ಶಾಕಿಂಗ್ ನ್ಯೂಸ್..! ಪ್ರಚಾರದ ವೇಳೆಯೇ ಮೃತಪಟ್ಟ ನಟ !

admin
By admin
0 Min Read

ತಮಿಳು ನಟ ಹಾಗೂ ಮಾಜಿ ಸಂಸದರಾಗಿರುವ ಎಐಎಡಿಎಂಕೆ ನಾಯಕ ಜಿ.ಕೆ. ರಿತೇಶ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

46 ವರ್ಷದ ರಿತೇಶ್ ತಮಿಳುನಾಡಿನ ರಾಮನಾಥಪುರಂನಲ್ಲಿ ಎಐಎಡಿಎಂಕೆ ಮೈತ್ರಿಕೂಟದ ಅಭ್ಯರ್ಥಿ ಪರವಾಗಿ ಪ್ರಚಾರದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಪಕ್ಷದ ಮುಖಂಡರು ಸಮೀಪದ ಆಸ್ಪತ್ರೆಗೆ ಸಾಗಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಡಿಎಂಕೆ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದ್ದ ರಿತೇಶ್ 2009ರ ಲೋಕಸಭೆ ಚುನಾವಣೆಯಲ್ಲಿ ಜಯಗಳಿಸಿದ್ದರು. 2014ರ ಏಪ್ರಿಲ್ ನಲ್ಲಿ ಎಐಎಡಿಎಂಕೆ ಸೇರ್ಪಡೆಯಾಗಿದ್ದರು. ರಾಮನಾಥಪುರಂನಲ್ಲಿ ಮೈತ್ರಿಕೂಟದ ಅಭ್ಯರ್ಥಿ ಪರವಾಗಿ ಪ್ರಚಾರದಲ್ಲಿ ಭಾಗವಹಿಸಿದ್ದ ವೇಳೆ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ.ನಾಯಗನ್’, ‘ಪೆನ್ ಸಿಂಗಮ್’, ‘ಎಲ್.ಕೆ.ಜಿ.’ ಮೊದಲಾದ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ.

Share This Article