ದುಷ್ಚಟಗಳು ಜೀವ ಹಾಗೂ ಜೀವನ ಎರಡನ್ನೂ ಹಾಳು ಮಾಡುತ್ತವೆ ಎಂದು ಎಷ್ಟೇ ಜಾಗೃತಿ ಮೂಡಿಸಿದರೂ ಕೆಲವಲ್ಲಿ ಜಾಗೃತಿ ಮೂಡವುದೇ ಇಲ್ಲ. ಕುಡುಕ ಪೋಷಕರ ಬೇಜಬ್ದಾರಿಯಿಂದ ಮಕ್ಕಳು ಮಣ್ಣು ತಿಂದು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ನಮ್ಮ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಮಹೇಶ್ ಮತ್ತು ನಾಗಮಣಿ ದಂಪತಿಯ 3 ವರ್ಷದ ಮಗು ಸಂತೋಷ್ ಹಾಗೂ ಆ ನಾಗಮಣಿಯ ಸೋದರಿಯ 2 ವ4ರ್ಷದ ಮಗು ವೆನ್ನೆಲಾ ಮಣ್ಣು ತಿಂದು ಅಸುನೀಗಿದ ಪುಟಾಣಿ ಕಂದಮ್ಮಗಳು.
ಮಹೇಶ್ ಹಾಗೂ ನಾಗಮಣಿ ದಂಪತಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕದ್ರಿ ಮಂಡಲದ ಕುಮ್ಮಾರವಂಡಲಪಲ್ಲೆ ಗ್ರಾಮಕ್ಕೆ ವಲಸೆ ಹೋಗಿ ಅಲ್ಲಿಯೇ ಕೂಲಿ-ಗೀಲಿ ಮಾಡುತ್ತಾ ಬದುಕು ನಡೆಸುತ್ತಿದ್ದಾರೆ. ಇವರೊಡನೆ ಇವರ 5 ಮಕ್ಕಳು, ನಾಗಮಣಿ ತಾಯಿ ಹಾಗೂ ಸೋದರಿಯ ಮಗು ವಾಸವಿತ್ತು. ನಾಗಮಣಿ ಮತ್ತಾಕೆಯ ಗಂಡ ಕೆಲಸಕ್ಕೆ ಹೋಗುತ್ತಿದ್ದರೆ. ನಾಗಮಣಿಯ ತಾಯಿ ಮಕ್ಕಳನ್ನು ನೋಡಿಕೊಂಡು ಮನೆಯಲ್ಲಿದ್ದರು. ಮಹೇಶ್ ಮತ್ತು ನಾಗಮಣಿ ಮತ್ತವಳ ತಾಯಿ ಮದ್ಯ ವ್ಯಸನಿಗಳು. ಮಕ್ಕಳಿಗೆ ಸರಿಯಾಗಿ ಊಟ ಹಾಕುತ್ತಿರಲಿಲ್ಲ. ಹಸಿವಿನಿಂದ ಮಕ್ಕಳು ಮಣ್ಣು ತಿನ್ನುತ್ತಿದ್ದವು. 6 ತಿಂಗಳ ಹಿಂದೆ ಸಂತೋಷ್ ಮೃತಪಟ್ಟಿದ್ದ.ಆಗ ಯಾರಿಗೂ ಗೊತ್ತಾಗದಂತೆ ಹೂತು ಹಾಕಿದ್ದರು. ಈಗ ವೆನ್ನೆಲಾ ಎನ್ನುವ ಮಗು ಅಂದರೆ ನಾಗಮಣಿಯ ಸೋದರಿ ಮಗು ಮೃತಪಟ್ಟಿದೆ.
ವ್ಯಸನಿ ಪೋಷಕರದೆಸೆಯಿಂದ ಆಂಧ್ರದಲ್ಲಿ ಮಣ್ಣು ತಿಂದು ಸಾವನ್ನಪ್ಪಿದ ಕರ್ನಾಟಕದ ಮಕ್ಕಳು..!
Date: