ಬಾಲಿವುಡ್ ಬಾದ್ ಶಾ, ಕಿಂಗ್ ಖಾನ್ ಶಾರೂಖ್ ಖಾನ್ ಭಾರತೀಯ ಚಿತ್ರರಂಗ ಕಂಡ ಅದ್ಭುತ ನಟ. ಲೆಕ್ಕವಿಲ್ಲದಷ್ಟು ಅಭಿಮಾನಿಗಳನ್ನು ಸಂಪಾದನೆ ಮಾಡಿರುವ ಜನಮೆಚ್ಚಿದ ಸ್ಟಾರ್. ಇವರ ಮಗ ಆರ್ಯನ್ ಖಾನ್ ಸಿನಿಮಾ ರಂಗಕ್ಕೆ ಎಂಟ್ರಿಕೊಡಲು ರೆಡಿಯಾಗಿದ್ದಾರೆ.
ಆರ್ಯನ್ ತಂದೆಯಂತೆ ನಟನಾಗಿ, ಹೀರೋ ಆಗಿ ಸಿನಿಮಾ ರಂಗ ಪ್ರವೇಶ ಮಾಡುತ್ತಿಲ್ಲ. ಅವರು ಡೈರೆಕ್ಟರ್ ಆಗಲು ಹೊರಟಿದ್ದಾರೆ. ಕರಣ್ ಜೋಹರ್ ಅವರ ಹೊಸ ಸಿನಿಮಾಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಲು ರೆಡಿಯಾಗಿದ್ದಾರೆ ಆರ್ಯನ್ ಖಾನ್.
ಆರ್ಯನ್ ಖಾನ್ ಗೆ ನಟನೆಗಿಂತಾ ನಿರ್ದೇಶನದಲ್ಲೇ ಆಸಕ್ತಿ ಹೆಚ್ಚಂತೆ. ಅದಕ್ಕೆ ಈಗ ಮೊದಲ ಹಂತವಾಗಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಲು ಮುಂದಾಗಿದ್ದಾರೆ. ತೆರೆಮುಮದೆ ಬರುವ ಮುನ್ನ ತೆರೆಯ ಹಿಂದೆಯೂ ಕೆಲಸ ಮಾಡಲಿ ಎಂದು ಶಾರೂಖ್ ಖಾನ್ ಸಹ ತುಂಬಾ ಹೆಮ್ಮೆ ಮತ್ತು ಸಂತೋಷ ಪಟ್ಟಿದ್ದಾರಂತೆ.