ಡ್ರಗ್ಸ್ ಪ್ರಕರಣದಲ್ಲಿ ಬಂಧಿಯಾಗಿರುವ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಮೊಬೈಲ್ ಚಾಟ್‌ನಿಂದ ಕೆಲವು ಆಘಾತಕಾರಿ ಅಂಶಗಳು ಬಯಲಿಗೆ ಬಂದಿದೆ ಎಂದು ಎನ್‌ಸಿಬಿ ಹೇಳಿದೆ.
ಅಕ್ಟೋಬರ್ 03ರಂದು ಆರ್ಯನ್ ಖಾನ್ ಹಾಗೂ ಇತರ ಇಬ್ಬರು ಬಂಧಿತರನ್ನು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರುಪಡಿಸಿದಾಗಲೇ ಎನ್‌ಸಿಬಿಯು ತನಿಖೆ ವೇಳೆ ಕೆಲವು ಆಘಾತಕಾರಿ ಅಂಶಗಳು ಬಯಲಾಗಿವೆ, ಹೆಚ್ಚುವರಿ ತನಿಖೆಯ ಅಗತ್ಯವಿದೆ ಎಂದು ಹೇಳಿತ್ತು.

ಅಂತೆಯೇ ಆರ್ಯನ್ ಖಾನ್ ಹಾಗೂ ಅರ್ಬಾಜ್ ಸೇಠ್ ಮರ್ಚೆಂಟ್‌ರ ವಿಚಾರಣೆ ವೇಳೆ ಅವರ ವಾಟ್ಸ್‌ಆಪ್ ಚಾಟ್ ಹಾಗೂ ಬ್ರೌಸರ್ ಹಿಸ್ಟರಿಯಿಂದ ಕೆಲವು ಆಘಾತಕಾರಿ ಅಂಶಗಳು ಎನ್‌ಸಿಬಿಯ ಗಮನಕ್ಕೆ ಬಂದಿವೆ.
ಡಾರ್ಕ್ ವೆಬ್‌ಗೆ ಸಂಬಂಧ ಹೊಂದಿದ್ದಾಗಿ ಹಾಗೂ ಬಿಟ್‌ಕಾಯಿನ್ ಕುರಿತಾಗಿಯೂ ಕೆಲವು ಅಂಶಗಳು ಪತ್ತೆಯಾಗಿವೆ ಎಂದು ಎನ್‌ಸಿಬಿ ಹೇಳಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ.

”ನಾನು ಈ ಪ್ರಕರಣದಲ್ಲಿ ಇನ್ನಷ್ಟು ತನಿಖೆ ಮಾಡಬೇಕಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಹೊಸ ಬಂಧನಗಳನ್ನು ಮಾಡಿದ್ದೇವೆ. ಇಬ್ಬರು ಮುಖ್ಯ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ್ದೇವೆ. ತನಿಖೆ ವೇಳೆ ಆರೋಪಿಗಳಿಗೆ ಡಾರ್ಕ್ ವೆಬ್ ಹಾಗೂ ಬಿಟ್‌ಕಾಯಿನ್ ಸಂಬಂಧ ಇರುವುದಾಗಿ ಗೊತ್ತಾಗಿದೆ. ಪ್ರಕರಣ ಸಾಕಷ್ಟು ಗಂಭೀರತೆ ಪಡೆದುಕೊಂಡಿದೆ” ಎಂದು ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಹೇಳಿದ್ದಾರೆ.






