ಹೌದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ತೆಗೆದುಕೊಳ್ಳುತ್ತಿದ್ದಂತೆ . ಮೈತ್ರಿ ಸರ್ಕಾರದಲ್ಲಿ ಬಹುದೊಡ್ಡ ರೀತಿಯಲ್ಲಿ ಭಿನ್ನಮತ ಸ್ಫೋಟವಾಗಿದ್ದು ಒಬ್ಬರ ಮೇಲೊಬ್ಬರು ಸರ್ಕಾರ ಬಿಡಲಿಕ್ಕೆ ನೀವೇ ಕಾರಣ ಎಂಬ ಮಾತುಗಳನ್ನು ಕೂಡ ಹೇಳಿಕೊಂಡರು . ಸಿದ್ದರಾಮಯ್ಯ ಕುಮಾರಸ್ವಾಮಿ ಅವರ ಮಧ್ಯದಲ್ಲೂ ಸ್ವಲ್ಪ ಬಿರುಕು ಮೂಡಿತ್ತು ,
ಇದೆಲ್ಲದರ ಮಧ್ಯದಲ್ಲಿ ರಾಜ್ಯಾದ್ಯಂತ ಮಳೆಯಿಂದಾಗಿ ಜನ ಸಂಕಷ್ಟಕ್ಕೀಡಾಗಿದ್ದರು ಆ ಪ್ರದೇಶಗಳಿಗೆಲ್ಲಾ ಎಚ್ ಡಿ ಕುಮಾರಸ್ವಾಮಿ ಅವರು ಸಹ ಭೇಟಿ ನೀಡಿ ಸಾಂತ್ವನ ಹೇಳಿ ಬಂದಿದ್ದರೂ ಇದೀಗ ಅದೆಲ್ಲದರ ಮಧ್ಯೆ ಕುಮಾರಸ್ವಾಮಿ ಅವರು ನಾಲ್ಕು ದಿನ ಮಲೇಷ್ಯಾಗೆ ವಿಶ್ರಾಂತಿ ಪಡೆಯಲಿಕ್ಕಾಗಿ ಹೋಗಿದ್ದಾರೆ . ಈಗ ಜೆಡಿಎಸ್ ಸರ್ಕಾರ ಹಾಗೂ ಕಾಂಗ್ರೆಸ್ ಸರ್ಕಾರದ ಮಧ್ಯೆ ಮೈತ್ರಿ ಬಿರುಕು ಮೂಡಿದೆ ಎಂಬ ಮಾತು ಕೂಡ ರಾಜಕೀಯ ವಲಯದಲ್ಲಿ ಹರಿದಾಡ್ತಿದೆ . ಮೈತ್ರಿ ಸರ್ಕಾರದ ಮುಂದಿನ ನಡೆ ಏನು ಎಂಬ ಪ್ರಶ್ನೆ ಕೂಡ ಕೇಳಿಬರುತ್ತಿದೆ .