆ ಜೊತೆ ಮಾತನಾಡಿದ್ದಕ್ಕೆ ಯುವಕನ ಬೆತ್ತಲೆ ಮಾಡಿ ಹಲ್ಲೆ!
ಹುಬ್ಬಳ್ಳಿ:- ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸ್ ಠಾಣೆಯ ಪಕ್ಕದ ಟಿಪ್ಪು ನಗರದಲ್ಲಿ ವಿವಾಹಿತ ಮಹಿಳೆಗೆ ಜೊತೆ ಮಾತನಾಡಿದ್ದಕ್ಕೆ ಯುವಕನನ್ನು ಬೆತ್ತಲೆ ಮಾಡಿ ಹಲ್ಲೆ ಮಾಡಿರುವ ಘಟನೆ ಜರುಗಿದೆ.
ಜನವರಿ 21 ಮುಜಾಫೀರ್ ಎನ್ನುವಾತ ನಿನ್ನೆ ವಿವಾಹಿತ ಮಹಿಳೆ ಜೊತೆ ಮಾತಾಡಿದ್ದ. ಈ ಹಿನ್ನೆಲೆಯಲ್ಲಿ ಮಹಿಳೆಯ ಸಂಬಂಧಿಕರು ಹತ್ತು ಹದಿನೈದು ಜನರ ಗ್ಯಾಂಗ್ ಇಂದು ಮುಜಾಫೀರ್ ಕೆಲಸ ವೇಳೆ ಹಿಡಿದು ಬೆತ್ತಲ್ಲೇ ಮಾಡಿದ್ದಾರೆ. ಅಲ್ಲದೇ ಬ್ಲೇಡ್ ನಿಂದ ಸಿಕ್ಕ ಸಿಕ್ಕಲ್ಲಿ ಕೊಯ್ದಿದ್ದಾರೆ. ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಕಸಬಾಪೇಟೆ ಠಾಣೆ ಪೊಲೀಸರು ಮೂವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.
ಯುವಕ ಮುಜಾಫೀರ್ ಎನ್ನುವ ಯುವಕ ವಿವಾಹಿತ ಮಹಿಳೆಗೆ ಫೋನ್ ಕರೆ ಮಾಡಿ ಮಾತನಾಡಿದ್ದಾನೆ. ಈ ವಿಚಾರ ಮಹಿಳೆಯ ಸಂಬಂಧಿಕರಿಗೆ ಗೊತ್ತಾಗಿದ್ದು, ಬಳಿಕ ಯುವಕ ಮುಜಾಫೀರ್ನನ್ನು ಅಪಹರಣ ಮಾಡಿ ಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದಾರೆ. ಅಲ್ಲದೇ ಅದೇ ಬೆತ್ತಲೆ ಸ್ಥಿತಿಯಲ್ಲಿ ಮುಜಾಫೀರ್ನನ್ನು ಟಿಪ್ಪು ನಗರಕ್ಕೆ ಕರೆತಂದು ಮನೆಗೆ ಹೋಗು ಎಂದು ತಂದು ಬಿಟ್ಟಿದ್ದಾರೆ. ಸದ್ಯ ಗಾಯಗೊಂಡ ಮುಜಾಫೀರ್ ಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.