ಶಾರುಖ್ ಖಾನ್ KKR ಪಾರ್ಟಿಯಲ್ಲಿ ಎಲ್ಲರಿಗೂ ಡ್ರಗ್ಸ್!!

Date:

ಬಾಲಿವುಡ್‌ನಲ್ಲಿ ಮತ್ತೆ ಡ್ರಗ್ಸ್ ಪ್ರಕರಣ ಸದ್ದು ಮಾಡುತ್ತಿದೆ. ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನ ಬಾಲಿವುಡ್ ನಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಇದೀಗ ಶಾರುಖ್ ಬಗ್ಗೆ ನಟಿ ಶರ್ಲಿನ್ ಚೋಪ್ರಾ ಹೇಳಿದ್ದ ಹೇಳಿಕೆ ವೈರಲ್ ಆಗಿದೆ. ಶಾರುಖ್ ಖಾನ್ ನೀಡುತ್ತಿದ್ದ ಪಾರ್ಟಿಯಲ್ಲಿ ಸ್ಟಾರ್​ನಟರ ಪತ್ನಿಯರು ಕೂಡ ಡ್ರಗ್ಸ್​ಸೇವಿಸುತ್ತಾರೆ ಎಂದು ನಟಿ ಶೆರ್ಲಿನ್​ಚೋಪ್ರಾ ಬಹಳ ಹಿಂದೆಯೇ ಹೇಳಿದ್ದರು. ಸುಶಾಂತ್​ಸಿಂಗ್​ರಜಪೂತ್​ನಿಧನರಾದ ಬಳಿಕ ಬಾಲಿವುಡ್​ನಲ್ಲಿರುವ ಡ್ರಗ್ಸ್​ಜಾಲದ ಬಗ್ಗೆ ತನಿಖೆ ಆರಂಭ ಆಯಿತು. ಆಗ ನೀಡಿದ ಸಂದರ್ಶನದಲ್ಲಿ ಶೆರ್ಲಿನ್​ಚೋಪ್ರಾ ಅವರು ಕೆಲವು ಶಾಕಿಂಗ್​ಮಾಹಿತಿ ಹಂಚಿಕೊಂಡಿದ್ದರು. ಶಾರುಖ್​ಖಾನ್​ನೀಡಿದ್ದ ಪಾರ್ಟಿಯಲ್ಲಿ ನಶೆ ತುಂಬಿ ತುಳುಕುತ್ತಿತ್ತು ಎಂದು ಶೆರ್ಲಿನ್ ಬಹಿರಂಗ ಪಡಿಸಿದ್ದರು.

ಹಳೆಯ ಸಂದರ್ಶನದ ವಿಡಿಯೋವನ್ನು ಶೆರ್ಲಿನ್​ಚೋಪ್ರಾ ಈಗ ಮತ್ತೆ ಶೇರ್​ಮಾಡಿದ್ದಾರೆ. “ಪಾರ್ಟಿಯಲ್ಲಿ ಡ್ಯಾನ್ಸ್​ಮಾಡುತ್ತ ನನಗೆ ಸುಸ್ತಾಯಿತು. ಹಾಗಾಗಿ ಶೌಚಾಲಯಕ್ಕೆ ತೆರಳಿದೆ. ಬಾಗಿಲು ತೆರೆದು ನೋಡಿದಾಗ ನನಗೆ ಶಾಕ್​ಆಯಿತು. ನಾನೇನಾದರೂ ತಪ್ಪಾದ ಜಾಗಕ್ಕೆ ಬಂದು ಬಿಟ್ನಾ ಎಂದು ಅನುಮಾನ ಬಂತು. ಹಾಗೇನೂ ಇಲ್ಲ, ಅದು ಸರಿಯಾದ ಜಾಗವೇ ಆಗಿತ್ತು. ಅಲ್ಲಿ ಸ್ಟಾರ್​ನಟರ ಹೆಂಡತಿಯರು ಕನ್ನಡಿ ಮುಂದೆ ನಿಂತುಕೊಂಡು ಕೊಕೇನ್​ಸೇವಿಸುತ್ತಿದ್ದರು” ಎಂದು ಶೆರ್ಲಿನ್​ಆ ಸಂದರ್ಶನದಲ್ಲಿ ಹೇಳಿದ್ದರು.

“ಅಂಥ ಒಂದು ದೃಶ್ಯ ನೋಡಿದಾಗ ನನಗೆ ಶಾಕ್​ಆಯಿತು. ಆದರೆ ಅವರ ಕಡೆಗೆ ಸುಮ್ಮನೆ ಸ್ಮೈಲ್​ಮಾಡಿ ಅದನ್ನೆಲ್ಲ ನಿರ್ಲಕ್ಷ ಮಾಡಿದೆ. ಅವರ ಪಾಡಿಗೆ ಅವರು ಎಂಜಾಯ್​ಮಾಡುತ್ತಿದ್ದರು. ಶಾರುಖ್​ಖಾನ್​ಮತ್ತು ಅವರ ಸ್ನೇಹಿತರನ್ನು ಭೇಟಿ ಮಾಡಿದ ಬಳಿಕ ನಾನು ಅಲ್ಲಿಂದ ಜಾಗ ಖಾಲಿ ಮಾಡಿದೆ. ಬಾಲಿವುಡ್​ನಲ್ಲಿ ಎಂಥ ಪಾರ್ಟಿಗಳು ಆಗುತ್ತವೆ ಅಂತ ಅಂದು ನನಗೆ ಅರ್ಥವಾಯಿತು” ಎಂದು ಶೆರ್ಲಿನ್ ಹೇಳಿದ್ದರು

Share post:

Subscribe

spot_imgspot_img

Popular

More like this
Related

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿಬೆಂಗಳೂರು: ನಗರದ...

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ ಸಿಸಿಬಿಗೆ ದೂರು

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ...

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ ಕಷ್ಟ ತಪ್ಪಿದ್ದಲ್ಲ!

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ...

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..?

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..? ಬೆಂಗಳೂರು:...