ಇಡೀ ದೇಶದಲ್ಲೀಗ ಲೋಕಸಭಾ ಚುನಾವಣೆಯ ಸಡಗರ, ಸಂಭ್ರಮ. ಏಪ್ರಿಲ್ನ 11ರಂದು ಮೊದಲ ಹಂತದ ಮತದಾನ ನಡೆದಿತ್ತು. ಏಪ್ರಿಲ್ 18ರಂದು 2ನೇ ಹಂತದ ಮತದಾನ ನಡೆದಿತ್ತು. ಇಂದು 3ನೇ ಹಂತದ ಮತದಾನ ನಡೆಯುತ್ತಿದೆ. ರಾಜ್ಯದ ವಿಷಯಕ್ಕೆ ಬಂದರೆ ರಾಜ್ಯದಲ್ಲಿ ಏಪ್ರಿಲ್ 18ರಂದು ನಡೆದಿದ್ದು ಮೊದಲ ಹಂತದ ಚುನಾವಣೆ, ಇಂದು ನಡೆಯುತ್ತಿರುವುದು 2ನೇ ಹಂತದ ವೋಟಿಂಗ್.
ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಕೆಲವರು ವೈಯಕ್ತಿಕವಾಗಿ ಮುಂದಾಗಿದ್ದಾರೆ. ತಮ್ಮ ದುಡ್ಡಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಲಸು ಮುಂದಾಗಿದ್ದಾರೆ. ಅಂತರವರಲ್ಲಿ ಯಾದಗಿರಿಯ ಶಹಾಪುರ ನಗರದಲ್ಲಿನ ಅಮ್ಮ ಕ್ಯಾಂಟೀನ್ ಮಾಲೀಕ ಮಣಿಕಂಠ ಕೂಡ ಒಬ್ಬರು. ಅಲ್ಲಿನ ಅಮ್ಮ ಕ್ಯಾಂಟೀನ್ನ ಮಾಲೀಕ ಮಣಿಕಂಠ ಸ್ವಯಂ ಪ್ರೇರಿತರಾಗಿ ಮತದಾನ ಜಾಗೃತಿ ಮೂಡಿಸುತ್ತಿದ್ದಾರೆ. ಇಂದು ಮತದಾನ ಮಾಡಿ ಬಂದವರಿಗೆ ಹೊಟ್ಟೆ ತುಂಬಾ ಫ್ರೀ ಊಟ ನೀಡಲಿದ್ದಾರೆ.
ಮಣಿಕಂಠ ಅವರ ತಾಯಿಯ ನೆನಪಲ್ಲಿ ಅಮ್ಮ ಕ್ಯಾಂಟೀನ್ ಆರಂಭಿಸಿದ್ದು, ಇಂದು ಮತಹಾಕಿ ಬಂದು ಕೈ ಬೆರಳು ತೋರಿಸಿದರೆ ಇಲ್ಲಿ ಫ್ರೀ ಊಟ ಮಾಡಿಕೊಂಡು ಹೋಗಬಹುದು. ವೋಟ್ ಹಾಕಿ ಎಂದು ದುಡ್ಡು ಕೊಟ್ಟು ಮತ ಕೊಳ್ಳುವ ಜನಪ್ರತಿನಿಧಿಗಳ ಮುಂದೆ ಮತದಾನದ ಜಾಗೃತಿಗಾಗಿ ಮತಹಾಕಿ ಬಂದವರಿಗೆ ಉಚಿತ ಊಟ ಕೊಡುವ ಇಂಥಾ ವ್ಯಕ್ತಿಗಳು ತುಂಬಾ ಗ್ರೇಟ್ ಅನಿಸಿಕೊಳ್ಳುತ್ತಾರೆ. ಮತದಾನದ ಬಗ್ಗೆ ಜಾಗೃತಿ ಮೂಡಿಸಬೇಕಾಗಿರುವುದು ಬಹುಮುಖ್ಯ.
ವೋಟ್ ಮಾಡಿದ್ರೆ ಮಾತ್ರ ಈ ಹೋಟೆಲ್ನಲ್ಲಿ ಫ್ರೀ ಊಟ..!
Date: