ಬೆಂಗಳೂರು ಹೆಚ್.ಎ.ಎಲ್. ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೊಬೈಲ್ ಬ್ಲಾಸ್ಟ್ ಆಗಿ ಯುವಕನ ಸ್ಥಿತಿ ಗಂಭೀರವಾಗಿದೆ.
ಮೊಬೈಲ್ ಚಾರ್ಜ್ ಗೆ ಹಾಕಿ ವಿಡಿಯೋ ಕಾಲ್ ಮಾಡುತ್ತಿದ್ದ ಸಂದರ್ಭದಲ್ಲೇ ಮೊಬೈಲ್ ಸ್ಫೋಟಗೊಂಡು ಯುವಕನ ಮುಖ, ಕೈಗೆ ಗಂಭೀರ ಗಾಯವಾಗಿದೆ. ಸರ್ಜರಿ ಮಾಡಿದರೂ, ಎಡಗೈನ 3 ಬೆರಳುಗಳನ್ನು ಯುವಕ ಕಳೆದುಕೊಂಡಿದ್ದಾನೆ ಎನ್ನಲಾಗಿದೆ.
ಮೊಬೈಲ್ ಚಾರ್ಜ್ ಗೆ ಹಾಕಿ ಮಾತನಾಡಿದ್ದೇ ಸ್ಪೋಟಗೊಳ್ಳಲು ಕಾರಣವೆಂದು ಹೇಳಲಾಗಿದ್ದು, ಹೆಚ್.ಎ.ಎಲ್. ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.