ವಿಶೇಷಚೇತನರ ಬದುಕಿಗೆ ಕಣ್ಣಾದ ಡಾಕ್ಟರ್​.. ಇಂಥಾ ದೊಡ್ಡ ಮನಸ್ಸು ಯಾರಿಗಿದೆ ಸ್ವಾಮಿ?

Date:

ಡಾ. ಮಧು ಮಿತಾ ಪುರಿ. ವಿಕಲಚೇತನರ ಬದುಕಿನ ಆಶಾಕಿರಣ. ದೇಗುಲಗಳಲ್ಲಿ ಎಸೆದ ಹೂವಿನಿಂದ ವ್ಯಾಪಾರ ಪ್ರಾರಂಭಿಸಿ ಇಂದು ಯಶಸ್ವಿ ಉದ್ದಿಮಿ ಆಗಿದ್ದಾರೆ. ಸಮಾಜಮುಖಿಯೂ ಕೂಡ. ಕಸದಿಂದ ರಸ ಎಂಬಂತೆ ಎಸೆದ ಹೂವಿನಿಂದಲೇ ಘಮ ಘಮಿಸುವ ‘ಅವಸಾಯಂ’ ಎಂಬ ನೈಸರ್ಗಿಕ ಬಣ್ಣವನ್ನು ತಯಾರಿಸಿ, ಅದನ್ನು ಹಬ್ಬ-ಹರಿದಿನಗಳಲ್ಲಿ ಬಳಸಲು ಜನರಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದ್ದು, ದೆಹಲಿಯಲ್ಲಿ ದೊಡ್ಡ ಉದ್ಯಮಿ ಎನಿಸಿಕೊಂಡಿದ್ದಾರೆ.

ತರ ತರದ ಬಣ್ಣ ತಯಾರಿಸುವ ಉದ್ಯಮಿ ಮಧು ಮಿತಾ ಪುರಿ ಅವರ ಯಶಸ್ಸಿನ ಹಿಂದೆ ‘ಅವಸಾಯಂ’ ಅಡಗಿದೆ. ಮಧುಮಿತಾ ಅವರು, ದೇವಸ್ಥಾನದಲ್ಲಿ ಎಸೆದ ಒಣಗಿದ ಹೂವುಗಳನ್ನು ಒಟ್ಟುಗೂಡಿಸಿ ನದಿಗೆ ಎಸೆಯುವ ಬದಲು ಅದರ ಮರು ಸಂಸ್ಕರಣೆ ಮಾಡಲು ಮುಂದಾದರು. ಒಣಗಿದ ಹೂವುಗಳಿಂದ ಸಾವಯವ ಹಾಗೂ ವೈವಿಧ್ಯಮಯವಾದ ಬಣ್ಣಗಳನ್ನು ಅಲ್ಲಿನ ಜನ ತಯಾರಿಸಲು ಪ್ರಾರಂಭಿಸಿದ್ರು.
ತ್ಯಾಜ್ಯ ಹೂವುಗಳಿಂದ ತಯಾರಿಸಿದ ‘ಅವಸಾಯಂ’ ನನ್ನು ಬಟ್ಟೆಗಳಿಗೆ, ರಂಗೋಲಿ, ಹೋಳಿ ಮತ್ತಿತರ ಹಬ್ಬಗಳಲ್ಲಿ ಬಳಸಲಾಗುತ್ತದೆ. ಈ ಬಣ್ಣಗಳಿಗೆ ದೇವಸ್ಥಾನದಲ್ಲಿ ದೇವರಿಗೆ ಅಲಂಕಾರಿಕವಾಗಿ ನಿತ್ಯವೂ ಉಪಯೋಗಿಸುವ ಹೂವು ಪ್ರಮುಖ ಕಚ್ಚಾಪದಾರ್ಥವಾಗಿದೆ. ಅದರಲ್ಲೂ ದೇವಸ್ಥಾನಗಳಲ್ಲಿ ಹೂವುಗಳನ್ನು ಪ್ರಸಾದದ ರೀತಿಯಲ್ಲಿ ಬರುವ ಭಕ್ತರಿಗೆ ಕೊಡುತ್ತಾರೆ ಎಂದು ಬಣ್ಣ ತಯಾರಿಸುವ ಉದ್ದಿಮೆಗೆ ಕಾರಣೀಕರ್ತರಾದ ಮಧುಮಿತಾ ಪುರಿ ಅವರು ಹೇಳುತ್ತಾರೆ.
ಬಗೆ ಬಗೆಯ ಬಣ್ಣ ತಯಾರಿಸುವ ಹೇಗೆಂದರೆ, ಮೊದಲು ಹೂವುಗಳನ್ನು ಪ್ರತ್ಯೇಕಿಸಬೇಕಾಗುತ್ತದೆ. ಬಳಿಕ ಕತ್ತರಿಸಿ, ಒಣಗಿಸಿ, ಪುಡಿ ಮಾಡಿ ನೈಸರ್ಗಿಕವಾದ ಬಣ್ಣವನ್ನು ಉತ್ಪಾದಿಸಬೇಕಾಗುತ್ತದೆ. ಅಂದರೆ ಸುಮಾರು 100 ಕೆಜಿ ಹೂವುಗಳಿಗೆ 1 ಕೆಜಿಯಷ್ಟು ಒಣಗಿದ ಪುಡಿ ಸಿಗುತ್ತದೆ. ಇದರಲ್ಲಿ ಹೂವಿನ ಸುವಾಸನೆ ಕಳೆದುಕೊಳ್ಳುತ್ತದೆ. ಆದರೆ ಅದರ ನೈಸರ್ಗಿಕ ಬಣ್ಣ ಹಾಗೇ ಉಳಿಯುತ್ತದೆ. ಅದನ್ನು ವಿಭಿನ್ನ ಗಾತ್ರದಲ್ಲಿ ಪ್ಯಾಕ್ ಮಾಡಿ ಮಾರುಕಟ್ಟೆಗೆ ಕಳುಹಿಸಲಾಗುತ್ತದೆ.
ಮಧುಮಿತಾ ಅವರು, ಈ ಅವಸಾಯಂ ಎನ್ನುವ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನು 2004ರಲ್ಲಿ ಪ್ರಾರಂಭಿಸಲಾಯಿತು. ಬಳಿಕ ಹಲವು ಪ್ರಯೋಗ, ಪರೀಕ್ಷೆಗಳನ್ನು ಮಾಡಿ ಇದರಿಂದ ಸಮುದಾಯದ ಆರ್ಥಿಕ ಅಭಿವೃದ್ಧಿ ಸಾಧ್ಯ ಎಂದು ಪ್ರಮಾಣೀಕರಿಸಲಾಯಿತು.

