ನವದೆಹಲಿ : ಇಂಗ್ಲೆಂಡ್ ಮೂಲದ ಗ್ಲೋಬಲ್ ಮಾರ್ಕೆಟ್ ರಿಸರ್ಚ್ ಕಂಪನಿ ಯೂರೋಮಾನಿಟರ್ ಇಂಟನ್ಯಾಷನಲ್ ಸ್ಟೇಟ್ಸ್ ವಿಶ್ವದ 100 ಜನಪ್ರಿಯ ನಗರಗಳ ಪಟ್ಟಿಯನ್ನು ತಯಾರಿಸಿದ್ದು, ಮೊದಲ ಬಾರಿಗೆ ಬೆಂಗಳೂರು ಸ್ಥಾನ ಪಡೆದಿದೆ. ಈ ಪಟ್ಟಿಯಲ್ಲಿ ಬೆಂಗಳೂರು ಸೇರಿದಂತೆ ದೇಶದ 7 ನಗರಗಳು ಸ್ಥಾನ ಪಡೆದಿವೆ.
ದೆಹಲಿ, ಮುಂಬೈ, ಆಗ್ರಾ, ಚೆನ್ನೈ, ಜೈಪುರ, ಕೊಲ್ಕತ್ತಾ, ಬೆಂಗಳೂರು ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಪ್ರಮುಖ ನಗರಗಳು. ದೆಹಲಿ ಪ್ರಸ್ತುತ 11ನೇ ಸ್ಥಾನದಲ್ಲಿದ್ದು, 2019ರ ವರದಿಯಲ್ಲಿ 8ನೇ ಸ್ಥಾನಕ್ಕೇರಲಿದೆ ಎಂದು ಸಂಸ್ಥೆ ಅಂದಾಜಿಸಿದೆ. ಮುಂಬೈ 14ನೇ, ಆಗ್ರಾ 26ನೇ, ಚೆನ್ನೈ 36ನೇ ಜೈಪುರ 34ನೇ, ಕೋಲ್ಕತ್ತಾ 76ನೇ ಸ್ಥಾನದಲ್ಲಿದೆ. ಹಾಂಕಾಂಗ್ ವಿಶ್ವದ ಅತ್ಯಂತ ಪ್ರಸಿದ್ಧ ನಗರವಾಗಿ ಮುಂದುವರಿದಿದೆ.