ವೀಕ್ ಎಂಡ್ ವಿತ್​ ರಮೇಶ್​ ನಲ್ಲಿ ರಾಹುಲ್ ದ್ರಾವಿಡ್​?

Date:

ಜೀ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ. ಟೀಮ್ ಇಂಡಿಯಾದ ಮಾಜಿ ನಾಯಕ, ಹೆಮ್ಮೆಯ ಕನ್ನಡ ರಾಹುಲ್ ದ್ರಾವಿಡ್​ ಅವರು ಬರಬೇಕು ಎನ್ನುವುದು ಎಲ್ಲರ ಹೆಬ್ಬಯಕೆ. ಈ ಆಸೆ ಸ್ವತಃ ಜಿ ಕನ್ನಡಕ್ಕೂ ಇದೆ.
ವೀಕೆಂಡ್ ವಿತ್ ರಮೇಶ್’ ಮೊದಲ ಸೀಸನ್ ನಿಂದಲೇ ಜೀ ಕನ್ನಡ ವಾಹಿನಿ ರಾಹುಲ್ ದ್ರಾವಿಡ್ ಅವರನ್ನು ಸಾಧಕರ ಸೀಟ್​​ ಗೆ ಕರೆತರಲು ಪ್ರಯತ್ನ ಮಾಡುತ್ತಿದೆ. ಈ ಬಾರಿ ಕೂಡ ಪತ್ರಮುಖೇನ ಆಹ್ವಾನ ನೀಡಿದರೂ ದ್ರಾವಿಡ್ ಅವರು ಮಾತ್ರ ಮನಸ್ಸು ಮಾಡಿಲ್ಲ. ಆದ್ದರಿಂದ ಜಿ ಕನ್ನಡ ಟ್ವೀಟ್ ಮೂಲಕ ಅಭಿಯಾನ ಆರಂಭಿಸಿದೆ.
‘ನಾವೆಲ್ಲರೂ ಒಂದಾಗಿ ಒಗ್ಗಟ್ಟಿನಿಂದ #WWRDravid ನೊಂದಿಗೆ Retweet ಮಾಡುವ ಮೂಲಕ ರಾಹುಲ್ ದ್ರಾವಿಡ್’ರವರನ್ನು ಸಾಧಕರ ಸೀಟ್’ಗೆ ಕರೆತರುವ ಪ್ರಯತ್ನ ಮಾಡೋಣ” ಎಂದು ಜೀ ಕನ್ನಡ ಟ್ವೀಟ್ ಅಭಿಯಾನವನ್ನು ಆರಂಭಿಸಿದ್ದು, ವೀಕ್ಷಕರು #WWRDravid ಹ್ಯಾಶ್ ಟ್ಯಾಗ್ ಬಳಸಿ ರಿಟ್ವೀಟ್ ಮಾಡಿ ಅದನ್ನು ರಾಹಲ್ ದ್ರಾವಿಡ್ ಅವರಿಗೆ ತಲುಪುವಂತೆ ಮಾಡಿ ಎಂದು ಜಿ ಕನ್ನಡ ಕೇಳಿಕೊಂಡಿದೆ. ಇಂದಿನಿಂದ 4ನೇ ಆವೃತ್ತಿಯ ವೀಕ್ ಎಂಡ್ ವಿತ್ ರಮೇಶ್ ಶುರುವಾಗಿದೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...