ಅಲ್ಲದೆ 2008ರಲ್ಲಿ ಇದರ ಯಶಸ್ಸಿಗೆ ಸಹಕಾರಿ ತತ್ವವನ್ನು ಅಳವಡಿಸಲಾಯಿತು. ಈ ವಿಧಾನದ ಮೂಲಕ ಕಸ ವಿಲೇವಾರಿಯಿಂದ ಪರಸರದ ಮೇಲಾಗುತ್ತಿದ್ದ ತೊಂದರೆಯನ್ನು ಕಡಿಮೆ ಮಾಡಬಹುದಾಗಿದೆ.
ಅವಸಾಯಂ ವಿಧಾನದ ಮೂಲಕ ಬಣ್ಣ ತಯಾರಿಸಲು ಸದ್ಯ ಮಧುಮಿತಾ ಅವರ ಜೊತೆಯಲ್ಲಿ ಸುಮಾರು 40 ಯುವಕರು, ಬೌದ್ಧಿಕ ನ್ಯೂನತೆಯುಳ್ಳವರು, ಪಾರ್ಶ್ವವಾಯು ಪೀಡಿತರು, ಮನೋವಿಕಲರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಉತ್ತರ ದೆಹಲಿಯಲ್ಲಿರುವ ವಿವಿಧ ದೇವಸ್ಥಾನಗಳು, ಭಾನುವಾರ ಹೊರತುಪಡಿಸಿ ಉಳಿದೆಲ್ಲಾ ದಿನಗಳಲ್ಲೂ 5-ಸ್ಟಾರ್ ಹೊಟೇಲ್ಗಳಿಂದ ಹೂವುಗಳನ್ನು ಸಂಗ್ರಹಿಸುತ್ತಾರೆ.


ಹೀಗೆ ಸಂಗ್ರಹಿಸಿದ ಹೂವುಗಳನ್ನು 45 ಜನ ಅಂಗವಿಕಲರು ವಿವಿಧ ವಿಧಾನಗಳಲ್ಲಿ ಬಣ್ಣ ತಯಾರಿಸುತ್ತಾರೆ. ಇದೇ ಹೂವುಗಳಿಂದ 15 ಮಂದಿ ದೃಷ್ಟಿ ಕಳೆದುಕೊಂಡಿರುವವವರ ಕೈಯಲ್ಲಿ ಮಾಡಿದ ಊದುಬತ್ತಿ ತಯಾರಿಸುತ್ತಾರೆ. ಇನ್ನು ಮಧುಮಿತಾ ಅವರ ಸಮಾಜಮುಖಿ ಕಾರ್ಯಕ್ಕೆ ದೆಹಲಿಯ 6 ಸ್ವಯಂಸೇವಾ ಸಂಸ್ಥೆಗಳು ಕೈಜೋಡಿಸಿದ್ದು, ವಿವಿಧ ಹೊಟೇಲ್ ಹಾಗೂ ದೇವಸ್ಥಾನಗಳು ಸ್ವಯಂಪ್ರೇರಣೆಯಿಂದ ಹೂವಿನ ತ್ಯಾಜ್ಯಗಳನ್ನು ಇವರಿಗೆ ನೀಡುತ್ತಿವೆ.
ಅವಸಾಯಂ ಸಂಸ್ಥೆಯು ಮಾಡುತ್ತಿರುವ ಈ ಕೆಲಸವನ್ನು ಕೇಂದ್ರ ಪರಿಸರ ಸಚಿವಾಲಯ ಗುರುತಿಸಿ ಗೌರವಿಸಿದೆ. ಅಲ್ಲದೆ, ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗದ ಏಷ್ಯಾ-ಪೆಸಿಫಿಕ್ ವಿಭಾಗವು 2013ರಲ್ಲಿ ಮಧುಮಿತಾ ಅವರಿಗೆ ‘ವಾರ್ಷಿಕ ವಿಕಲಚೇತನರನ್ನೊಳಗೊಂಡ ವ್ಯಾಪಾರೋದ್ಯಮ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇವರ ಉದ್ಯಮ ಇತರರಿಗೂ ಸ್ಫೂರ್ತಿಯಾಗಿದೆ..

Share post:

Subscribe

spot_imgspot_img

Popular

More like this
Related

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....