ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ ಕೊಟ್ಟ ಶಿಕ್ಷಣ ಸಚಿವ

1
41

ಶಾಲಾ ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದು, ಮೊಟ್ಟೆ ಜತೆ ಬಾಳೆ ಹಣ್ಣು ನೀಡುತ್ತಿದ್ದೇವೆ. ಇನ್ನು ಪ್ರೋಟೀನ್‌ ಯುಕ್ತ ಪದಾರ್ಥ ಆಯ್ಕೆ ಮಾಡುತ್ತಿದ್ದು, ತಜ್ಞರು ಒಪ್ಪಿದರೆ ಮುಂದಿನ ದಿನಗಳಲ್ಲಿ ಜಾರಿ ಮಾಡುತ್ತೇವೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ತಿಳಿಸಿದ್ದಾರೆ. 

ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಶಾಲೆಯಲ್ಲಿ ಮೊಟ್ಟೆ ನೀಡುವ ವಿವಾದ ಬಗ್ಗೆ ಪ್ರತಿಕ್ರಿಯಿಸಿದರು. ‘ಅಪೌಷ್ಟಿಕತೆಯಿಂದ ಮಕ್ಕಳು ತುಂಬಾ ಒದ್ದಾಡುತ್ತಿವೆ. ಹಾಗಾಗಿ ಮಕ್ಕಳಿಗೆ ಪ್ರೋಟೀನ್‌ಗಾಗಿ ಮೊಟ್ಟೆ ನೀಡಲಾಗುತ್ತಿದೆ. ಶಾಲೆಯಲ್ಲಿ ಮಕ್ಕಳಿಗೆ ಮೊಟ್ಟೆ ತಿನ್ನಲು ಒತ್ತಡ ಹೇರಿಲ್ಲ. ಮಕ್ಕಳಿಗೆ ಮೊಟ್ಟೆ ಜತೆ ಬಾಳೆ ಹಣ್ಣು ಕೂಡ ಕೊಡುತ್ತಿದ್ದೇವೆ. ಈ ಬಗ್ಗೆ ತಜ್ಞರು ಸಹ ಸಲಹೆ ನೀಡಿದ್ದಾರೆ. ಇನ್ನು ಪ್ರೋಟೀನ್‌ ಯುಕ್ತ ಪದಾರ್ಥ ಆಯ್ಕೆ ಮಾಡುತ್ತಿದ್ದೇವೆ. ತಜ್ಞರು ಒಪ್ಪಿದರೆ ಮುಂದಿನ ದಿನಗಳಲ್ಲಿ ಜಾರಿ ಮಾಡುತ್ತೇವೆ’ ಎಂದರು.

 

1 COMMENT

LEAVE A REPLY

Please enter your comment!
Please enter your name here