ವ್ಯಕ್ತಿಯೊಬ್ಬನ ಹೊಟ್ಟೆಯೊಳಗೆ ಇದ್ದವು ಬರೋಬ್ಬರಿ 116 ಕಬ್ಬಿಣದ ಮೊಳೆಗಳು

Date:

ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿ ಇದ್ದ ಬರೋಬ್ಬರಿ 116 ಕಬ್ಬಿಣದ ಮೊಳೆಗಳು ಹಾಗೂ ವೈರ್ ಗಳನ್ನು ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದಿದ್ದಾರೆ.

ಭೋಲಾ ಶಂಕರ್(42) ಎಂಬುವವರು ಭಾನುವಾರದಂದು ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ವೈದ್ಯರು ಅವರ ಎಕ್ಸ್-ರೇ ಮಾಡಿದಾಗ ಹೊಟ್ಟೆಯಲ್ಲಿ ಮೊಳೆಗಳು ಹಾಗೂ ವೈರ್ ಗಳು ಇರುವುದು ತಿಳಿದಿದೆ.

ಆದರೆ ತೋಟವೊಂದರಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಭೋಲಾ ಶಂಕರ್ ಹೊಟ್ಟೆಯೊಳಗೆ ಈ ಕಬ್ಬಿಣದ ವಸ್ತುಗಳು ಹೇಗೆ ಸೇರಿತು ಎನ್ನುವ ಬಗ್ಗೆ ಆತನಿಗಾಗಲಿ, ಆತನ ಮನೆಯವರಿಗಾಗಲಿ ಗೊತ್ತಿರಲಿಲ್ಲ ಎಂಬುದೇ ಒಂದು ವಿಚಿತ್ರ ಸಂಗತಿ.

ಈ ಬಗ್ಗೆ ಮಾತನಾಡಿರುವ ವೈದ್ಯರು, ರೋಗಿಯ ಹೊಟ್ಟೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಮೊಳೆಗಳು ಪತ್ತೆಯಾಗಿರುವುದು ಅಚ್ಚರಿ ಮೂಡಿಸಿದೆ. ಸದ್ಯ ಈ ಮೊಳೆಗಳು ಕರಳುಗಳನ್ನು ಪ್ರವೇಶಿಸಿರಲಿಲ್ಲ. ಏನಾದರೂ ಮೊಳೆಗಳು ಕರಳುಗಳಲ್ಲಿ ಹೊಕ್ಕಿದ್ದರೆ ಶಸ್ತ್ರಚಿಕಿತ್ಸೆ ಮಾಡುವುದಕ್ಕೆ ಕಷ್ಟವಾಗುತಿತ್ತು. ರೋಗಿಯ ಹೊಟ್ಟೆಯಿಂದ ಎಲ್ಲಾ ಕಬ್ಬಿಣದ ಮೊಳೆಗಳು ಹಾಗೂ ವೈರ್ ಗಳನ್ನು ಹೊರತೆಗೆಯುವುದಕ್ಕೆ ಒಂದೂವರೆ ಗಂಟೆ ಸಮಯ ಬೇಕಾಯ್ತು. ಅದರಲ್ಲಿ ಬಹುತೇಕ ಮೊಳೆಗಳು 6.5 ಸೆ.ಮೀ ಉದ್ದವಿತ್ತು ಎಂದು ತಿಳಿಸಿದರು.

Share post:

Subscribe

spot_imgspot_img

Popular

More like this
Related

ಒತ್ತಡದಿಂದ ಮುಕ್ತಿ ಪಡೆಯಲು ಈ ಪಾನೀಯಗಳನ್ನು ಕುಡಿಯಿರಿ

ಒತ್ತಡದಿಂದ ಮುಕ್ತಿ ಪಡೆಯಲು ಈ ಪಾನೀಯಗಳನ್ನು ಕುಡಿಯಿರಿ ಇಂದಿನ ವೇಗದ ಜೀವನದಲ್ಲಿ ಬಹುತೇಕ...

ನ.16ಕ್ಕೆ ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಗ್ರೀನ್‌ ಸಿಗ್ನಲ್!‌ 

ನ.16ಕ್ಕೆ ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಗ್ರೀನ್‌ ಸಿಗ್ನಲ್!‌  ಕಲಬುರಗಿ: ಕಲಬುರಗಿ ಜಿಲ್ಲೆಯ...

ನಾನು ಯಾವ ಬಾವುಟ ಹಿಡಿಬೇಕು ಅಂತ ಮುಂದೆ ತೀರ್ಮಾನ ಮಾಡುತ್ತೇನೆ: ಕೆ.ಎನ್. ರಾಜಣ್ಣ

ನಾನು ಯಾವ ಬಾವುಟ ಹಿಡಿಬೇಕು ಅಂತ ಮುಂದೆ ತೀರ್ಮಾನ ಮಾಡುತ್ತೇನೆ: ಕೆ.ಎನ್....

Gold Price Today: ಮತ್ತೆ ಏರಿಕೆಯತ್ತ ಚಿನ್ನದ ಬೆಲೆ! ಹೀಗಿದೆ ಇಂದಿನ ಗೋಲ್ಡ್ ರೇಟ್

Gold Price Today: ಮತ್ತೆ ಏರಿಕೆಯತ್ತ ಚಿನ್ನದ ಬೆಲೆ! ಹೀಗಿದೆ ಇಂದಿನ...