ತಮಿಳುನಾಡು ಮಳೆಯಿಂದಾಗಿ ತತ್ತರಿಸಿದೆ. ಸದ್ಯ ಮಳೆ ಹಾನಿ ಪ್ರದೇಶಗಳಲ್ಲಿ ಪೊಲಿಸರು, ಎನ್ ಡಿಆರ್ ಎಫ್ ತಂಡವು ಕಾರ್ಯಚರಣೆ ನಡೆಸುತ್ತಿದ್ದು, ಜನರನ್ನು ಸುರಕ್ಷಿತ ಪ್ರದೇಶಕ್ಕೆ ರವಾನಿಸಲಾಗುತ್ತಿದೆ.
ಇನ್ನೂ ಮಳೆಯಲ್ಲಿಯೇ ಅಸ್ವಸ್ಥಗೊಂಡಿದ್ದ ವ್ಯಕ್ತಿಯನ್ನು ತಮ್ಮ ಭುಜದ ಮೇಲೆ ಹೊತ್ತು ಸಾಗಿ ಆಟೋದಲ್ಲಿ ಆಸ್ಪತ್ರೆಗೆ ಸೇರಿಸಿದ ಚೈನ್ನೈ ಪೊಲೀಸ್ ಇನ್ಸ್ ಪೆಕ್ಟರ್ ರಾಜೇಶ್ವಯನ್ನು ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಗೌರವಿಸಿದ್ದಾರೆ.
ರಾಜೇಶ್ವರಿ ಮಾನವೀಯ ಕಾರ್ಯವನ್ನು ಶ್ಲಾಘಿಸಿದ ಎಂಕೆ ಸ್ಚಾಲಿನ್, ಸರ್ಕಾರದಿಂದ ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಿದ್ದಾರೆ. ಅಲ್ಲದೆ ಕಿರಿಯ ಅಧಿಕಾರಿಯ ಮಾನವೀಯ ಕಾರ್ಯಕ್ಕೆ ಹಿರಿಯ ಅಧಿಕಾರಿಗಳೂ ಕೂಡ ಶ್ಲಾಘನೆ ವ್ಯಕ್ತಪಡಿಸಿದರು.
ಮಳೆ ಪೀಡಿತ ಚೆನ್ನೈನ ಟಿಪಿ ಚತ್ರಂ ಸ್ಮಶಾನದ ಬಳಿ ಈ ಘಟನೆ ನಡೆದಿದ್ದು, ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸೂರಿಲ್ಲದೇ ನೆಂದು ಅಸ್ವಸ್ಥನಾಗಿ ಬಿದ್ದಿದ್ದ ವ್ಯಕ್ತಿಯೊಬ್ಬರನ್ನು ಮಹಿಳಾ ಪೆÇಲೀಸ್ ಅಧಿಕಾರಿ ರಾಜೇಶ್ವರಿ ಸಹಾಯದಿಂದ ಆಸ್ಪತ್ರೆಗೆ ಸೇರಿಸಲಾಗಿದೆ.
ಚೆನ್ನೈ ನ ಪ್ರಮುಖ ಪ್ರದೇಶಗಳಾದ ಟಿ ನಗರ್, ಅಶೋಕ್ ನಗರ್, ಕೆಕೆ ನಗರ್, ತೇಯ್ನಮ್ಪೇಟ್ ಗಳು ಜಲಾವೃತಗೊಂಡಿವೆ. ಒಂದೇ ದಿನ 502 ರಸ್ತೆಗಳು ಜಲಾವೃತಗೊಂಡಿದ್ದು, ಸ್ಥಳೀಯ ಆಡಳಿತ ತೆರೆದಿರುವ ಸಹಾಯವಾಣಿಗೆ 3,800 ದೂರುಗಳು ಗುರುವಾರ ಒಂದೇ ದಿನ ಬಂದಿದ್ದು, ಈ ಮಳೆಗಾಲದ ಋತುವಿನಲ್ಲಿ ಬಂದಿರುವ ಗರಿಷ್ಠ ದೂರುಗಳಾಗಿವೆ.