ವೀಕೆಂಡ್ ವಿತ್ ರಮೇಶ್ ಶೋನ ಸಾಧಕರ ಸ್ಥಾನದಲ್ಲಿ ಸ್ಯಾಂಡಲ್ ವುಡ್ ಕ್ವೀನ್ !?

Date:

ಒಂದ್ಕಾಲದಲ್ಲಿ ಸ್ಯಾಂಡಲ್​ವುಡ್​ ಕ್ವೀನ್​ ಆಗಿ ದರ್ಬಾರ್ ನಡೆಸಿದ ಪದ್ಮಾವತಿ ರಾಜಕೀಯರಂಗಕ್ಕಿಳಿದು, ಚಿತ್ರರಂಗದಿಂದಲೇ ದೂರಾಗಿದ್ರು.. ಇವತ್ತಿಗೂ ಸ್ಯಾಂಡಲ್​​ವುಡ್​​ನಲ್ಲಿ ರಮ್ಯಾ ಕ್ರೇಝ್ ಆಗ್ಲಿ, ಚಾರ್ಮ್​ ಆಗ್ಲಿ ಕಿಂಚಿತ್ತೂ ಕಡಿಮೆಯಾಗಿಲ್ಲ.. ಸದ್ಯ ಪದ್ಮಾವತಿಗೆ ಡೆಲ್ಲಿ ಪಾಲಿಟಿಕ್ಸ್ ಸಾಕಾದಂತೆ ಕಾಣ್ತಿದ್ದು, ಮತ್ತೆ ಬಣ್ಣದಲೋಕದತ್ತ ಮನಸು ಮಾಡಿದಂತೆ ಕಾಣ್ತಿದೆ..

2012ರಲ್ಲಿ ಅನಿರೀಕ್ಷಿತವಾಗಿ ರಾಜಕೀಯರಂಗ ಪ್ರವೇಶಿಸಿದ ರಮ್ಯಾ, ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಒಮ್ಮೆ ಗೆದ್ದು ಮತ್ತೊಮ್ಮೆ ಸೋಲನುಭವಿಸಿದ ರಮ್ಯಾ ಇದ್ದಕ್ಕಿಂದಂತೆ ಮಂಡ್ಯ ತೊರೆದು ಡೆಲ್ಲಿ ಸೇರಿದ್ರು.. ಮಂಡ್ಯದಲ್ಲಿ ಮಾಡಿದ್ದ ಬಾಡಿಗೆ ಮನೆಯನ್ನ ರಾತ್ರೋರಾತ್ರಿ ಖಾಲಿ ಮಾಡಿ ಮಂಡ್ಯ ಜನರ ಕೆಂಗಣ್ಣಿಗೂ ಗುರಿಯಾಗಿದ್ರು.. ಕೆಲ ವರ್ಷಗಳಿಂದ ಕಾಂಗ್ರೆಸ್​ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆಯಾಗಿ ಕೆಲಸ ಮಾಡ್ತಿರೋ ಪದ್ಮಾವತಿ ತಮ್ಮ ಪೋಸ್ಟ್​ಗಳಿಂದ ಸದ್ದು ಸುದ್ದಿ ಮಾಡ್ತಾ ಬರ್ತಿದ್ದಾರೆ..

ಇತ್ತೀಚೆಗೆ ರಮ್ಯಾ ಜನರಿಗೆ  ಕಾಣಿಸಿಕೊಂಡಿದ್ದು ಕಡಿಮೆ.. ಮಂಡ್ಯದಲ್ಲಿ ಕಳೆದ ಮೂರು ಚುನಾವಣೆಗಳಿಗೆ ವೋಟ್ ಹಾಕೋದಕ್ಕೂ ಆಕೆ ಬರಲೇಯಿಲ್ಲ.. ಇದೀಗ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸಾಧಕರ ಸೀಟ್​​ನಲ್ಲಿ ರಮ್ಯಾ ಕಾಣಿಸಿಕೊಳ್ಳೋ ಸುದ್ದಿ ಬಂದಿದೆ.. ಕಳೆದ 3 ಸೀಸನ್​​ನಲ್ಲಿ ವೀಕೆಂಡ್ ಟೆಂಟ್​​ ಸಿಂಹಾಸನದಲ್ಲಿ ಕೂರಿಸೋ ಪ್ರಯತ್ನ ಮಾಡಲಾಗಿತ್ತು.. ಆದ್ರೆ ಅದು ಸಕ್ಸಸ್ ಆಗಿರಲಿಲ್ಲ.. ನಾಲ್ಕನೇ ಸೀಸನ್​ಗೆ ಅತಿಥಿಯಾಗಿ ಬರಲು ರಮ್ಯಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ..

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...