ವಿಷ್ಣು ದಾದಾ ಬಗ್ಗೆ ಮಾತಾಡಿದ್ದಕ್ಕೆ ಅತ್ತು ಕ್ಷಮೆ ಕೇಳಿದ ರಂಗರಾಜು..!
ಸಾಹಸ ಸಿಂಹ ವಿಷ್ಣು ವರ್ಧನ್ ಅವರ ಕುರಿತಂತೆ ಆಕ್ಷೇಪಾರ್ಹ ಹೇಳಿಕೆ ನೀಡಿ ಕನ್ನಡಿಗರ ಆಕ್ರೋಶಕ್ಕೆ ಕಾರಣರಾಗಿದ್ದ ತೆಲುಗು ನಟ ವಿಜಯ್ ರಂಗರಾಜು ಕೊನೆಗೂ ದಾದಾ ಅಭಿಮಾನಿಗಳ ಕ್ಷಮೆ ಯಾಚಿಸಿದ್ದಾರೆ.
ಈ ಹಿಂದೆ ತೆಲುಗು ಸಂದರ್ಶನವೊಂದರಲ್ಲಿ ನಟ ವಿಷ್ಣು ವರ್ಧನ್ ರ ಕುರಿತಂತೆ ಬಾಯಿಗೆ ಬಂದಂತೆ ಮಾತನಾಡಿದ್ದ ತೆಲುಗು ನಟ ವಿಜಯ್ ರಂಗರಾಜು ಕೊನೆಗೂ ವಿಷ್ಣು ಕುಟುಂಬದ ಕ್ಷಮೆ ಯಾಚಿಸಿದ್ದಾರೆ.
ಈ ಕುರಿತಂತೆ ವಿಡಿಯೋ ಮಾಡಿರುವ ನಟ ವಿಜಯ್ ರಂಗರಾಜು, ‘ನಾನು ವಿಷ್ಣು ದಾದಾ ಬಗ್ಗೆ ತಪ್ಪು ಮಾತಾಡಿದ್ದೇನೆ, ನನ್ನನ್ನು ಕ್ಷಮಿಸಿ ಬಿಡಿ. ನಾನು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದೇನೆ. ನಾನು ಈಗ ಕೊರೊನಾದಿಂದ ಬಳಲುತ್ತಿದ್ದೇನೆ. ವಿಷ್ಣು ಅವರ ಅಭಿಮಾನಿಗಳಿಗೆ, ವಿಷ್ಣು ಅವರ ಕುಟುಂಬದವರಿಗೆ, ಟಾಪ್ ನಟರಾದ ಪುನೀತ್ ರಾಜ್‌ಕುಮಾರ್, ಸುದೀಪ್, ಉಪೇಂದ್ರ ಅವರಲ್ಲಿ ಬೇಡಿ ಕೊಳ್ಳುತ್ತಿದ್ದೇನೆ. ನಾನು ಮಾಡಿದ್ದು ದೊಡ್ಡ ತಪ್ಪು. ನನ್ನನ್ನು ಕ್ಷಮಿಸಿಬಿಡಿ. ನಾನು ವಿಷ್ಣು ದಾದಾ ಬಗ್ಗೆ ಮಾತಾಡಿದ್ದು ತಪ್ಪು. ಈ ತಪ್ಪಿಗೆ ಈಗ ಶಿಕ್ಷೆ ಅನುಭವಿಸುತ್ತಿದ್ದೇನೆ. ಕೊರೊನಾದಿಂದ ಬಳಲುತ್ತಿದ್ದೇನೆ. ನಾನು ಪಾಪ ಮಾಡಿದ್ದೇನೆ’ ಎಂದು ಗೋಳಾಡುತ್ತ ಕ್ಷಮೆ ಕೇಳಿದ್ದಾರೆ.
ರೋಹಿತ್ 3 ನೇ ದ್ವಿಶತಕಕ್ಕೆ 3 ನೇ ವರ್ಷ..!
ಭಾರತೀಯ ಕ್ರಿಕೆಟ್ ತಂಡದ ಅದ್ಭುತ ಆಟಗಾರ ರೋಹಿತ್ ಶರ್ಮಾ ವಿಶ್ವ ಕ್ರಿಕೆಟ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಒಂದು ದ್ವಿಶತಕ ದಾಖಲಿಸುವುದೇ ಶ್ರೇಷ್ಠ ಸಾಧನೆಯೆನಿಸಿರುವಾಗ ರೋಹಿತ್ ಶರ್ಮಾ ಈ ಸಾಧನೆಯನ್ನು ಒಂದಲ್ಲ ಎರಡಲ್ಲ ಮೂರು ಬಾರಿ ಮಾಡಿ ತನ್ನ ಪರಾಕ್ರಮ ಮೆರೆದಿದ್ದಾರೆ.
ರೋಹಿತ್ ಶರ್ಮಾ ಇದೇ ದಿನ ಅಂದರೆ ಡಿಸೆಂಬರ್ 13 ರಂದು 2017ರಲ್ಲಿ ತನ್ನ ಮೂರನೇ ದ್ವಿಶತಕವನ್ನು ಸಿಡಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ಈವರೆಗೂ ಯಾರಿಂದಲೂ ಸಾಧ್ಯವಾಗದನ್ನು ಹಿಟ್ ಮ್ಯಾನ್ ರೋಹಿತ್ ಶರ್ಮಾ ಸಾಧಿಸಿದ್ದಾರೆ.
ರೋಹಿತ್ ಶರ್ಮಾ ಇದೇ ದಿನ ಅಂದರೆ ಡಿಸೆಂಬರ್ 13 ರಂದು 2017ರಲ್ಲಿ ತನ್ನ ಮೂರನೇ ದ್ವಿಶತಕವನ್ನು ಸಿಡಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ಈವರೆಗೂ ಯಾರಿಂದಲೂ ಸಾಧ್ಯವಾಗದನ್ನು ಹಿಟ್ ಮ್ಯಾನ್ ರೋಹಿತ್ ಶರ್ಮಾ ಸಾಧಿಸಿದ್ದಾರೆ.
ವಿಶ್ವ ಕ್ರಿಕೆಟ್‌ನಲ್ಲಿ ಮೊದಲಿಗೆ ಈ ಸಾಧನೆಯನ್ನು ಸಚಿನ್ ತೆಂಡೂಲ್ಕರ್ ಮಾಡಿದ್ದರು. ಆದಾದ ಬಳಿಕ ಸೆಹ್ವಾಗ್ ಕೂಡ ದ್ವಿಶತಕವನ್ನು ಸಿಡಿಸಿದ್ದರು. 2013ರಲ್ಲಿ ಈ ಸಾಧನೆಯನ್ನು ಮುನರಾವರ್ತಿಸುವ ಮೂಲಕ ಮೂರನೆಯ ಕ್ರಿಕೆಟಿಗನಾಗಿ ಈ ದಿಗ್ಗಜರ ಸಾಲಿಗೆ ರೋಹಿತ್ ಶರ್ಮಾ ಸೇರಿಕೊಂಡಿದ್ದರು. ರೋಹಿತ್ ಶರ್ಮಾ ಅವರ ಮೊದಲ ದ್ವಿಶತಕ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಿಡಿದಿತ್ತು. 159 ಎಸೆತಗಳಲ್ಲಿ 12 ಬೌಂಡರಿ ಹಾಗೂ 16 ಸಿಕ್ಸರ್‌ಗಳ ನೆರವಿನಿಂದ ಅಂದು 209 ರನ್ ಸಿಡಿಸಿದ್ದರು.
ರೋಹಿತ್ ಶರ್ಮಾ ತಮ್ಮ ಎರಡನೇ ದ್ವಿಶತಕವನ್ನು ಶ್ರೀಲಂಕಾ ವಿರುದ್ಧ ಈಡನ್ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಬಾರಿಸಿದರು. ಆ ಪಂದ್ಯದಲ್ಲಿ ಏಕದಿನ ಕ್ರಿಕೆಟ್‌ನ ಸರ್ವಾಧಿಕ 264 ರನ್ ಸಿಡಿಸಿ ಮಿಂಚಿದ್ದರು ರೋಹಿತ್ ಶರ್ಮಾ. 173 ಎಸೆತಗಳಲ್ಲಿ 33 ಬೌಂಡರಿ ಹಾಗೂ 9 ಸಿಕ್ಸರ್‌ಗಳ ನೆರವಿನಿಂದ ಈ ದಾಖಲೆಯ ಮೊತ್ತ ಹರಿದುಬಂದಿತ್ತು.
ಮೂರನೇ ದ್ವಿಶತಕಕ್ಕೆ ಸಾಕ್ಷಿಯಾದ ಮೊಹಾಲಿ
ರೋಹಿತ್ ಶರ್ಮಾ ಸಿಡಿಸಿದ ಮೂರನೇ ದ್ವಿಶತಕವೂ ಕೂಡ ಶ್ರೀಲಂಕಾ ವಿರುದ್ಧವೇ ಬಂದಿತ್ತು. ಮೊಹಾಲಿಯಲ್ಲಿ ನಡೆದ ಆ ಪಂದ್ಯದಲ್ಲಿ ರೋಹಿತ್ 153 ಎಸೆತಗಳಲ್ಲಿ 208 ರನ್ ಸಿಡಿಸಿದ್ದರು. ಇದರಲ್ಲಿ 13 ಬೌಂಡರಿ ಹಾಗೂ 12 ಸಿಕ್ಸರ್ ಒಳಗೊಂಡಿತ್ತು. ಕುತೂಹಲಕಾರಿ ಸಂಗತಿಯೆಂದರೆ ಈ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು.