ಶಂಕರ್ ಅಶ್ವಥ್ ಅವರಿಗೆ ಊಟಕ್ಕೂ ದುಡ್ಡಿರಲಿಲ್ಲ! ಸಹಾಯ ಮಾಡಿದ್ದು ಆ ನಟ!!

Date:

ಖ್ಯಾತ ನಟ ಅಶ್ವಥ್ ಅವರ ಮಗ ಶಂಕರ್ ಅಶ್ವಥ್ ಅವರು ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಆಗಮಿಸಿದ್ದಾರೆ. ಅಶ್ವತ್ಥ್ ಅವರಂತಹ ದೊಡ್ಡ ನಟನ ಮಗನಾಗಿರುವ ಶಂಕರ್ ಅಶ್ವತ್ಥ್ ಅವರು ತುಂಬ ಶ್ರೀಮಂತರಾಗಿರುತ್ತಾರೆ ಎಂದು ಎಲ್ಲರೂ ಅಂದುಕೊಂಡಿರುತ್ತಾರೆ ,  ಹೌದು ಖ್ಯಾತ ನಟನ ಮಗ ಅವರಿಗೇನು ಕಮ್ಮಿ ಶ್ರೀಮಂತರು ಬಿಡಿ ಎಂದು ಊಹಿಸಿ ಕೊಳ್ಳುವವರೇ ಹೆಚ್ಚು ಆದರೆ ಶಂಕರ್ ಅಶ್ವತ್ಥ್ ಅವರ ಜೀವನ ಅಷ್ಟು ಸುಲಭವಲ್ಲ ಒಂದೊತ್ತಿನ ಊಟಕ್ಕೂ ಸಹ ಕಷ್ಟ ಎದುರಾಗಿತ್ತು.

 

 

ಹೌದು ಶಂಕರ್ ಅಶ್ವತ್ಥ್ ಅವರಿಗೆ ಸಿನಿಮಾದಲ್ಲಿ ಆಫರ್ ಗಳು ಅಷ್ಟಾಗಿ ಬರಲಿಲ್ಲ ಯಾವ ಚಿತ್ರಕ್ಕೂ ಸಹಿ ಅವರನ್ನ ತೆಗೆದುಕೊಳ್ಳದಿರುವ ವಂತಹ ಪರಿಸ್ಥಿತಿ ಬಂದುಬಿಟ್ಟಿತ್ತು. ಸಿನಿಮಾ ಅಫರ್ ಗಳಿಲ್ಲದೆ ಕುಟುಂಬ ಸಾಗಿಸಲು ತೀರ ಕಷ್ಟ ಪಡುತ್ತಿದ್ದ ಶಂಕರ್ ಅಶ್ವತ್ಥ್ ಅವರು ಕೊನೆಗೆ ಆರಿಸಿಕೊಂಡಿದ್ದು ಕ್ಯಾಬ್ ಡ್ರೈವರ್ ವೃತ್ತಿ. ಹೌದು ಶಂಕರ್ ಅಶ್ವತ್ಥ್ ಅವರು ಕ್ಯಾಬ್ ಡ್ರೈವರ್ ಆಗಿ ಜೀವನ ನಡೆಸುತ್ತಿದ್ದರು ಇಂದಿಗೂ ಸಹ ಅವರು ಕ್ಯಾಬ್ ಡ್ರೈವರ್ ಆಗಿಯೇ ಜೀವನ ಸಾಗಿಸುತ್ತಾ ಕೆಲವೊಂದಷ್ಟು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

 

 

ಹೀಗೆ ಹಿಂದೊಮ್ಮೆ ಶಂಕರ್ ಅಶ್ವತ್ಥ್ ಅವರಿಗೆ ಅನಾರೋಗ್ಯ ಉಂಟಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅಂತಹ ಸಂದರ್ಭದಲ್ಲಿ ಹಣಕಾಸಿನ ಕೊರತೆ ಎದುರಾಗಿತ್ತು. ಹೀಗೆ ದುಡ್ಡಿಲ್ಲದೆ ಆಸ್ಪತ್ರೆಯಲ್ಲಿ ಮಲಗಿದ್ದ ಶಂಕರ್ ಅಶ್ವತ್ಥ್ ಅವರ ಚಿಕಿತ್ಸೆ ಮುಂದುವರಿಯಲು ಯಾರೊಬ್ಬರೂ ಸಹ ಸಹಾಯ ಮಾಡಲು ಮುಂದೆ ಬರಲಿಲ್ಲ.  ಆಗ ನಟ ಶಂಕರ್ ಅಶ್ವಥ್ ಅವರಿಗೆ ಕರೆ ಮಾಡಿ ನಿಮ್ಮ ಜೊತೆ ನಾನಿದ್ದೇನೆ ನಿಮ್ಮ ಚಿಕಿತ್ಸೆಗೆ ಏನೇ ಸಹಾಯ ಬೇಕಾದರೂ ನನ್ನನ್ನು ಕೇಳಿ ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದರು.

 

 

ಹೀಗೆ ಈ ಹಿಂದೆ ಶಂಕರ್ ಅಶ್ವತ್ಥ್ ಅವರು ಕಷ್ಟದಲ್ಲಿದ್ದಾಗ ನಟ ಕಿಚ್ಚ ಸುದೀಪ್ ಅವರು ಮಾಡಿದ ಮಹಾ ಸಹಾಯವನ್ನು ಬಿಗ್ ಬಾಸ್ ವೇದಿಕೆ ಮೇಲೆ ನೆನೆದರು. ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದ ಶಂಕರ್ ಅಶ್ವತ್ಥ್ ಅವರು ತದನಂತರ ಕ್ಯಾಬ್ ಡ್ರೈವರ್ ಆಗಿ ಸೇವೆ ಸಲ್ಲಿಸತೊಡಗಿದರು , ಹೀಗೆ ನಟ ಶಂಕರ್ ಅಶ್ವತ್ಥ್ ಅವರು ಕ್ಯಾಬ್ ಡ್ರೈವರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದನ್ನು ಕಂಡ ಕೆಲ ಸಿನಿಮಾ ನಿರ್ದೇಶಕ ಮತ್ತು ನಿರ್ಮಾಪಕರು ಗಳು ಅವರನ್ನು ಸಂಪರ್ಕಿಸಿ ಒಂದಷ್ಟು ಚಿತ್ರಗಳಲ್ಲಿ ಅವರಿಗೆ ಅಭಿನಯಿಸಲು ಅವಕಾಶ ನೀಡಿದರು. ನೋಡಿ ಎಂತಹ ದೊಡ್ಡ ನಟ ಅಶ್ವತ್ಥ್ ಅವರ ಮಗನಿಗೆ ಚಿತ್ರರಂಗದಲ್ಲಿ ಬದುಕಲು ತೀರಾ ಕಷ್ಟವಾಗಿ ಎಷ್ಟೆಲ್ಲ ಕಷ್ಟಪಟ್ಟರು ನಿಜಕ್ಕೂ ಶಂಕರ್ ಅಶ್ವತ್ಥ್ ಅವರ ಜೀವನ ಬಲು ಕಠಿಣವಾಗಿತ್ತು ಎಂದೇ ಹೇಳಬಹುದು..

Share post:

Subscribe

spot_imgspot_img

Popular

More like this
Related

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ...

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು ಮೈಸೂರು:ಸ್ನಾನದ ವೇಳೆ...

ತುಳಸಿ ಗಿಡದಲ್ಲಿನ ಈ ಬದಲಾವಣೆಗಳು ನೀಡುವ ಸೂಚನೆಗಳೇನು..?

ತುಳಸಿ ಗಿಡದಲ್ಲಿನ ಈ ಬದಲಾವಣೆಗಳು ನೀಡುವ ಸೂಚನೆಗಳೇನು..? ಮನೆಯ ಅಂಗಳದಲ್ಲಿ ಬೆಳೆದ ತುಳಸಿ...

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ: ಶಿವಾನಂದ ಪಾಟೀಲ್

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ:...